ನವದೆಹಲಿ: ತಮ್ಮ ಮುಂಬರುವ ಚಿತ್ರ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ'' ಸೆನ್ಸಾರ್ ಮಂಡಳಿಯಿಂದ ಮೂರು ಕಡೆಗಳಲ್ಲಿ ದೃಶ್ಯಗಳನ್ನು ತೆಗೆದು ಹಾಕಿ ಒಪ್ಪಿಗೆ ನೀಡಿದೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆನ್ಸಾರ್ ಬೋರ್ಡ್ 8 ಅಥವಾ 9 ಕಡೆಗಳಲ್ಲಿ ದೃಶ್ಯಗಳನ್ನು ತೆಗೆಯುವಂತೆ ಸೂಚಿಸಿದೆ ಎಂದು ವರದಿಗಳನ್ನು ಓದಿದೆನು. ಆದರೆ ಅದು ಸುಳ್ಳು ವರದಿ. ಚಿತ್ರಕ್ಕೆ ಮೂರು ಕಡೆಗಳಲ್ಲಿ ಸಂಭಾಷಣೆಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಚಿತ್ರವನ್ನು ತೋರಿಸಲು ವಿಶೇಷ ಪ್ರದರ್ಶನ ಏರ್ಪಡಿಸಲಾಗುತ್ತದೆಯೇ ಎಂದು ಕೇಳಿದ್ದಕ್ಕೆ ನನಗೆ ಪ್ರಧಾನಿಯವರಿಗೆ ತೋರಿಸಬೇಕೆಂದು ಆಸೆಯಿದೆ. ಆದರೆ ಈ ಚಿತ್ರವನ್ನು ನೋಡುವುದಕ್ಕಿಂತ ಹೆಚ್ಚು ಅವರಿಗೆ ದೇಶಕ್ಕೆ ಮಾಡುವ ಕೆಲಸ ತುಂಬಾ ಇವೆ. ಆದರೂ ನಮಗೆ ಸಿನಿಮಾ ತೋರಿಸಲು ಆಸಕ್ತಿಯಿದೆ ಎಂದರು. ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರದಲ್ಲಿ ಕಥೆ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿದೆ.
ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿರುವ ಚಿತ್ರದಲ್ಲಿ ಭೂಮಿ ಪಡ್ನೇಕರ್, ಅನುಪಮ್ ಖೇರ್ ನಟಿಸಿದ್ದು ನಾಳೆ ದೇಶಾದ್ಯಂತ ತೆರೆಗೆ ಬರಲಿದೆ.