ಬಾಲಿವುಡ್

ಪೆಹ್ರೆದಾರ್ ಪಿಯಾ ಕಿ ಟೆಲಿ ಧಾರಾವಾಹಿ ವಿರುದ್ಧ ಆನ್ ಲೈನ್ ಪ್ರತಿಭಟನೆ, ಅಭಿಪ್ರಾಯ ಸಂಗ್ರಹ!

Sumana Upadhyaya
ನವದೆಹಲಿ: 18 ವರ್ಷದ ಯುವತಿ 9 ವರ್ಷದ ಬಾಲಕನನ್ನು ಮದುವೆಯಾಗುವುದು. ನವ ವಧು ವರರಂತೆ ಈ ಜೋಡಿ ಕೂಡ ಎಲ್ಲಾ ರೀತಿಯ ಸುಖ, ಸಂತೋಷ ಕಾಣುತ್ತದೆ. ಮೊದಲ ರಾತ್ರಿ, ಹನಿಮೂನ್ ಗೆ ಹೋಗುವುದು ಇತ್ಯಾದಿ. ಕೆಲವರಿಗೆ ಇದು ದೈನ್ಯತೆಯೆನಿಸಿದರೆ ಇನ್ನು ಕೆಲವರಿಗೆ ಸಿಟ್ಟು ತರಿಸಬಹುದು. ಆದರೆ ನಟಿ ತೇಜಸ್ವಿ ಪ್ರಕಾಶ್ ಗೆ ಈ ಹಿಂದಿ ಧಾರವಾಹಿಯಲ್ಲಿ ಯಾವುದೇ ರೀತಿಯ ತಪ್ಪು ಕಾಣುತ್ತಿಲ್ಲ. ಹಿಂದಿಯಲ್ಲಿ ಪ್ರಸಾರವಾಗುವ ಪೆಹ್ರೆದಾರ್ ಪಿಯಾ ಕಿಯಲ್ಲಿ ಈ ಕಥೆಯಿದ್ದು ಇದೊಂದು ಪ್ರಗತಿಶೀಲ ವಿಷಯವಾಗಿದೆ ಎನ್ನುತ್ತಾರೆ.
ಈ ಟಿವಿ ಧಾರವಾಹಿಯನ್ನು ನಿಷೇಧಿಸಬೇಕು, ಇದು ಅಸಹ್ಯ ಮತ್ತು ದುರುಪಯೋಗ ವಿಷಯವಾಗಿದ್ದು, ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆನ್ ಲೈನ್ ನಲ್ಲಿ ಹಲವರು ಒತ್ತಾಯಿಸಿದ್ದಾರೆ. ಸೋನಿ ಚಾನೆಲ್‌ನಲ್ಲಿ ‘ಪಹರೇದಾರ್‌ ಪಿಯಾ ಕಿ’ ಹಿಂದಿ ಧಾರಾವಾಹಿ ಪ್ರಸಾರವಾಗುತ್ತಿದ್ದು, ನಿಷೇಧಿಸುವಂತೆ ಒತ್ತಾಯಿಸಿ ಆನ್‌ಲೈನ್‌ ಅಭಿಯಾನ ನಡೆಯುತ್ತಿದೆ. ಚೇಂಜ್‌ ಡಾಟ್‌ ಒಆರ್‌ಜಿ (www.change.org) ಆನ್‌ಲೈನ್‌ ವೇದಿಕೆಯಲ್ಲಿ ಆರಂಭವಾಗಿರುವ ಈ ಅಭಿಯಾನಕ್ಕೆ 50 ಸಾವಿರಕ್ಕೂ ಹೆಚ್ಚು ಮಂದಿ ಬೆಂಬಲ ಸೂಚಿಸಿದ್ದಾರೆ. ಈ ಧಾರಾವಾಹಿ ಪ್ರೈಮ್‌ ಟೈಮ್‌ ಆಗಿರುವ ರಾತ್ರಿ 8.30 ಗಂಟೆಗೆ ಪ್ರಸಾರವಾಗುತ್ತಿದೆ. ಕುಟುಂಬ ಸದಸ್ಯರೆಲ್ಲಾ ಈ ಸಮಯದಲ್ಲಿ ಟಿವಿ ನೋಡುತ್ತಿರುತ್ತಾರೆ. ಈ ಅಸಹಜ ಕಥೆಯು ನೋಡುಗರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಈ ಧಾರಾವಾಹಿಯನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಲಾಗಿದೆ.
ಪೆಹ್ರೆದಾರ್ ಪಿಯಾ ಕಿ ಎಂದರೆ ಪ್ರೇಮಿ ರಕ್ಷಕ ಎಂದು ಅರ್ಥ. ಕಳೆದ ತಿಂಗಳು ಆರಂಭಗೊಂಡ ಈ ಧಾರವಾಹಿ ಅನೇಕರ ವಿರೋಧವನ್ನು ಎದುರಿಸುತ್ತಿದೆ. ಈ ಬಗ್ಗೆ ಧಾರವಾಹಿಯ ಮುಖ್ಯ ಪಾತ್ರಧಾರಿ ನಟಿ ತೇಜಸ್ವಿ ಪ್ರಕಾಶ್ ಐಎಎನ್ಎಸ್ ಸುದ್ದಿ ಸಂಸ್ಥೆ ಜೊತೆಗೆ ಸಂದರ್ಶನದಲ್ಲಿ ಮಾತನಾಡಿ, ಇದೊಂದು ಪ್ರಗತಿಪರ ಧಾರವಾಹಿ ಎಂದು ಹೇಳಲು ಬಯಸುತ್ತೇನೆ. ಜನರು ಯಾವುದಾದರೊಂದು ಪುಸ್ತಕದ ಮುಖಪುಟ ನೋಡಿ ತೀರ್ಮಾನ ಮಾಡುತ್ತಾರೆ.ಈ ಪತ್ರವನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಕಳಿಸಲು ಉದ್ದೇಶಿಸಲಾಗಿದೆ. ಬೇರೆಯವರು ಮಾಡುವ ಕೆಲಸಗಳನ್ನು ಮತ್ತು ಬೇರೆಯವರ ಬಗ್ಗೆ ಕಮೆಂಟ್ ಮಾಡುವುದು, ತೀರ್ಮಾನಕ್ಕೆ ಬರುವುದು ಅವರ ಕೆಲಸವಾಗಿರುತ್ತದೆ. ಇದಕ್ಕೆ ನಾನು ಏನೂ ಹೇಳಲು ಇಚ್ಛಿಸುವುದಿಲ್ಲ ಎಂದರು. ಧಾರವಾಹಿಯಲ್ಲಿ 25 ವರ್ಷದ ನಟಿ ತೇಜಸ್ವಿ ದಿಯಾ ಪಾತ್ರದಲ್ಲಿ ಅಫಾನ್ ಖಾನ್ ಜೊತೆ ಅಭಿನಯಿಸುತ್ತಿದ್ದಾರೆ.
ಇದೊಂದು ಕಾಲ್ಪನಿಕ ಕಥೆಯಷ್ಟೆ, ಅದನ್ನು ನಾವು ಜನರಿಗೆ ಹೇಳುತ್ತಿದ್ದೇವೆ. ಕಥೆಯನ್ನು ನೀವು ತೀರ್ಮಾನ ಮಾಡುವುದು ಹೇಗೆ? ಕಥೆ ನಿಮಗೆ ಇಷ್ಟವಾದರೆ ಇಷ್ಟವಾಯಿತು, ಇಲ್ಲದಿದ್ದರೆ ಇಲ್ಲ, ನಾವು ಪ್ರೊಫೆಸರ್ ಗಳಲ್ಲ, ನಾವು ಜನರಿಗೆ ಇಲ್ಲಿ ಬೋಧಿಸುವುದಿಲ್ಲ ಎಂದು ತೇಜಸ್ವಿ ಹೇಳಿದರು.
ಕಥೆಯಲ್ಲಿ 9 ವರ್ಷದ ಬಾಲಕನ ಪೋಷಕರನ್ನು ಯೋಜಿತ ಸ್ಫೋಟದಲ್ಲಿ ಕೊಲ್ಲಲಾಗುತ್ತದೆ. ಆಗ ಬಾಲಕನ ತಂದೆ ಮಹಿಳೆಯಲ್ಲಿ ತನ್ನ ಮಗನನ್ನು ನೋಡಿಕೊಳ್ಳಲು, ಜನರಿಂದ ರಕ್ಷಿಸಲು, ಅವರಿಂದ ಸಾಯುವುದನ್ನು ರಕ್ಷಿಸಲು ತನ್ನ  ಮಗನನ್ನು ಮದುವೆ ಮಾಡಿಕೊಳ್ಳುವಂತೆ ಹೇಳಿ ಸಾಯುತ್ತಾರೆ.
ಈ ಹಿಂದಿ ಧಾರವಾಹಿಯನ್ನು ಅಮೆರಿಕಾದ ಫ್ಯಾಂಟಸಿ ಡ್ರಾಮಾ ಗೇಮ್ ಆಫ್ ಥ್ರೋನ್ಸ್ ಗೆ ಹೋಲಿಸಲಾಗಿದೆ ಎನ್ನುತ್ತಾರೆ ತೇಜಸ್ವಿ.
SCROLL FOR NEXT