ದೀಪಿಕಾ ಪಡುಕೋಣೆ 
ಬಾಲಿವುಡ್

ರಣವೀರ್, ಶಾಹಿದ್ ಗಿಂತಲೂ ಹೆಚ್ಚು ಸಂಭಾವನೆ ಪಡೆದು ಇತಿಹಾಸ ಸೃಷ್ಟಿಸಿದ ದೀಪಿಕಾ

ಭಾರತೀಯ ಚಿತ್ರೋದ್ಯಮದಲ್ಲಿ ಇದೇ ಮೊದಲ ಬಾರಿಗೆ ನಾಯಕ ನಟಿಯೊಬ್ಬರು ನಾಯಕ ನಟರಿಗಿಂತ ಹೆಚ್ಚು ಸಂಭಾವನೆ ಪಡೆದು....

ಮುಂಬೈ: ಭಾರತೀಯ ಚಿತ್ರೋದ್ಯಮದಲ್ಲಿ ಇದೇ ಮೊದಲ ಬಾರಿಗೆ ನಾಯಕ ನಟಿಯೊಬ್ಬರು ನಾಯಕ ನಟರಿಗಿಂತ ಹೆಚ್ಚು ಸಂಭಾವನೆ ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಆ ನಟಿ ಬೇರಾರು ಅಲ್ಲ ನಮ್ಮ ಕನ್ನಡದ ಬೆಡಗಿ, ಬಾಲಿವುಡ್ ಮತ್ತು ಹಾಲಿವುಡ್‍ಗಳೆರಡಲ್ಲೂ ಮಿಂಚುತ್ತಿರುವ ನೀಳ ಕಾಯದ ಚೆಲುವೆ ದೀಪಿಕಾ ಪಡುಕೋಣೆ.
ಹೌದು. ಸಂಜಯ್ ಲೀಲಾ ಬನ್ಸಾಲಿಯವರ ಐತಿಹಾಸಿಕ 'ಪದ್ಮಾವತಿ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ದೀಪಿಕಾ ಪಡುಕೋಣೆ ಅವರು 'ಪದ್ಮಾವತಿ'ಗಾಗಿ ಬರೋಬ್ಬರಿ 13 ಕೋಟಿ ರುಪಾಯಿ ಸಂಭಾವನೆ ಪಡೆದಿದ್ದಾರೆ. ಇನ್ನು ಇದೇ ಚಿತ್ರದಲ್ಲಿ ದೀಪಿಕಾಗೆ ಜತೆಯಾಗಿ ನಟಿಸುತ್ತಿರುವ ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಅವರು ತಲಾ 10 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪದ್ಮಾವತಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಪರ್ಫೆಕ್ಟ್ ಅಂತ ಡಿಸೈಡ್ ಮಾಡಿರುವ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು 13 ಕೋಟಿ ರುಪಾಯಿ ಸಂಭಾವನೆ ನೀಡಿದ್ದಾರೆ ಎನ್ನುತ್ತಿವೆ ಮೂಲಗಳು.
ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಆಗಿರುವ ದೀಪಿಕಾ ಪಡುಕೋಣೆ, ಹಾಲಿವುಡ್ ನಲ್ಲೂ ತನ್ನದೇ ಆದ ಛಾಪು ಮೂಡಿಸಿ ಬಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ದೀಪಿಕಾ ಪಡುಕೋಣೆ, ಸಹಜವಾಗಿ ತಮ್ಮ ಸಂಭಾವನೆಯನ್ನ ಹೈಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತೀಯ ನಾವಿಕರ ಹತ್ಯೆ: ಅಮೆರಿಕಾ ಆದೇಶಗಳ ಪಾಲಿಸುವ 'obedient servant': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಭಾರತೀಯ ನಾವಿಕರ ಸಾವು: ‘ವಾಣಿಜ್ಯ ಹಡಗುಗಳ ಮೇಲಿನ ದಾಳಿ ನ್ಯಾಯಸಮ್ಮತವಲ್ಲ’; ಅಮೆರಿಕಾಗೆ ಭಾರತ ಖಡಕ್‌ ಸಂದೇಶ, ರಾಜತಾಂತ್ರಿಕ ಸಂಘರ್ಷ ಉಲ್ಬಣ

ಬೆಂಗಳೂರು ಅಭಿವೃದ್ಧಿ ಖಾತೆ ಹಗ್ಗಜಗ್ಗಾಟ: ಅಧಿಕಾರಗಳ ಬಗ್ಗೆ ಸ್ಪಷ್ಟತೆ ಸಿಕ್ಕ ಬಳಿಕವಷ್ಟೇ ಅಧಿಕಾರ ಸ್ವೀಕಾರ: ಕೃಷ್ಣ ಬೈರೇಗೌಡ

ಯಾವುದೇ ನಾಗರಿಕರು ಮತದಾನದ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಸಚಿವರು, DCಗಳಿಗೆ CM ಡಿಕೆಶಿ ಖಡಕ್ ಸೂಚನೆ

ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಯೋಜನೆಗೆ ಭರ್ಜರಿ ಸ್ಪಂದನೆ; 2 ದಿನದಲ್ಲಿ 2,764 ಪಾಸ್ ವಿತರಣೆ

SCROLL FOR NEXT