ಬಾಲಿವುಡ್

ಬಾಲ್ ಠಾಕ್ರೆ ಆಯ್ತು, ಈಗ ವಿಜಯ್ ಬಾರ್ಸೆಯಾಗಿ ಬಿಗ್ ಬಿ

Vishwanath S
ಮುಂಬೈ: ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಶಿವಸೇನೆ ಸಂಸ್ಥಾಪಕ ಬಾಲ್ ಠಾಕ್ರೆ ಕುರಿತಾದ ಸರ್ಕಾರ್ ಸರಣಿ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇದೀಗ ಮತ್ತೆ ಸ್ಲಂ ಸಾಕರ್ ಫೌಂಡೆಷನ್ ಇನ್ ಜಿಓವನ್ನು ಸ್ಥಾಪಿಸಿದ್ದ ವಿಜಯ್ ಬಾರ್ಸೆ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 
ಈ ಚಿತ್ರವನ್ನು ಮರಾಠಿಯ ಬ್ಲಾಕ್ ಬಸ್ಟರ್ ಚಿತ್ರ ಸೈರತ್ ಖ್ಯಾತಿಯ ನಿರ್ದೇಶಕ ನಾಗರಾಜ್ ಮಂಜುಳೆ ಅವರು ನಿರ್ದೇಶಿಸುತ್ತಿದ್ದು ಈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇದು ನಾಗರಾಜ್ ಅವರ ಮೊದಲ ಹಿಂದಿ ಚಿತ್ರವಾಗಿದೆ. 
ವಿಜಯ್ ಬಾಸ್ರೆ ಅವರು ಸ್ಲಂ ಮಕ್ಕಳಲ್ಲಿನ ಫುಟ್ಬಾಲ್ ಆಟಗಾರರನ್ನಾಗಿ ಮಾಡಲು ಈ ಸ್ಲಂ ಸಾಕರ್ ಫೌಂಡೆಷನ್ ಅನ್ನು ಸ್ಥಾಪಿಸಿದ್ದರು. ಇದೀಗ ಮಂಜುಳೆ ಅವರು ವಿಜಯ್ ಬಾಸ್ರೆ ಅವರ ಜೀವನ ಕುರಿತಾದ ಚಿತ್ರಕತೆಯನ್ನು ರೆಡಿ ಮಾಡಿಕೊಂಡಿದ್ದು ಅದಕ್ಕೆ ಬಿಗ್ ಬಿ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಚಿತ್ರದ ಶೂಟಿಂಗ್ ಅಕ್ಟೋಬರ್ ನಿಂದ ಪ್ರಾರಂಭವಾಗಲಿದೆ.
SCROLL FOR NEXT