ಮುಂಬೈ: ರೇಸ್-3 ಚಿತ್ರದಲ್ಲಿ ಸೈಫ್ ಅಲಿ ಖಾನ್ ಬದಲಿಗೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರು ನಟಿಸುತ್ತಿದ್ದರೆಂಬ ಸುದ್ದಿ ಇದೀಗ ಬಾಲಿವುಡ್ ಅಂಗಳದಲ್ಲಿ ಹರಿದಾಡತೊಡಗಿದೆ.
ನಿರ್ಮಾಪ ರಮೇಶ್ ತೂರಾನಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಸೈಫ್ ನಟನೆಯಿಲ್ಲದೆ ಚಿತ್ರ ಮುಂದುವರೆಯುವುದಿಲ್ಲ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಕೂಡ ನಟಿಸುತ್ತಿದ್ದು, ಸಲ್ಮಾನ್ ಖಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆಂದು ಹೇಳಿದ್ದಾರೆ.
ತಮ್ಮ ಬಹುನಿರೀಕ್ಷಿತ 'ಚೆಫ್' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಸೈಫ್ ಅಲಿ ಖಾನ್ ಅವರು, ರೇಸ್-3 ಚಿತ್ರ ನಿರ್ಮಾಣದ ಬಗ್ಗೆ ರಮೇಶ್ ಅವರು ಕಳೆದ ವರ್ಷವೇ ನನ್ನ ಬಳಿ ಹೇಳಿದ್ದರು. ರಮೇಶ್ ಎಂದರೆ ನನಗೆ ಬಹಳ ಇಷ್ಟ. ಸಲ್ಮಾನ್ ಖಾನ್ ಅವರು ಚಿತ್ರಕ್ಕೆ ಉತ್ತಮ ನಟರಾಗಿಲಿದ್ದಾರೆ. ಇಬ್ಬರಿಗೂ ಈ ಮೂಲಕ ಶುಭ ಹಾರೈಸುತ್ತೇನೆ. ಆದರೆ, ಚಿತ್ರದಲ್ಲಿ ನನ್ನ ನಟನೆ ಬಗ್ಗೆ ನಿರ್ಮಾಪಕರು ನನ್ನೊಂದಿಗೆ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಪುತ್ರ ತೈಮೂರ್ ಅಲಿ ಖಾನ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿರುವ ಅವರು, ಚೆಫ್ ಸಿನಿಮಾ ಕೂಡ ಜೀವನದ ಪ್ರಮುಖವಾದ ವಿಚಾರಗಳಿಗೆ ನಾವು ನೀಡುವ ಸಮಯದ ಕುರಿತಂತಾಗಿದೆ. ಕೆಲಸ ಮಾಡುವಾಗ ನಾನು 7ರಿಂದ 7ಪಾಳಿಯಲ್ಲಿ ಕೆಲಸ ಮಾಡಲು ಮಾಡಲು ಇಚ್ಛಿಸುತ್ತೇನೆ. ಬೆಳಿಗಿನ ಜಾವದಿಂದಲೇ ಕೆಲಸ ಆರಂಭಿಸಿ, ಸಂಜೆ ವೇಳೆಗೆ ಮನೆಗೆ ಬರಲು ಇಷ್ಟಪಡುತ್ತೇನೆ. ಇದರಿಂದ ಪುತ್ರ ತೈಮೂರ್ ಜೊತೆಗೂ ಕಾಲ ಕಳೆಯಲು ಸಮಯ ದೊರಕುತ್ತದೆ. ಒಂದು ವೇಳೆ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಕೆಲಸ ಮಾಡಿದರೆ, ಪುತ್ರನೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಹಿಂದೆಲ್ಲಾ ಚಿತ್ರೀಕರಣ ಮಾಡುವಾದ ಸಮಯವೆಂಬುದಿರಲಿಲ್ಲ. ಸಾಕಷ್ಟು ಪಾಳಿಗಳಲ್ಲಿ ಕೆಲಸ ಮಾಡಬೇಕಿತ್ತು. ಮಕ್ಕಳೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ನಾವು ಜಾಗೃತರಾಗಿದ್ದು, ಎರಡೂ ಕಡೆ ಬ್ಯಾಲೆನ್ಸ್ ಮಾಡುತ್ತಿದ್ದೇವೆ. ಮನೆಯವರ ಸಹಕಾರ ದೊರಕುತ್ತಿರುವುದು ನನ್ನ ಅದೃಷ್ಟ. ಪತ್ನಿ ಕರೀನಾ ಹಾಗೂ ನಾನು ಇಬ್ಬರೂ ನಮ್ಮಿಂದ ಸಾಧ್ಯವಾದಷ್ಟು ತೈಮೂರ್ ಜೊತೆಗಿರಲು ಪ್ರಯತ್ನಿಸುತ್ತಿದ್ದೇವೆ. ಇಬ್ಬರಲ್ಲಿ ಒಬ್ಬರೂ ಸದಾಕಾರ ತೈಮೂರ್ ಜೊತೆಗಿರುತ್ತೇವೆ. ಆದರೆ, ಕೆಲ ಜನರು ಇದನ್ನು ಮಾಡುವುದಿಲ್ಲ. ಮಕ್ಕಳಿಗೆ ನಮ್ಮ ಬೆಂಬಲ ಸದಾಕಾಲ ಇರಬೇಕು. ಕೆಲಸದ ಜೊತೆಗೆ ಮನೆಯನ್ನೂ ನಿಭಾಯಿಸಬೇಕು. ಇದು ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos