ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ
ನವದೆಹಲಿ: ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ (ಎನ್ ಸಿ ಎಸ್ ಸಿ) ಟಿವಿ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ ಅವಹೇಳನಕಾರಿ ಪದ ಬಳಸಿಕೊಂಡಿದ್ದಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ಶಿಲ್ಪಾ ಶೆಟ್ಟಿ ವಿರುದ್ಧ ದೂರುಗಳನ್ನು ನೀಡಿದೆ. . ಅಲ್ಲದೆ ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ದೆಹಲಿ ಮತ್ತು ಮುಂಬೈಯ ಪೋಲಿಸ್ ಕಮೀಷನರ್ ಗಳ ಪ್ರತಿಕ್ರಿಯೆಯನ್ನು ಕೇಳಿದೆ.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ದೌರ್ಜನ್ಯ ತಡೆಗಟ್ತುವಿಕೆ ಕಾಯ್ದೆ 2015 ರ ಪ್ರಕಾರ, ಒಂದು ವಾರದೊಳಗೆ ನಟರ ವಿರುದ್ಧ ತೆಗೆದುಕೊಳ್ಳಲಾದ ಕ್ರಮದ ಬಗ್ಗೆ ಉತ್ತರವನ್ನು ನೀದಬೇಕೆಂದು ಆಯೋಗವು ಹೇಳಿದೆ. ಸಫಾಯಿ ಕರ್ಮಚಾರಿಗಳ ದೆಹಲಿ ಆಯೋಗದ ಮಾಜಿ ಅಧ್ಯಕ್ಷರಾದ ಹರ್ನಮ್ ಸಿಂಗ್ ಅವರ ದೂರಿನ ಅನುಸಾರ ಆಯೋಗವು ನೋಟೀಸ್ ಜಾರಿ ಮಾಡಿದೆ.
ಸಿಂಗ್, ತನ್ನ ದೂರಿನಲ್ಲಿ, ನಟರು ಟಿವಿ ಕಾರ್ಯಕ್ರಮಗಳಲ್ಲಿ 'ಭಾಂಗಿ' ಎಂಬ ಪದವನ್ನು ಬಳಸಿದ್ದಾರೆ, ಅದು ಇಡೀ ವಿಶ್ವದಾದ್ಯಂತ ಇರುವ ವಾಲ್ಮೀಕಿ ಸಮುದಾಯವನ್ನು ಅಪಮಾನಿಸುತ್ತದೆ ಎಂದು ಹೇಳಿದರು. ಸಲ್ಮಾನ್ ತನ್ನ ಟೈಗರ್ ಝಿಂದಾ ಹೈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಈ ಪದವನ್ನು ಬಳಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ