ಮುಂಬೈ: ಪರಿಶಿಷ್ಟ ಜಾತಿಗಳ ವಿರುದ್ಧ ಅವಹೇಳಕಾರಿ ಪದ ಬಳಸಿ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಈ ಸಂಬಂಧ ಕ್ಷಮೆ ಯಾಚಿಸಿದ್ದಾರೆ.
ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಶಿಲ್ಪಾ ಶೆಟ್ಟಿ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಜಾತಿ ಸೂಚಕ ಪದ ಬಳಸಿದ್ದರು. ಇದರ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಶಿಲ್ಪಾ ಶೆಟ್ಟಿ ಅವರು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಯಾರದೇ ಭಾವನೆಗೆ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ವಿವಿಧ ಜಾತಿ ಮತ್ತು ನಂಬಿಕೆ ಇರುವ ದೇಶದಲ್ಲಿ ಇರುವುದಕ್ಕೆ ಹೆಮ್ಮೆ ಪಡುವ ನಾನು, ಎಲ್ಲರ ಭಾವನೆಯನ್ನೂ ಗೌರವಿಸುತ್ತೇನೆ ಎಂದು ಟ್ವೀಟಿಸಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ಸಲ್ಮಾನ್ ಖಾನ್ ಅವರು ಟಿವಿ ಕಾರ್ಯಕ್ರಮಗಳಲ್ಲಿ 'ಭಾಂಗಿ' ಎಂಬ ಪದವನ್ನು ಬಳಸಿದ್ದಾರೆ, ಅದು ಇಡೀ ವಿಶ್ವದಾದ್ಯಂತ ಇರುವ ವಾಲ್ಮೀಕಿ ಸಮುದಾಯವನ್ನು ಅಪಮಾನಿಸುತ್ತದೆ ಎಂದು ಹೇಳಿದರು.