ಬಾಲಿವುಡ್

ವಿವಾದಿತ ಪದ್ಮಾವತಿಗೆ ಸಿಕ್ತು ಷರತ್ತುಬದ್ಧ ಯು/ಎ ಸರ್ಟಿಫಿಕೇಟ್

Vishwanath S
ಮುಂಬೈ: ತೀವ್ರ ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನರದ ಪದ್ಮಾವತಿ ಚಿತ್ರಕ್ಕೆ ಕೊನೆಗೂ ಸೆನ್ಸಾರ್ ಬೋರ್ಡ್ ಷರತ್ತಿನ ಮೇಲೆ ಯು/ಎ ಸರ್ಟಿಫಿಕೇಟ್ ನೀಡಲು ನಿರ್ಧರಿಸಿದೆ. 
ಚಿತ್ರದಲ್ಲಿ ಒಟ್ಟಾರೆ 26 ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿ ಹಾಗೂ ಚಿತ್ರದ ಹೆಸರನ್ನು ಪದ್ಮಾವತಿಗೆ ಬದಲಾಗಿ ಪದ್ಮಾವತ್ ಎಂದು ಬದಲಿಸುವಂತೆ ಸೆನ್ಸಾರ್ ಬೋರ್ಡ್ ಚಿತ್ರ ತಂಡಕ್ಕೆ ಆದೇಶಿಸಿದ್ದು ಬದಲಾವಣೆಗಳು ಆದ ನಂತರ ಸರ್ಟಿಫಿಕೇಟ್ ನೀಡುವುದಾಗಿ ಸೆನ್ಸಾರ್ ಬೋರ್ಡ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದೆ. 
ಚಿತ್ರದ ನಿರ್ಮಾಪಕರು ಮತ್ತು ಸಮಾಜದ ಸ್ವಾಸ್ಥವನ್ನು ಗಮನದಲ್ಲಿಟ್ಟುಕೊಂಡು ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ. ಚಿತ್ರದ ಸುತ್ತಲಿನ ಸಂಕೀರ್ಣತೆಗಳು ಮತ್ತು ಕಳವಳಗಳನ್ನು ಪರಿಗಣಿಸಿ ನಾವು ಈ ಚಿತ್ರದ ಸೆನ್ಸಾರ್ ಗಾಗಿ ಸಮಿತಿಯೊಂದನ್ನು ರಚಿಸಿದ್ದೇವು ಅಂತೆ ಹಲವು ಬದಲಾವಣೆಗಳಿಗೆ ಸಮಿತಿ ಶಿಫಾರಸು ಮಾಡಿದೆ ಎಂದು ಸೆನ್ಸಾರ್ ಬೋರ್ಡ್ ಎಎನ್ಐ ಸುದ್ದಿ ಸಂಸ್ಧೆಗೆ ತಿಳಿಸಿದೆ. 
ಪದ್ಮಾವತಿ ಭಾರೀ ಬಜೆಟ್ ನ ಚಿತ್ರವಾಗಿದ್ದು ಇದಕ್ಕಾಗಿ ನಿರ್ಮಾಪಕರು 190 ಕೋಟಿ ವ್ಯಯಿಸಿದ್ದಾರೆ. ಇನ್ನು ಚಿತ್ರದಲ್ಲಿ ಬಾಲಿವುಡ್ ನಟಿ ದಿಪೀಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯಿಸಿದ್ದಾರೆ. 
ಪದ್ಮಾವತಿ ಚಿತ್ರದಲ್ಲಿ ರಜಪೂತ್ ಮನೆತನಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜಸ್ತಾನದಲ್ಲಿ ಪ್ರತಿಭಟನೆಗಳು ನಡೆಸಿದ್ದವು. ಚಿತ್ರದ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಕರ್ಣಿ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. 
SCROLL FOR NEXT