ನಟಿ ಆಯೋಶಾ ಟಾಕಿಯಾ 
ಬಾಲಿವುಡ್

ಏನೋ ಮಾಡಲು ಹೋಗಿ..!: ಇವಳೇನಾ ವಾಂಟೆಡ್ ಚಿತ್ರದ ನಾಯಕಿ!

ಬಾಲಿವುಡ್ ಬೆಡಗಿ ಆಯೇಶಾ ಟಾಕಿಯಾ ಬಹಳ ದಿನಗಳ ಬಳಿಕ ಸುದ್ದಿಗೆ ಗ್ರಾಸವಾಗಿದ್ದು, ಭಾರಿ ತಮ್ಮ ಹೊಸ ಲುಕ್ ನಿಂದಾಗಿ ಟ್ವಿಟರ್ ನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಮುಂಬೈ: ಬಾಲಿವುಡ್ ಬೆಡಗಿ ಆಯೇಶಾ ಟಾಕಿಯಾ ಬಹಳ ದಿನಗಳ ಬಳಿಕ ಸುದ್ದಿಗೆ ಗ್ರಾಸವಾಗಿದ್ದು, ಭಾರಿ ತಮ್ಮ ಹೊಸ ಲುಕ್ ನಿಂದಾಗಿ ಟ್ವಿಟರ್ ನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಈ ಹಿಂದೆ ಅತ್ಯಾಚಾರ ಸಂಬಂಧ ಹೇಳಿಕೆ ನೀಡಿದ್ದ ತಮ್ಮದೇ ಕುಟುಂಬಸ್ಥರ ವಿರುದ್ಧವೇ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದ ವಾಂಟೆಡ್ ಚಿತ್ರದ ನಾಯಕಿ, ಇದೀಗ ತಮ್ಮ ಹೊಸ ಲುಕ್ ನಿಂದಾಗಿ  ಟ್ವಿಟರ್ ನಲ್ಲಿ ಟ್ರಾಲ್ ಆಗಿದ್ದಾರೆ. ತಮ್ಮ ತುಟಿ ಮತ್ತು ಕೆನ್ನೆ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ನಟಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದು, ಇದರಿಂದ ಅವರ ಸೌಂದರ್ಯವೇ ಬದಲಾಗಿ ಹೋಗಿದೆ. ಅವರ ಪ್ಲಾಸ್ಟಿಕ್ ಸರ್ಜರಿ ಅವರನ್ನು ಎಷ್ಟರ  ಮಟ್ಟಿಗೆ ಬದಲಾಯಿಸಿದೆ ಎಂದರೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟಿ ಮತ್ತು ಆಕೆಯ ಪತಿ ಇಬ್ಬರೂ ವೇದಿಕೆಗೆ ಆಗಮಿಸಿದಾಗ ಯಾವೊಬ್ಬ ಪತ್ರಕರ್ತರೂ ಕೂಡ ಆಕೆಯನ್ನು ಗುರುತು  ಹಿಡಿಯಲಿಲ್ಲ.



ಕೊನೆಗೆ ಕಾರ್ಯಕ್ರಮ ಆಯೋಜಕರೇ ಆಕೆಯನ್ನು ನಟಿ ಆಯೇಶಾ ಟಾಕಿಯಾ ಎಂದು ಪರಿಚಸಿದಾಗ ನೆರೆದಿದ್ದ ಪತ್ರಕರ್ತರೆಲ್ಲರೂ ಬೆರಗಾಗಿದ್ದರು. ಕಾರಣ ನಟಿಯ ಮುಖ ಪ್ಲಾಸ್ಟಿಕ್‌ ನಂತಾಗಿ, ತುಟಿ ಸರ್ಜರಿಯಿಂದಾಗಿ   ಊದಿಕೊಂಡಿತ್ತು. ತಮ್ಮ ಕ್ಯೂಟ್ ಲುಕ್ ನಿಂದಾಗಿಯೇ ಬಾಲಿವುಡ್ ನಲ್ಲಿ ಸಾಕಷ್ಟು ಅವಕಾಶ ಪಡೆದಿದ್ದ ನಟಿ ಆಯೇಶಾ ಇದೀಗ ಮತ್ತಷ್ಟು ಸೌಂದರ್ಯವತಿಯಾಗಲು ಹೋಗಿ ಇರುವ ಸೌಂದರ್ಯವನ್ನು ಕಳೆದುಕೊಂಡಿದ್ದಾರೆ ಎನ್ನುತ್ತಿದೆ  ಬಾಲಿವುಡ್. 2009ರಲ್ಲಿ ತೆರೆಕಂಡಿದ್ದ ವಾಂಟೆಡ್ ಚಿತ್ರದಲ್ಲಿ ಆಯೇಶಾ ಕೊನೆಯ ಬಾರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು.

ಹಿಂದಿ ಮಾತ್ರವಲ್ಲದೇ ತೆಲುಗಿನಲ್ಲೂ ಕಾಣಿಸಿಕೊಂಡಿದ್ದ ನಟಿ ನಾಗಾರ್ಜುನ ಅಭಿನಯದ ಸೂಪರ್ ಚಿತ್ರದ ನಾಯಕಿಯಾಗಿದ್ದರು. ಆಯೇಷಾ, ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರ ಮಗ ಫರ್ಹಾನ್ ಅಜ್ಮಿ ಅವರನ್ನು  ವಿವಾಹವಾಗಿದ್ದು, ಈ ದಂಪತಿಗೆ ಮಿಖಾಯಿಲ್ ಎಂಬ 4 ವರ್ಷದ ಪುತ್ರನೂ ಇದ್ದಾನೆ.

ಇನ್ನು ತಮ್ಮ ಸೌಂದರ್ಯಕ್ಕೆ ಸಂಬಂಧಿಸಿದಂತೆ ಟ್ವೀಟಿಗರ ಅಪಹಾಸ್ಯಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಆಯೇಶಾ, ನೀವು ಹೇಗಿದ್ದರೂ ಸರಿ..ನಿಮ್ಮನ್ನು ನೀವು ಪ್ರೀತಿಸಿದರೆ ಸಾಕು...ಸೆಲ್ಫಿ ತೆಗೆದುಕೊಳ್ಳಿ ಎಂದು ಪರೋಕ್ಷವಾಗಿ  ಟ್ವೀಟಿಗರ ಬಾಯಿ ಮುಚ್ಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT