ರಾಷ್ಟ್ರ ಪ್ರಶಸ್ತಿ ವಿಜೇತ ನಟ ನವಾಜುದ್ದೀನ್ ಸಿದ್ದಿಕಿ 
ಬಾಲಿವುಡ್

ಎಸ್ ಆರ್ ಕೆ ಸೆಟ್ ಗೆ ಸ್ಟಾರ್ ಗಿರಿ ಹೊತ್ತು ಬರುವುದಿಲ್ಲ: ನವಾಜುದ್ದೀನ್ ಸಿದ್ದಿಕಿ

ಶಾರುಖ್ ಖಾನ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ 'ರಯೀಸ್' ನಲ್ಲಿ ಒಟ್ಟಿಗೆ ನಟಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ನವಾಜುದ್ದೀನ್ ಸಿದ್ದಿಕಿ, ಸೂಪರ್ ಸ್ಟಾರ್ ಸೆಟ್ ಗಳಿಗೆ ಸ್ಟಾರ್ ಗಿರಿಯನ್ನು ಕಳಚಿ ಬರುತ್ತಾರೆ

ಮುಂಬೈ: ಶಾರುಖ್ ಖಾನ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ 'ರಯೀಸ್' ನಲ್ಲಿ ಒಟ್ಟಿಗೆ ನಟಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ನವಾಜುದ್ದೀನ್ ಸಿದ್ದಿಕಿ, ಸೂಪರ್ ಸ್ಟಾರ್ ಸೆಟ್ ಗಳಿಗೆ ಸ್ಟಾರ್ ಗಿರಿಯನ್ನು ಕಳಚಿ ಬರುತ್ತಾರೆ ಎಂದಿದ್ದಾರೆ ಮತ್ತು ಸಿನೆಮಾದ ಮಹತ್ವದ ಸನ್ನಿವೇಶಗಳಲ್ಲಿ ಉತ್ತಮವಾಗಿ ನಟಿಸಲು ಸಹಕರಿಸಿದರು ಎಂದು ಕೂಡ ಹೇಳಿದ್ದಾರೆ. 
ನವಾಜುದ್ದೀನ್ ಬಾಲಿವುಡ್ ನ ಮೂವರು ಖಾನ್ ಗಳಾದ ಅಮೀರ್, ಸಲ್ಮಾನ್ ಮತ್ತು ಶಾರುಖ್ ಅವರೊಂದಿಗೆ ನಟಿಸಿರುವುದು ವಿಶೇಷ. 
ಇವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಳ್ಳುವ ನವಾಜುದ್ದೀನ್ "ನಾನು ಎಲ್ಲ ಮೂವರು ಖಾನ್ ಗಳೊಂದಿಗೆ ಕೆಲಸ ಮಾಡಿದ್ದೇನೆ. ಅಮೀರ್ ಅವರ 'ತಲಾಶ್', ಸಲ್ಮಾನ್ ಬಾಯಿ ಅವರ 'ಕಿಕ್' ಮತ್ತು ಶಾರುಖ್ ಸಾಹೇಬ್ ಅವರ 'ರಯೀಸ್' ಆಗಲಿ, ಮೂವರದ್ದು ವಿಭಿನ್ನ ಶೈಲಿ ಮತ್ತು ಅವರ ಜೊತೆಗೆ ಕೆಲಸ ಮಾಡುವಾಗ ಉತ್ತಮ ಸಮಯ ಕಳೆದೆ" ಎಂದಿದ್ದಾರೆ. 
"ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವಾಗಲಂತೂ ನಾನು ಬಹಳಷ್ಟು ಖುಷಿಪಟ್ಟೆ ಏಕೆಂದರೆ ಅವರು ಸೆಟ್ ಗಳಲ್ಲಿ ನಟನಾಗಿ ಕೆಲಸ ಮಾಡುತ್ತಾರೆ, ಅದು ನಮ್ಮ ನಟನೆಗೂ ಸಹಕರಿಸುತ್ತದೆ. ಅವರು ಸೆಟ್ ಗಳಿಗೆ ಸ್ಟಾರ್ ಗಿರಿಯನ್ನು ಹೊತ್ತು ಬರುವುದಿಲ್ಲ. ಅವರು ಬಹಳ ವಿನೀತ ವ್ಯಕ್ತಿ" ಎನ್ನುತ್ತಾರೆ. 
'ರಯೀಸ್' ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜೈದೀಪ್ ಅಂಬಾಲಾಲ್ ಮಜುಂದಾರ್ ಪಾತ್ರ ನಿರ್ವಹಿಸಿರುವ ನವಾಜುದ್ದೀನ್, ಶಾರುಖ್ ಖಾನ್ ನಿರ್ವಹಿಸಿರುವ ಭೂಗತ 'ರಯೀಸ್' ನನ್ನ ಬಂಧಿಸುವ ಗುರಿ ಹೊಂದಿರುತ್ತಾರೆ. 
ಸಿನಿಮಾರಂಗಕ್ಕೆ ಹೊರಗಿನವರಾಗಿ ಪ್ರವೇಶ ಪಡೆದ ನವಾಜುದ್ದೀನ್ ೧೯೯೯ರ 'ಸರ್ಫರೋಶ್' ಸಿನೆಮಾದಲ್ಲಿ ಸಣ್ಣ ಪಾತ್ರ ನಿರ್ವಹಿಸದ್ದರು ಮತ್ತು ದೊಡ್ಡದಾಗಿ ಕಾಣಿಸಿಕೊಳ್ಳಲು ಹಲವು ಸಿನೆಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದವರು. 
ಈ ಹೋರಾಟದ ಸಮಯದಲ್ಲಿ ಅವರಿಗೆ ಸ್ಫೂರ್ತಿ ನೀಡಿದ್ದು ಏನು ಎಂದು ಪ್ರಶ್ನಿಸದರೆ "ನೋಡಿ ನನ್ನ ಗುರಿ ಯಾವುದೇ ಸಿನೆಮಾದಲ್ಲಿ ದೊಡ್ಡ ಪಾತ್ರ ಗಳಿಸುವುದಾಗಿರಲಿಲ್ಲ ಬದಲಾಗಿ ಸಿನೆಮಾಗಳಲ್ಲಿ ನಟನೆ ಮುಂದುವರೆಸಬೇಕಿತ್ತು. 
"ನನಗೆ ಹೀರೊ ಆಗಲು ಸಾಧ್ಯವಾಗುತ್ತಿಲ್ಲ ಎಂದು ಯಾವತ್ತೂ ಖಿನ್ನತೆಗೆ ಒಳಗಾಗಿಲ್ಲ. ನನಗೆ ಅತಿ ದೊಡ್ಡ ಆಕಾಂಕ್ಷೆಗಳೇನು ಇರಲಿಲ್ಲ. ನಟನಾಗಿ ನನ್ನ ಪ್ರಯಾಣ ಮುಂದುವರೆಸಬೇಕಿತ್ತು. ಬಾಲಿವುಡ್ ಗೆ ನಾನು ಆಭಾರಿ ಮತ್ತು ಅದು ಕೊನೆಗೆ ನನಗೆ ಅತ್ಯುತ್ತಮ ಪಾತ್ರಗಳನ್ನೂ ನೀಡುತ್ತಿದೆ. ಇದು ಹೇಳಿದ ಮೇಲೆ, ಇನ್ನು ಬಹಳಷ್ಟು ಪ್ರತಿಭಾವಂತ ನಟರಿಗೆ ನನ್ನಷ್ಟೇ ಒಳ್ಳೆಯ ಅವಕಾಶಗಳು ದೊರಕಬೇಕು" ಎನ್ನುತ್ತಾರೆ ನವಾಜುದ್ದೀನ್. 
ರಾಹುಲ್ ಧೋಲಾಕಿಯ ನಿರ್ದೇಶನದ 'ರಯೀಸ್' ಜನವರಿ ೨೫ ಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

SCROLL FOR NEXT