ಬಾಲಿವುಡ್

ತೀವ್ರ ಆರ್ಥಿಕ ಮುಗ್ಗಟ್ಟು : ಬಾಲಿವುಡ್ ಸಿನಿಮಾಗಳ ನಿಷೇಧ ತೆರವಿಗೆ ಪಾಕ್ ಸರ್ಕಾರಕ್ಕೆ ಸಮಿತಿ ಶಿಫಾರಸು

Srinivas Rao BV
ಇಸ್ಲಾಮಾಬಾದ್: ಬಾಲಿವುಡ್ ನಲ್ಲಿ ಪಾಕಿಸ್ತಾನದ ಕಲಾವಿದರನ್ನು ಬಹಿಷ್ಕರಿಸಿದ್ದಕ್ಕೆ ಪ್ರತಿಯಾಗಿ ಬಾಲಿವುಡ್ ಸಿನಿಮಾಗಳನ್ನು ನಿಷೇಧಿಸಿದ್ದ ಪಾಕಿಸ್ತಾನದ ಚಿತ್ರಮಂದಿರಗಳ ಮಾಲಿಕರು ಈಗ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಬಾಲಿವುಡ್ ಸಿನಿಮಾಗಳಿಗೆ ವಿಧಿಸಿದ್ದ ನಿಷೇಧವನ್ನು ತೆರವು ಮಾಡುವ ಸಾಧ್ಯತೆಗಳು ದಟ್ಟವಾಗಿದೆ. 
ಬಾಲಿವುಡ್ ಸಿನಿಮಾಗಳನ್ನು ನಿಷೇಧಿಸಿದ್ದ ಚಿತ್ರಮಂದಿರಗಳ ಮಾಲಿಕರು ಕಳೆದ ನಾಲ್ಕು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನವಾಜ್ ಷರೀಫ್ ಸಮಿತಿಯೊಂದನ್ನು ರಚಿಸಿ ಚಿತ್ರಮಂದಿರಗಳ ಮಾಲಿಕರ ಬೇಡಿಕೆಗಳನ್ನು ಪರಿಶೀಲಿಸುವಂತೆ ಸೂಚಿಸಿದ್ದರು. 
ರಾಷ್ಟ್ರೀಯ ಇತಿಹಾಸ ಹಾಗೂ ಸಾಹಿತ್ಯ ಪರಂಪರೆಯ ವಿಷಯಗಳಲ್ಲಿ ಪ್ರಧಾನಿ ಸಲಹೆಗಾರ ಇರ್ಫಾನ್ ಸಿದ್ದಿಕಿ ಅವರನ್ನೊಳಗೊಂಡ ಮಾಹಿತಿ ಸಚಿವ ಮರ್ಯುಮ್ ಔರಂಗಜೇಬ್ ನೇತೃತ್ವದ ಸಮಿತಿ ಬೇಡಿಕೆಗಳನ್ನು ಪರಿಶೀಲಿಸಿ ಪ್ರಧಾನಿ ಹೊರದೇಶಗಳ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡಬಹುದೆಂದು ಅಭಿಪ್ರಾಯಪಟ್ಟಿದೆ. 
ಆಮದು ನೀತಿ ಆದೇಶದಲ್ಲಿ ಪಾಕಿಸ್ತಾನ ಭಾರತೀಯ ಸಿನಿಮಾಗಳನ್ನೂ ಸೇರಿಸಿದ್ದು, ವಾಣೀಜ್ಯ ಸಚಿವಾಲಯ ಸಹ ಭಾರತೀಯ ಸಿನಿಮಾಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ನೀಡಿದೆ. " ನಮಗೆ  ಶೇ.70 ರಷ್ಟು ಆದಾಯ ಬರುವುದೇ ಬಾಲಿವುಡ್, ಹಾಲಿವುಡ್ ಸಿನಿಮಾಗಳಿಂದ, ಬಾಲಿವುಡ್ ಸಿನಿಮಾಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದರೆ ಸಮಸ್ಯೆಯಾಗುವುದಿಲ್ಲ. ಆದರೆ ಅದೇ ಮುಂದುವರೆದರೆ ನಮ್ಮ ಆದಾಯಕ್ಕೆ ಬಲವಾದ ಪೆಟ್ಟು ಬೀಳುತ್ತದೆ ಎಂದು ಕರಾಚಿಯ ಚಿತ್ರಮಂದಿರದ ಮಾಲಿಕರೊಬ್ಬರು ಹೇಳಿದ್ದಾರೆ. 
SCROLL FOR NEXT