ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಲಿವುಡ್ ನಲ್ಲಿ ಈಗಾಗಲೇ ಹೆಸರು ಮಾಡಿರುವ ಪ್ರಿಯಾಂಕಾ ತಮ್ಮ ಜನಪ್ರಿಯ ಕ್ವಾಂಟಿಕೊ ಟಿವಿ ಶೋ ಮೂಲಕ ಸತತ ಎರಡನೇ ಬಾರಿಗೆ ಜನರ ಅಚ್ಚುಮೆಚ್ಚಿನ ನಟಿ ಆಯ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಿಯಾಂಕಾ ಚೋಪ್ರಾ , ''ನಾನು ಅಚ್ಚುಮೆಚ್ಚಿನ ಡ್ರಾಮಾ ಕ್ವೀನ್ ಎನಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ಜನರು ನನ್ನ ನಟನೆಯನ್ನು ಇಷ್ಟಪಟ್ಟಿರುವುದಕ್ಕೆ, ನನ್ನನ್ನು ಸ್ವೀಕರಿಸಿರುವುದಕ್ಕೆ ಅಭಿನಂದನೆಗಳು'' ಎಂದು ಹೇಳಿದರು.
ಪ್ರೇಕ್ಷಕರ ಸಮೂಹದಲ್ಲಿ ಕುಳಿತಿದ್ದ ಬೇವಾಚ್ ಕ್ವಾಂಟಿಕೊ ಧಾರವಾಹಿಯ ಸಹ ನಟ ದ್ವಾಯ್ನೆ ಸೇರಿದಂತೆ ಇತರರು ಚಪ್ಪಾಳೆ ತಟ್ಟಿ ಪ್ರಿಯಾಂಕಾಗೆ ಮೆಚ್ಚುಗೆ ಸೂಚಿಸಿದರು.