ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರದ ದೃಶ್ಯ
ನವದೆಹಲಿ: ಅಕ್ಷಯ್ ಕುಮಾರ್ ಅವರ ನಟನೆಯ ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರ ಬಿಡುಗಡೆಯಾಗುವ ಮುನ್ನವೇ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ ಎಂಬ ವರದಿಗಳು ಬಂದವು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅಕ್ಷಯ್ ಕುಮಾರ್ ಮತ್ತು ಕ್ರಿರಿಜ್ ಎಂಟರ್ಟೈನ್ ಮೆಂಟ್ ಅಧಿಕೃತ ಹೇಳಿಕೆ ನೀಡಿ, ಈ ಬಗ್ಗೆ ಜಾಗ್ರತೆ ವಹಿಸಲಾಗಿದೆ ಎಂದು ಹೇಳಿದರು.
ಕೊರಿಯೊಗ್ರಫರ್ ಮತ್ತು ಚಿತ್ರ ನಿರ್ದೇಶಕ ರೆಮೊ ಡಿಸೋಜ ವೆಬ್ ಸೈಟ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರವನ್ನು ಹೊಂದಿರುವ ಪೆನ್ ಡ್ರೈವ್ ಸಿಕ್ಕಿತು. ತಕ್ಷಣವೇ ಕ್ರಿರಿಜ್ ಎಂಟರ್ಟೈನ್ ಮೆಂಟ್ ನ ಪ್ರೇರ್ನಾ ಅರೊರ ಅವರಿಗೆ ವಿಷಯ ತಿಳಿಸಿದೆ. ಅಕ್ಷಯ್ ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಲಂಡನ್ ನಲ್ಲಿರುವುದರಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ರೆಮೊ ಡಿ ಸೋಜ ಅವರಿಗೆ ತಮ್ಮ ಪೆನ್ ಡ್ರೈವ್ ನಲ್ಲಿ ಏಕ್ ಪ್ರೇಮ್ ಕಥಾ ಸಿನಿಮಾವಿದೆ ಎಂದರಂತೆ. ಆರಂಭದಲ್ಲಿ ಅವರದನ್ನು ನಂಬಲಿಲ್ಲ. ಆದರೆ ಮತ್ತೆ ಪರೀಕ್ಷಿಸಿ ನೋಡಿದಾಗ ಅದರಲ್ಲಿ ಇಡೀ ಚಿತ್ರವಿತ್ತು. ಅಕ್ಷಯ್ ಅವರನ್ನು ಸಂಪರ್ಕಿಸಿದಾಗ ಅವರು ಸಿಗಲಿಲ್ಲವಂತೆ.
ನಂತರ ಚಿತ್ರದ ನಿರ್ಮಾಪಕ ಪ್ರೇರಣಾ ಅರೋರ, ನಿರ್ದೇಶಕ ಶ್ರೀ ನಾರಾಯಣ್ ಸಿಂಗ್ ಅವರಿಗೆ ವಿಷಯ ತಿಳಿಸಿದಾಗ ಅವರು ಬಂದು ಪೆನ್ ಡ್ರೈವ್ ತೆಗೆದುಕೊಂಡು ಹೋದರು. ಪೈರೆಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡುವುದಾಗಿ ನಿರ್ದೇಶಕರು ಮತ್ತು ನಿರ್ಮಾ ಪಕರು ತಿಳಿಸಿದ್ದಾರೆ ಎಂದರು.
ಮಾಹಿತಿ ಸಿಕ್ಕಿದ ತಕ್ಷಣ ನಟ ಅಕ್ಷಯ್ ಕುಮಾರ್ ಪೈರೆಸಿ ವಿರುದ್ಧ ನಿಲ್ಲುವಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ.
ಇನ್ನು ಚಿತ್ರದ ನಿರ್ಮಾಪಕ ಪ್ರೇರಣಾ ಅರೊರ, ಸೋರಿಕೆಯಾದ ಬಗ್ಗೆ ಅಪರಾಧ ವಿಭಾಗಕ್ಕೆ ದೂರು ನೀಡಿದ್ದು, ಅವರು ಕ್ರಮ ಕೈಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.