ಅಮೀರ್ ಖಾನ್ 
ಬಾಲಿವುಡ್

ಭಾವನಾತ್ಮಕ ಆಸಕ್ತಿಗೆ ತಕ್ಕಂತೆ ಚಿತ್ರಗಳ ಆಯ್ಕೆ ಮಾಡುತ್ತೇನೆ: ಅಮೀರ್ ಖಾನ್

ಲಗಾನ್, ರಂಗ್ ದೆ ಬಸಂತಿ, ತ್ರಿ ಈಡಿಯಟ್ಸ್, ಪಿಕೆ, ದಂಗಲ್ ಹೀಗೆ ತಮ್ಮ ಸಿನಿ ವೃತ್ತಿಯಲ್ಲಿ ಹಿಟ್ ಚಿತ್ರಗಳನ್ನು...

ನವದೆಹಲಿ: ಲಗಾನ್, ರಂಗ್ ದೆ ಬಸಂತಿ, ತ್ರಿ ಈಡಿಯಟ್ಸ್, ಪಿಕೆ, ದಂಗಲ್ ಹೀಗೆ ತಮ್ಮ ಸಿನಿ ವೃತ್ತಿಯಲ್ಲಿ ಹಿಟ್ ಚಿತ್ರಗಳನ್ನು ನೀಡಿರುವ ಅಮೀರ್ ಖಾನ್ ತಮ್ಮ ಹೃದಯಕ್ಕೆ ಇದರ ಕ್ರೆಡಿಟ್ ನ್ನು ಸಲ್ಲಿಸುತ್ತಾರೆ. ಸಿನಿಮಾವೊಂದಕ್ಕೆ ಸಹಿ ಹಾಕುವಾಗ ಅವರು ತಮ್ಮ ಹೃದಯದ ಮಾತುಗಳನ್ನು ಕೇಳುತ್ತಾರಂತೆ.
1980ರ ದಶಕದಿಂದ ಇಲ್ಲಿಯವರೆಗೆ ಅಮೀರ್ ಮಾಡಿರುವ ಪಾತ್ರಗಳು ವೈವಿಧ್ಯಮಯ. ಕ್ಯಾಬ್ ಡ್ರೈವರ್, ಕ್ಲೌನ್ ಕಳ್ಳ ಅಥವಾ ಮೋಜಿನ-ಪ್ರೀತಿಯ ಕಾಲೇಜು ವಿದ್ಯಾರ್ಥಿಯಾಗಿಯೂ ಅವರು ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುತ್ತಾ ಬಂದಿದ್ದಾರೆ. 
ತಮ್ಮ ಇಷ್ಟದ ಚಿತ್ರ ಯಾವುದು ಎಂದು ಕೇಳಿದಾಗ, '' ನಾನು ಮಾಡಿರುವ ಎಲ್ಲಾ ಚಿತ್ರಗಳು ನನಗೆ ತುಂಬಾ ಆಪ್ತವೆನಿಸುತ್ತದೆ. ಅವುಗಳು ಮಾಡಿರುವ ವ್ಯಾಪಾರ, ವಹಿವಾಟಿನ ಕುರಿತು ನಾನು ಲೆಕ್ಕ ಹಾಕುವುದಿಲ್ಲ ಎಂದರು.
ಆದರೆ ಚೀನಾದಲ್ಲಿ ಅಮೀರ್ ಖಾನ್ ಅವರ ದಂಗಲ್ ಚಿತ್ರ 1000 ಕೋಟಿ ರೂಪಾಯಿ ಆದಾಯವನ್ನು ಕಂಡಿದೆ. ಭಾರತದ ಚಿತ್ರವೊಂದು ಇಷ್ಟು ಗಳಿಕೆ ಕಾಣುತ್ತಿರುವುದು ಇದೇ ಮೊದಲು.
ದಂಗಲ್ ನಂತೆ ತಾರೆ ಜಮೀನ್ ಪರ್ ಕೂಡ ನನಗೆ ತುಂಬಾ ಇಷ್ಟ. ಪಿಕೆ, ತ್ರಿ ಈಡಿಯಟ್ಸ್, ಲಗಾನ್ ಕೂಡ ಅಷ್ಟೇ ಇಷ್ಟ. ನಾನು ಇವುಗಳ ಮಧ್ಯೆ ವ್ಯತ್ಯಾಸ ಹೇಳಲು ಸಾಧ್ಯವಿಲ್ಲ. ಎಲ್ಲ ಚಿತ್ರಗಳೂ ನನಗೆ ಸಮನಾಗಿ ಮುಖ್ಯವಾಗಿವೆ ಎಂದು ಐಎಎನ್ ಎಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ದಂಗಲ್ ನ ಯಶಸ್ಸು ತಮ್ಮ ಮೇಲೆ ಒತ್ತಡವನ್ನುಂಟುಮಾಡಿದೆಯೇ ಎಂದು ಕೇಳಿದಾಗ, ಇಲ್ಲ, ನನಗೆ ಅಂತಹ ಒತ್ತಡದ ಅನುಭವವಾಗುತ್ತಿಲ್ಲ. ಕ್ರಿಯಾಶೀಲ ತೀರ್ಮಾನಕ್ಕೆ ಸಂಬಂಧಪಟ್ಟಂತೆ ನಾನು ಮನಸ್ಸಿನ ಮಾತನ್ನು ಕೇಳುತ್ತೇನೆ. ಮುಂದೆ ಮಾಡಬೇಕಾದ ಕೆಲಸಕ್ಕೆ ಕೂಡ ನನ್ನ ಹೃದಯದ ಮಾತನ್ನು ಕೇಳುತ್ತೇನೆ. ನನ್ನ  ಹಿಂದಿನ ಚಿತ್ರದ ಯಶಸ್ಸು ಮುಂದಿನ ಚಿತ್ರದ ಮೇಲೆ ಪರಿಣಾಮ ಬೀರಿಲ್ಲ  ಎನ್ನುತ್ತಾರೆ.
ಅಮೀರ್ ಖಾನ್ ಸದ್ಯ ವಿಜಯ್ ಕೃಷ್ಣ ಆಚಾರ್ಯ ಅವರ ಥಗ್ಸ್ ಆಫ್ ಮಾಲ್ಗುಡಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರ ಶೂಟಿಂಗ್ ಸದ್ಯ ಮಾಲ್ಟಾದಲ್ಲಿ ನಡೆಯುತ್ತಿದೆ. ಅಮೀರ್ ಅವರ ನಂತರದ ಚಿತ್ರ ಸೀಕ್ರೇಟ್ ಸೂಪರ್ ಸ್ಟಾರ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT