ಹೃತಿಕ್ ರೋಶನ್-ರಾಕೇಶ್ ರೋಶನ್
ಮುಂಬೈ: ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಾಕೇಶ್ ರೋಶನ್ ಬಾಲಿವುಡ್ ನಲ್ಲಿ ೫೦ ವಸಂತಗಳನ್ನು ಪೂರೈಸಿದ್ದಾರೆ. ಈ ಸಂದರ್ಭವನ್ನು ಅವರ ಪುತ್ರ ಜನಪ್ರಿಯ ನಟ ಹೃತಿಕ್ ರೋಶನ್ ಸಂಭ್ರಮಿಸಿದ್ದಾರೆ.
ರಾಕೇಶ್ ರೋಶನ್ ತಮ್ಮ ಸಿನೆಮಾ ವೃತ್ತಿ ಜೀವನವನ್ನು ೧೯೬೭ರಲ್ಲಿ ಪ್ರಾರಂಭಿಸಿದ್ದರು ಮತ್ತು ೧೯೭೦ ರಲ್ಲಿ 'ಘರ್ ಘರ್ ಕಿ ಕಹಾನಿ' ಸಿನೆಮಾದ ಮೂಲಕ ನಟನೆಯಲ್ಲಿಯೂ ಪಾದಾರ್ಪಣೆ ಮಾಡಿದ್ದರು. ನಂತರ 'ಖಟ್ಟ ಮೀಠಾ', 'ಖೇಲ್ ಖೇಲ್ ಮೇ', 'ಖೂಬ್ಸೂರತ್' ಮುಂತಾದ ಸಿನೆಮಾಗಳಲ್ಲಿ ನಟಿಸಿ ರಂಜಿಸಿದ್ದರು.
"ಸಿನೆಮಾದಲ್ಲಿ ಅಪ್ಪನ ೫೦ ವಸಂತಗಳ ಪಯಣವನ್ನು ಸಂಭ್ರಮಿಸುತ್ತಿದ್ದೇನೆ. ಆದರೆ ಅವರು ಕಚೇರಿಯಲ್ಲಿದ್ದು, ೧೦೦ಕ್ಕೆ ಕೆಲಸ ಮಾಡುತ್ತಿದ್ದಾರೆ. ಅಪ್ಪ ಧನ್ಯವಾದಗಳು, ನಮಗೆಲ್ಲ ಉದಾಹರಣೆಯಾಗಿ ನಿಂತದ್ದಕ್ಕೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಅಪ್ಪ" ಎಂದು ಹೃತಿಕ್ ತಮ್ಮ ತಂದೆಯವರ ಜೊತೆಗಿನ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
೧೯೮೭ ರಲ್ಲಿ ರಾಕೇಶ್ 'ಖುದ್ಗರ್ಜ್' ನಿರ್ದೇಶಿಸುವ ಮೂಲಕ ನಿರ್ದೇಶನಕಕ್ಕೂ ಪಾದಾರ್ಪಣೆ ಮಾಡಿದ್ದರು. ಅಪ್ಪ-ಮಗನ ಜೋಡಿ 'ಕಹೋ ನಾ ಪ್ಯಾರ್ ಹೈ', 'ಕೋಯಿ ಮಿಲ್ ಗಯಾ' ಮತ್ತು 'ಕ್ರಿಶ್ ೩' ಸಿನೆಮಾಗಳನ್ನು ಕೂಡ ನೀಡಿದೆ.
೧೯೮೮ರ 'ಖೂನ್ ಭಾರಿ ಮಾಂಗ್' ಸಿನೆಮಾದಲ್ಲಿ ರಾಕೇಶ್ ಅವರೊಟ್ಟಿಗೆ ನಟಿಸಿದ್ದ ಕಬೀರ್ ಬೇಡಿ ಕೂಡ ಟ್ವೀಟ್ ಮಾಡಿದ್ದು "ದೊಡ್ಡ ಅಭಿನಂದನೆಗಳು! ಸಿನೆಮಾದಲ್ಲಿ ರಾಕೇಶ್ ರೋಶನ್ ಗೆ ಅದ್ಭುತ ೫೦ ವರ್ಷಗಳು! ಅವರು ಇನ್ನೈವತ್ತು ಪೂರೈಸಲಿ ಎಂದು ಹಾರೈಸುತ್ತೇನೆ" ಎಂದು ಬರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos