ನವದೆಹಲಿ: ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಅತ್ಯುತ್ತಮ ಉದಾಹರಣೆ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದ್ದಾರೆ.
ಐಎಎನ್ಎಸ್ ಗೆ ನೀಡಿರುವ ಇ-ಮೇಲ್ ಸಂದರ್ಶನದಲ್ಲಿ ಬಾಹುಬಲಿ ಚಿತ್ರದ ಬಗ್ಗೆ ಮಾತನಾಡಿರುವ ಶಾರೂಖ್ ಖಾನ್, ನಾನು ಬಾಹುಬಲಿ ಮೊದಲ ಭಾಗವನ್ನು ನೋಡಿದ್ದೇನೆ, ಆದರೆ 2 ನೇ ಭಾಗವನ್ನು ನೋಡಿಲ್ಲ. ಆದರೆ ಬಾಹುಬಲಿ ಅತ್ಯಂತ ಸ್ಪೂರ್ತಿದಾಯಕ ಚಿತ್ರವಾಗಿದೆ ಎಂದಿದ್ದಾರೆ.
ಭಾರತೀಯ ಸಿನಿಮದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ತಂತ್ರಜ್ಞಾನದ ವ್ಯಾಪ್ತಿ ಕಡಿಮೆ ಇದ್ದಾಗಲೂ ಭಾರತೀಯ ಚಿತ್ರ ರಂಗ ಅತ್ಯುತ್ತಮ ಸಿನಿಮಾಗಳನ್ನು ನೀಡಿದೆ. ಕೇವಲ ವೀಕ್ಷಕರ ಸಂಖ್ಯೆಯಷ್ಟೇ ಅಲ್ಲದೇ ದೊಡ್ಡ ಸಿನಿಮಾ ಮಾಡಿ ಅದರ ವ್ಯಾಪ್ತಿಯನ್ನು ಹೆಚ್ಚಿಸಬೇಕೆಂದರೆ ಅದಕ್ಕೆ ಅತಿ ಹೆಚ್ಚು ಧೈರ್ಯ ಬೇಕಾಗುತ್ತದೆ. ಧೈರ್ಯವಿಲ್ಲದಿದ್ದರೆ ಸಿನಿಮಾದ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಉದಾಹರಣೆಯಾಗಿದ್ದು, ರಾಜಮೌಳಿ ಸಿನಿಮಾಗಳು ಸ್ಪೂರ್ತಿದಾಯಕವಾಗಿರುತ್ತದೆ ಎಂದು ಶಾರೂಖ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.