ಗಾಯಕ ಅಭಿಜಿತ್ ಭಟ್ಟಾಚಾರ್ಯ 
ಬಾಲಿವುಡ್

ಗಾಯಕ ಅಭಿಜಿತ್ ಹೊಸ ಟ್ವಿಟ್ಟರ್ ಖಾತೆ ಸಹ ವಜಾ!

ನಿಂದನಾತ್ಮಕ ಮತ್ತು ಅವಹೇಳನಕಾರಿ ಮಾತುಗಳನ್ನು ಬರೆದಿದ್ದಕ್ಕೆ ಖಾತೆ ವಜಾ ಮಾಡಿಸಿಕೊಂಡಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಒಂದು ವಾರದ ನಂತರ ಮತ್ತೊಂದು ಖಾತೆಯನ್ನು ತೆರೆದಿದ್ದರು.

ಮುಂಬೈ: ನಿಂದನಾತ್ಮಕ ಮತ್ತು ಅವಹೇಳನಕಾರಿ ಮಾತುಗಳನ್ನು ಬರೆದಿದ್ದಕ್ಕೆ ಖಾತೆ ವಜಾ ಮಾಡಿಸಿಕೊಂಡಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಒಂದು ವಾರದ ನಂತರ ಮತ್ತೊಂದು ಖಾತೆಯನ್ನು ತೆರೆದಿದ್ದರು. ಸೋಮವಾರ ಬೆಳಗ್ಗೆ ತೆರೆದಿದ್ದ @ಸಿಂಗರ್ ಅಭಿಜಿತ್ ಖಾತೆಯನ್ನು ಕೂಡ ರಾತ್ರಿಯೊಳಗೆ ಟ್ವಿಟ್ಟರ್ ಸಂಸ್ಥೆ ವಜಾಗೊಳಿಸಿದೆ. 
ಸೋಮವಾರ ಅವರ ಹೊಸ ಖಾತೆಯಲ್ಲಿ ಹಾಕಿದ್ದ ವಿಡಿಯೋವೊಂದರಲ್ಲಿ "ನನ್ನ ಧ್ವನಿಯನ್ನು ಅಡಗಿಸಲು ಜನ ಪ್ರಯತ್ನಿಸುತ್ತಿದ್ದಾರೆ. ದೇಶ ಮತ್ತು ಭಾರತೀಯ ಸೇನೆಯ ವಿರುದ್ಧ ಮಾತನಾಡುವುವರ ವಿರುದ್ಧ ನಾನು. ಇದು ನನ್ನ ಹೊಸ ಟ್ವಿಟ್ಟರ್ ಖಾತೆ" ಎಂದಿದ್ದರು. 
ಅಲ್ಲದೆ "ನನ್ನ ಪರಿಶೀಲಿತ ಖಾತೆ ಮತ್ತೆ ಹಿಂದಿರುಗುವವರೆಗೆ ದಯವಿಟ್ಟು ಇದನ್ನು ಅನುಸರಿಸಿ. ನನ್ನ ಹೆಸರಿನಲ್ಲಿರುವ ಉಳಿದೆಲ್ಲಾ ಖಾತೆಗಳು ನಕಲು ಮತ್ತು ನನ್ನ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸುತ್ತಿವೆ" ಎಂದು ಕೂಡ ಅವರು ಹೇಳಿದ್ದರು. 
ಎರಡನೇ ಖಾತೆಯ ವಿವರಗಳಲ್ಲಿ "ನಾನೇ ಅತ್ಯುತ್ತಮ... ನಾನೇ ಅತ್ಯುತ್ತಮ" ಎಂದು ೨೦೦೦ನೆ ಇಸವಿಯ 'ಫಿರ್ ಬಿ ದಿಲ್ ಹೈ ಹಿಂದೂಸ್ತಾನಿ' ಸಿನೆಮಾದ ಜನಪ್ರಿಯ ಹಾಡೊಂದರ ಸಾಲನ್ನು ಬರೆದುಕೊಂಡಿದ್ದರು. 
ಜೆ ಎನ್ ಯು ವಿದ್ಯಾರ್ಥಿ-ಕಾರ್ಯಕರ್ತೆ ಶೆಹ್ಲಾ ರಶೀದ್ ಅವರ ಬಗ್ಗೆ ಅಸಭ್ಯ ರೀತಿಯಲ್ಲಿ ನಿಂದನಾತ್ಮಕ ಪ್ರತಿಕ್ರಿಯೆ ನೀಡಿದ್ದರಿಂದ ಟ್ವಿಟ್ಟರ್ ಮೇ ೨೩ ರಂದು ಅಭಿಜಿತ್ ಅವರ ಪರಿಶೀಲಿತ ಖಾತೆಯನ್ನು ವಜಾಗೊಳಿಸಿತ್ತು. ನಂತರ ಗಾಯಕ ಟ್ವಿಟ್ಟರ್ ಅನ್ನು ದೇಶ ವಿರೋಧಿ, ಮೋದಿ ವಿರೋಧಿ ಎಂದೆಲ್ಲಾ ನಿಂದಿಸಿ ಆರೋಪ ಮಾಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT