ಫರ್ಹಾನ್ ಅಖ್ತರ್ 
ಬಾಲಿವುಡ್

ಚಿತ್ರೋದ್ಯಮದಲ್ಲಿ ಒಗ್ಗಟ್ಟಿನ ಕೊರತೆ ಇದೆ: ಪದ್ಮಾವತಿ ವಿವಾದ ಕುರಿತು ಫರ್ಹಾನ್ ಅಖ್ತರ್

ದುರದೃಷ್ಟವಶಾತ್, ನಮ್ಮನ್ನು ನಾವೇ ದೂಷಿಸಬೇಕಾಗಿದೆ. ನಾವು ಕೇವಲ ಬೆರೆಯವರ ಕಡೆ ಬೆಟ್ಟು ಮಾಡಬಾರದು ಎಂದು ಬಾಲಿವುಡ್ ನಟ....

ಮುಂಬೈ: ದುರದೃಷ್ಟವಶಾತ್, ನಮ್ಮನ್ನು ನಾವೇ ದೂಷಿಸಬೇಕಾಗಿದೆ. ನಾವು ಕೇವಲ ಬೆರೆಯವರ ಕಡೆ ಬೆಟ್ಟು ಮಾಡಬಾರದು ಎಂದು ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರು ಬುಧವಾರ ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಫರ್ಹಾನ್ ಅಖ್ತರ್ ಅವರು, ಚಿತ್ರೋದ್ಯಮದಲ್ಲಿ ಸಾಕಷ್ಟು ಒಗ್ಗಟ್ಟಿನ ಕೊರತೆ ಇದೆ ಎಂದು ಹೇಳುವ ಮೂಲಕ ಪದ್ಮಾವತಿ ಚಿತ್ರದ ವಿವಾದ ಹಾಗೂ ಇತರೆ ಎರಡು ಪ್ರಾದೇಶಿಕ ಚಿತ್ರಗಳನ್ನು ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್ಎಫ್ ಐ)ದಿಂದ ಕೈಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರೋದ್ಯಮ ಒಂದು ಸಣ್ಣ ಉದ್ಯಮವಾಗಿದ್ದು, ಇಲ್ಲಿ ಪ್ರತಿಯೊಬ್ಬರು ತಮ್ಮ ಚಿತ್ರ ಬಿಡುಗಡೆ ಮಾಡುವ ಮುನ್ನ ಸಾಕಷ್ಟು ಹೆದರುತ್ತಾರೆ. ಆದರೆ ಇರುವ ಕೆಲವೇ ಜನರಲ್ಲೂ ಒಗ್ಗಟ್ಟು ಮೂಡಿಸುವ ಅಗತ್ಯವಿದೆ. ಈ ಮೂಲಕ ತಾವು ಬಯಸುವ ರೀತಿಯಲ್ಲಿ ಚಿತ್ರವನ್ನು ನಿರ್ಮಿಸಬೇಕು ಎಂದು ಫರ್ಹಾನ್ ಹೇಳಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿ ಅವರ ಪದ್ಮಾವತಿ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮರಾಠಿ ಚಿತ್ರ 'ನುಡೆ' ಮತ್ತು ಮಲೆಯಾಳಂ ಚಿತ್ರ 'ಎಸ್ ದುರ್ಗ'ವನ್ನು ಅಂತರಾಷ್ಟ್ರೀಯ ಚಿತ್ರೋತ್ವದಿಂದ ಕೈಬಿಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ