ಹೇಮ ಮಾಲಿನಿ ಮತ್ತು ದೀಪಿಕಾ ಪಡುಕೋಣೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ 
ಬಾಲಿವುಡ್

ದೀಪಿಕಾ ಪಡುಕೋಣೆ 'ಹೊಸ ಜಮಾನಾದ ಡ್ರೀಮ್ ಗರ್ಲ್' : ಹೇಮಾ ಮಾಲಿನಿ

ನಟಿ ದೀಪಿಕಾ ಪಡುಕೋಣೆ ಇಂದಿನ ಜಮಾನಾದ ಕನಸಿನ ಕನ್ಯೆ, ಹೀಗೆಂದು ಹೇಳಿದವರು ಹಿರಿಯ ನಟಿ ಅಭಿಮಾನಿಗಳಿಂದ ಕನಸಿನ ಕನ್ಯೆ ...

ನವದೆಹಲಿ: ನಟಿ ದೀಪಿಕಾ ಪಡುಕೋಣೆ ಇಂದಿನ ಜಮಾನಾದ ಕನಸಿನ ಕನ್ಯೆ, ಹೀಗೆಂದು ಹೇಳಿದವರು ಹಿರಿಯ ನಟಿ, ಅಭಿಮಾನಿಗಳಿಂದ ಕನಸಿನ ಕನ್ಯೆ ಎಂದು ಕರೆಸಿಕೊಂಡಿರುವ ಹೇಮ ಮಾಲಿನಿ. 
ಹೇಮ ಮಾಲಿನಿಯವರ 69ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಇತ್ತೀಚೆಗೆ ಮುಂಬೈನ ಉಪ ನಗರದಲ್ಲಿರುವ ಹೊಟೇಲ್ ನಲ್ಲಿ ಅವರ ಜೀವನ ಚರಿತ್ರೆ ಪುಸ್ತಕವನ್ನು ದೀಪಿಕಾ ಪಡುಕೋಣೆ ಬಿಡುಗಡೆ ಮಾಡಿದ್ದರು. 
ತಾನು ದೀಪಿಕಾ ಪಡುಕೋಣೆಯ ನಟನೆ, ಸಿನಿಮಾಗಳನ್ನು ಬಹಳ ಇಷ್ಟಪಟ್ಟಿದ್ದೇನೆ. ಇಂದು ಪುಸ್ತಕ ಬಿಡುಗಡೆಗೆ ದೀಪಿಕಾ ಬಂದಿರುವುದು ಬಹಳ ಸಂತೋಷವಾಯಿತು ಎಂದರು.
ಇಂದಿನ ಡ್ರೀಮ್ ಗರ್ಲ್ ಯಾರು ಎಂದು ಕೇಳಿದಾಗ ಹೇಮ ಮಾಲಿನಿಯವರು ತಟ್ಟನೆ ದೀಪಿಕಾ ಕಡೆಗೆ ಕೈತೋರಿಸಿ, ದೀಪಿಕಾ ಇಂದಿನ ಡ್ರೀಮ್ ಗರ್ಲ್ ಎಂದು ಕರೆಸಿಕೊಳ್ಳಲು ಅರ್ಹ ನಟಿ ಎಂದು ತೋರಿಸಿದರು.
ಹಿರಿಯ ನಟಿಯ ಹೊಗಳಿಕೆಯಿಂದ ತಮಾಷಾ ಚಿತ್ರದ ನಟಿ ದೀಪಿಕಾ ಬಹಳ ಸಂತೋಷಗೊಂಡರು.
ಹೇಮ ಮಾಲಿನಿಯವರ ಜೀವನ ಚರಿತ್ರೆ 'ಬಿಯಾಂಡ್ ದಿ ಡ್ರೀಮ್ ಗರ್ಲ್' ಪುಸ್ತಕವನ್ನು ಪತ್ರಕರ್ತ ರಾಮ್ ಕಮಲ್ ಮುಖರ್ಜಿ ಬರೆದಿದ್ದಾರೆ. 15 ವರ್ಷಗಳ ಹಿಂದೆ ಇವರು ಹೇಮ ಮಾಲಿನಿ ಬಗ್ಗೆ ಪುಸ್ತಕವೊಂದನ್ನು ಬರೆದಿದ್ದರು. 
ಹೇಮ ಮಾಲಿನಿ ಜೀವನ ಚರಿತ್ರೆ ಪುಸ್ತಕಕ್ಕೆ ಮುನ್ನುಡಿಯನ್ನು ಪ್ರಧಾನಿ ನರೇಂದ್ರ ಮೋದಿ ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಂಬಿಕೆಯೇ ಭಾರತದ ಬಲಿಷ್ಠ ಕರೆನ್ಸಿ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

ಭಾರತ - ಅಮೆರಿಕ ಒಪ್ಪಂದ ನಮ್ಮ ರೈತರ ಹಿತಾಸಕ್ತಿ ರಕ್ಷಿಸುತ್ತದೆ; ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ: ಗೋಯಲ್

ಟಿ20 ವಿಶ್ವಕಪ್ 2026: ಅಮೆರಿಕ ಬೌಲರ್ ಗಳ ಎದುರು ಪರದಾಡಿದ ಭಾರತ, ಸೂರ್ಯ ಏಕಾಂಗಿ ಹೋರಾಟ, USAಗೆ 162 ರನ್ ಸವಾಲಿನ ಗುರಿ!

ಕೇರಳ: ಸಿಜೆ ರಾಯ್ ಬೆನ್ನಲ್ಲೇ ಕರ್ನಾಟಕ ಮೂಲದ ಮತ್ತೊಬ್ಬ ಉದ್ಯಮಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ!

ಪಶ್ಚಿಮ ಬಂಗಾಳ: SIRನಲ್ಲಿ ಬಿಜೆಪಿ ಹಸ್ತಕ್ಷೇಪದ ವಿರುದ್ಧ 'ಡೆಡ್' ಮತದಾರರಿಂದ ಪ್ರತಿಭಟನೆ!

SCROLL FOR NEXT