ರಜನಿಕಾಂತ್ 
ಬಾಲಿವುಡ್

ನನ್ನ ನಿಜ ಜೀವನದಲ್ಲಿ ನಟಿಸಲು ಬಯಸುವುದಿಲ್ಲ: ರಜನಿಕಾಂತ್

ನನ್ನ ನಿಜ ಜೀವನದಲ್ಲಿ ನಾನು ನಟಿಸಲು ಬಯಸುವುದಿಲ್ಲ, ಯಾಕೆಂದರೆ ಯಾರೊಬ್ಬರೂ ನನಗೆ ನಿಜ ಜೀವನದಲ್ಲಿ ಅಭಿನಯಿಸಲು ಪಾವತಿಸುವುದಿಲ್ಲ ಎಂದು ದಕ್ಷಿಣ...

ದುಬೈ: ನನ್ನ ನಿಜ ಜೀವನದಲ್ಲಿ ನಾನು ನಟಿಸಲು ಬಯಸುವುದಿಲ್ಲ,  ಯಾಕೆಂದರೆ ಯಾರೊಬ್ಬರೂ ನನಗೆ ನಿಜ ಜೀವನದಲ್ಲಿ ಅಭಿನಯಿಸಲು ಪಾವತಿಸುವುದಿಲ್ಲ ಎಂದು ದಕ್ಷಿಣ ಭಾರತ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಹೇಳಿದ್ದಾರೆ. 
ಕಾಲಿವುಡ್ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಬರೋಬ್ಬರಿ 400 ಕೋಟಿ ವೆಚ್ಚದಲ್ಲಿ 2.0 ಚಿತ್ರ ಸಿದ್ಧವಾಗುತ್ತಿದೆ. ಇನ್ನು ಅಕ್ಟೋಬರ್ 27 ರಂದು ಅದ್ಧೂರಿಯಾಗಿ ಚಿತ್ರದ ಹಾಡುಗಳು ಲೋಕಾರ್ಪಣೆಗೊಳ್ಳಲಿದ್ದು ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜನಿಕಾಂತ್ ಅವರು 2.0 ಚಿತ್ರ ಇದುವರೆಗಿನ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಿತ್ರವಾಗಲಿದೆ. ಜಾಗತಿಕ ಮತ್ತು ಭಾರತೀಯ ಪ್ರೇಕ್ಷಕರ ಮನ ಗೆಲ್ಲುತ್ತದೆ ಎಂದರು. 
ದುಬೈನ ಬುರ್ಜ್ ಪಾರ್ಕ್ ನಲ್ಲಿ ಬರೋಬ್ಬರಿ 12 ಕೋಟಿ ರುಪಾಯಿ ವೆಚ್ಚದಲ್ಲಿ ಆಡಿಯೋ ಸಿಡಿ ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಖ್ಯಾತ ನಟ ಕಮಲ್ ಹಾಸನ್, ಧನುಷ್ ಸೇರಿ ಭಾರತೀಯ ಸ್ಟಾರ್ ನಟರ ದಂಡೇ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 
ಕಾಲಿವುಡ್ ನಲ್ಲಿ 2010ರಲ್ಲಿ ಎಂದಿರನ್ ಚಿತ್ರ ತೆರೆಕಂಡಿತ್ತು. ಹೈಪ್ ಕ್ರಿಯೆಟ್ ಮಾಡಿತ್ತು. ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಸಹ ಮಾಡಿತ್ತು. ಆದರೆ ಆ ಚಿತ್ರಕ್ಕೂ 2.0 ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ನೋಡಲು ಎಂದಿರನ್ ರೀತಿ ಕಾಣಿಸುವುದರಿಂದ ಸೀಕ್ವೆಲ್ ಎಂದು ಎಲ್ಲೆಡೆ ಸುದ್ದಿ ಹರಡುತ್ತಿದೆ. ಇದೊಂದು ಬೇರೆ ರೀತಿಯ ಸಿನಿಮಾ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಚಿತ್ರವಿದು. ಮಾಮೂಲಿ ಆ್ಯಕ್ಷನ್ ಸಿನಿಮಾ ಇದಲ್ಲ ಎಂದು ನಿರ್ದೇಶಕ ಶಂಕರ್ ಹೇಳಿದ್ದಾರೆ. 
ಚಿತ್ರದಲ್ಲಿ ಖ್ಯಾತ ನಟರ ದಂಡೇ ಇದೆ. ರಜನಿಕಾಂತ್ ಗೆ ಆ್ಯಮಿ ಜಾಕ್ಸನ್ ನಾಯಕಿಯಾಗಿ ಅಭಿನಯಿಸುತ್ತಿದ್ದು, ವಿಲನ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!