ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಸುಸ್ಸೇನ್ ಖಾನ್ 
ಬಾಲಿವುಡ್

ಹೃತಿಕ್ ವಿರುದ್ದ ಕಂಗನಾ ಬಾಂಬ್: ಮಾಜಿ ಪತಿ ಬೆಂಬಲಕ್ಕೆ ನಿಂತ ಸುಸ್ಸೇನ್ ಖಾನ್

ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ದ ನಟಿ ಕಂಗನಾ ರನೌತ್ ಅವರು ಗಂಭೀರ ಆರೋಪ ಮಾಡುತ್ತಿದ್ದು, ಪತಿಯಿಂದ ದೂರಾಗಿ ವರ್ಷಗಳೇ ಕಳೆದರೂ ಮಾಜಿ ಪತಿಯ ಬೆಂಬಲಕ್ಕೆ ಸುಸ್ಸಾನೆ ಖಾನ್ ಅವರು ನಿಂತಿದ್ದಾರೆ...

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ದ ನಟಿ ಕಂಗನಾ ರನೌತ್ ಅವರು ಗಂಭೀರ ಆರೋಪ ಮಾಡುತ್ತಿದ್ದು, ಪತಿಯಿಂದ ದೂರಾಗಿ ವರ್ಷಗಳೇ ಕಳೆದರೂ ಮಾಜಿ ಪತಿಯ ಬೆಂಬಲಕ್ಕೆ ಸುಸ್ಸೇನ್ ಖಾನ್ ಅವರು ನಿಂತಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ನಟಿ ಕಂಗನಾ ಅವರು, ಹೃತಿಕ್ ಮತ್ತು ಅವರ ತಂದೆ ರಾಕೇಶ್ ಅವರು ನನ್ನ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಹೃತಿಕ್ ನನ್ನ ವೈಯಕ್ತಿಯ ಇಮೇಲ್ ಬಳಕೆ ಮಾಡುತ್ತಿದ್ದರು. ಅದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ವೇಳೆ ಹೃತಿಕ್ ತಂದೆಗೆ ವಿಷಯ ತಿಳಿಸಿದ್ದಾಗ, ನನಗೆ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ, ಅವರೂ ನೀಡಿದ್ದ ಭರವಸೆಯಂತೆ ನಡೆದಿರಲಿಲ್ಲ. ಈ ವೇಳೆ ಬಹಿರಂಗವಾಗಿ ದನಿಯೆತ್ತಿದ್ದಾಗ ಚಿತ್ರರಂಗದ ಕೆಲ ವ್ಯಕ್ತಿಗಳಿಂದ ಬೆದರಿಕೆಗಳ ಕರೆ ಬಂದಿತ್ತು ಎಂದು ಹೇಳಿದ್ದರು. ಅಲ್ಲದೆ ಹೃತಿಕ್ ಮತ್ತು ಅವರ ನಡುವೆ ಯಾವ ರೀತಿಯ ಸಂಬಂಧ ಇತ್ತು ಹಾಗೂ ವಿವಾದದ ಬಳಿಕ ಎಂತಹ ಪರಿಸ್ಥಿತಿ ಎದುರಿಸಬೇಕಾಗಿ ಬಂದು ಎಂಬುದರ ಬಗ್ಗೆಯೂ ಹೇಳಿಕೊಂಡಿದ್ದರು. 
ಹೃತಿಕ್ ಕುರಿತಂತೆ ಕಂಗನಾ ರನೌತ್ ಅವರು ನೀಡಿದ್ದ ಈ ಹೇಳಿಕೆ ಬಾಲಿವುಡ್ ನಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ. ಇದೀಗ ಮಾಜಿ ಪತಿಯ ಬೆಂಬಲಕ್ಕೆ ಸುಸ್ಸೇನ್ ಖಾನ್ ಅವರು ಬಂದಿದ್ದಾರೆ. 
ಕಂಗನಾ ಮಾಡಿರುವ ಆರೋಪ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹೃತಿಕ್'ಗೆ ಬೆಂಬಲ ವ್ಯಕ್ತಪಡಿಸಿ ಸುಸ್ಸೇನ್ ಖಾನ್ ಟ್ವೀಟ್ ಮಾಡಿದ್ದಾರೆ. 
ಹೃತಿಕ್ ಜೊತೆಗಿರುವ ಫೋಟೋವೊಂದನ್ನು ಟ್ವೀಟ್ ಮಾಡಿ ಹೇಳಿಕೆ ನೀಡಿರುವ ಸುಸ್ಸೇನ್ ಖಾನ್, ಸತ್ಯದ ಹೋರಾಟದಲ್ಲಿ ಹೃತಿಕ್ ರೋಷನ್ ಗೆಲುವು ಸಾಧಿಸುತ್ತಾರೆಂದು ನನಗೆ ನಂಬಿಕೆಯಿದೆ. ಯಾವುದೇ ಆರೋಪವಾಗಲೀ, ಯಾವುದೇ ರೀತಿಯ ದುರುದ್ದೇಶಗಳು ಎಷ್ಟೇ ದೊಡ್ಡದಿದ್ದರೂ ಒಳ್ಳೆಯ ಹೃದಯ ಎಂದಿಗೂ ಗೆಲವು ಸಾಧಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ