ಬಾಲಿವುಡ್

'ಸಿಕ್ಕಿಂ ಬಂಡುಕೋರರ ರಾಜ್ಯ' ಅಂತು ಕ್ಷಮೆಯಾಚಿಸಿದ ಪ್ರಿಯಾಂಕಾ ಛೋಪ್ರಾ

ಸಿಕ್ಕಿಂ ರಾಜ್ಯ ಬಂಡುಕೋರರ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಕೊನೆಗೂ ಸಿಕ್ಕಿಂ ಸರ್ಕಾರ...

ಟೊರೊಂಟೊ: ಸಿಕ್ಕಿಂ ರಾಜ್ಯ ಬಂಡುಕೋರರ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಕೊನೆಗೂ ಸಿಕ್ಕಿಂ ಸರ್ಕಾರ ಮತ್ತು ಜನರಲ್ಲಿ ಕ್ಷಮೆ ಕೋರಿದ್ದಾರೆ. 
ನನ್ನ ಹೇಳಿಕೆಯಿಂದ ಸಿಕ್ಕಿ ಪ್ರಜೆಗಳ ಮನಸ್ಸಿಗೆ ತುಂಬಾ ನೋವಾಗಿದೆ. ಸಿಕ್ಕಿ ಶಾಂತಿಯುತ ರಾಜ್ಯ ಹಾಗೂ ಹಸಿರು ರಾಜ್ಯ. ಹೀಗಾಗಿ ನಾನು ಮನಪೂರ್ವಕವಾಗಿ ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ. 
ಟೊರೆಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೊರಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ಸಿಕ್ಕಿಂ ರಾಜ್ಯದ ಬಗ್ಗೆ ಪ್ರಿಯಾಂಕಾ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ತಮ್ಮ ನಿರ್ಮಾಣದ ಸಿಕ್ಕಿಂ ಚಿತ್ರ 'ಪಹುನಾ: ದ ಲಿಟ್ಲ್ ವಿಸಿಟರ್ಸ್' ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಇದೊಂದು ಸಿಕ್ಕಿಂ ಚಿತ್ರ. ಸಿಕ್ಕಿಂ ಈಶಾನ್ಯ ಭಾರತದ ಸಣ್ಣ ರಾಜ್ಯವಾಗಿದ್ದು ಇಲ್ಲಿ ಚಲನಚಿತ್ರೋದ್ಯಮವಿರಲಿಲ್ಲ ಮತ್ತು ಇದುವರೆಗೆ ಯಾರೂ ಚಿತ್ರಗಳನ್ನು ಮಾಡಿರಲಿಲ್ಲ. ಇಲ್ಲಿ ಬಂಡುಕೋರರ ಸಮಸ್ಯೆ ಮತ್ತು ಇತ್ಯಾದಿ ತೊಂದರೆಗಳೇ ಹೆಚ್ಚು. ಹೀಗಾಗಿ ಇದುವೇ ಸಿಕ್ಕಿಂ ರಾಜ್ಯದ ಮೊದಲ ಚಿತ್ರವಾಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.
ಇದಕ್ಕೆ ಸಿಕ್ಕಿಂ ರಾಜ್ಯದವರಿಂದ ಮತ್ತು ಬೇರೆಯವರಿಂದ ಟ್ವಿಟ್ಟರ್ ನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸಿಕ್ಕಿಂ ಒಂದು ಶಾಂತಿಯುತ ರಾಜ್ಯವಾಗಿದ್ದು ಇಲ್ಲಿ ಬಂಡುಕೋರರ ಸಮಸ್ಯೆಯಿಲ್ಲ. ಜವಾಬ್ದಾರಿಯುತವಾಗಿ ಮಾತನಾಡಬೇಡಿ ಎಂದು ಸಿಕ್ಕಿಂ ರಾಜಧಾನಿ ಗಾಂಗ್ ಟಾಕ್ ನಿಂದ ಒಬ್ಬರು ಹೇಳಿದ್ದರೆ ಮತ್ತೊಬ್ಬರು, ಸೆಲೆಬ್ರಿಟಿಗಳು ರಾಜಕೀಯವಾಗಿ ಅನಕ್ಷರಸ್ಥರಾಗಿರುತ್ತಾರೆ. ಈ ಹಿಂದೆ ಕೆಲವು ಸೆಲೆಬ್ರಿಟಿಗಳಿಗೆ ಭಾರತದ ರಾಷ್ಟ್ರಪತಿ ಯಾರು ಎಂದು ಕೇಳಿದರೆ ಗೊತ್ತಿರಲಿಲ್ಲ. ಹೀಗಾಗಿ ಅವರಿಂದ ರಾಜಕೀಯ ಜ್ಞಾನವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರೇ, ಮತ್ತೊಬ್ಬರು ಸಿಕ್ಕಿಂ ರಾಜ್ಯದ ಮೊದಲ ಸಿನಿಮಾ ಪಹುನಾ ಅಲ್ಲ ಎಂದು ಕೂಡ ಕಮೆಂಟ್ ಮಾಡಿದ್ದಾರೆ. 
ಇಲ್ಲಿ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಪ್ರಿಯಾಂಕಾ ಛೋಪ್ರಾ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರದ ಪ್ರವಾಸೋದ್ಯಮ ಅಂಬಾಸಿಡರ್ ಕೂಡ ಹೌದು. ಪ್ರಿಯಾಂಕಾ ಛೋಪ್ರಾ ನಿರ್ಮಾಣದ ಪಹುನಾ ಚಿತ್ರ ಮೂವರು ನೇಪಾಳಿ ಮಕ್ಕಳ ಕುರಿತಾಗಿದ್ದು, ಅವರು ತಮ್ಮ ಪೋಷಕರಿಂದ ಬೇರ್ಪಟ್ಟಿರುತ್ತಾರೆ. ನೇಪಾಳದಲ್ಲಿ ಮಾವೋವಾದಿಗಳಿಂದ ತಪ್ಪಿಸಿಕೊಂಡು ಸಿಕ್ಕಿಂಗೆ ಹೋಗುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT