ಪ್ರಿಯಾಂಕಾ ಚೋಪ್ರಾ, ನಿಖ್ ಜೊನಸ್ 
ಬಾಲಿವುಡ್

ಮುಂಬೈ: ನಿಖ್ ಜೊನಸ್, ಆತನ ಪೋಷಕರನ್ನು ಸ್ವಾಗತಿಸಿದ ಪ್ರಿಯಾಂಕಾ

ಹಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಮುಂಬೈಗೆ ಆಗಮಿಸಿದ...

ಮುಂಬೈ: ಹಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಮುಂಬೈಗೆ ಆಗಮಿಸಿದ ತಮ್ಮ ಭಾವಿ ಪತಿ, ಅಮೆರಿಕದ ಗಾಯಕ ನಿಖ್ ಜೊನಸ್ ಹಾಗೂ ಆತನ ಪೋಷಕರನ್ನು ಬರಮಾಡಿಕೊಂಡಿದ್ದಾರೆ.
ನಿನ್ನೆ ತಡರಾತ್ರಿ ಕುಟುಂಬ ಸಮೇತ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಿಖ್ ಜೊನ್ ಅವರನ್ನು ಪ್ರಿಯಾಂಕಾ ಚೋಪ್ರಾ ಅವರು, ಭಾರತಕ್ಕೆ ಸ್ವಾಗತ ನಿಖ್ ಎಂದು ಹೇಳುವ ಮೂಲಕ ಸ್ವಾಗತಿಸಿದ್ದಾರೆ.
ವರದಿಗಳ ಪ್ರಕಾರ ಈಗಾಗಲೇ ನಿಖ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಪ್ರಿಯಾಂಕಾ, ಈಗ ಭಾರತದಲ್ಲಿ ತಮ್ಮ ಕುಟುಂಬದವರು, ಬಂಧುಗಳು ಮತ್ತು ಸ್ನೇಹಿತರಿಗೆ ಔತಣಕೂಟ ಏರ್ಪಡಿಸುವ ಮೂಲಕ ನಿಖ್ ಜೊತೆಗಿನ ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ. 
ನಿಖ್ ಜೊನಸ್ ತಮ್ಮ ತಂದೆ ಕೇವಿನ್ ಜೊನಸ್ ಮತ್ತು ತಾಯಿ ಡೆನಿಸ್ ಅವರೊಂದಿಗೆ ಮುಂಬೈ ಆಗಮಿಸಿದ್ದು, ಶನಿವಾರ ನಡೆಯುವ ಎಂಗೇಜ್ ಮೆಂಟ್ ಪಾರ್ಟಿಯಲ್ಲಿ ಭಾಗವಹಿಸಲಿದ್ದಾರೆ. ಮದುವೆಗೆ ಮೊದಲು ಎರಡೂ ಕುಟುಂಬಗಳು ಒಟ್ಟು ಸೇರಬೇಕೆಂದು ಚೋಪ್ರಾ ಕುಟುಂಬ ಈ ಪಾರ್ಟಿಯನ್ನು ಆಯೋಜಿಸಿದೆ.
ಪ್ರಿಯಾಂಕಾ ಚೋಪ್ರಾ ತಮ್ಮ ಮದುವೆಯ ಕಾರ್ಯಕ್ರಮಗಳು ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ನಡೆಯಬೇಕೆಂದು ಬಯಸುತ್ತಿದ್ದು, ಭಾರತೀಯ ಶೈಲಿಯಲ್ಲಿಯೇ ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಪ್ರಿಯಾಂಕಾ ಎರಡು ಸಮಾರಂಭಗಳಲ್ಲಿ ತಮ್ಮ ಎಂಗೇಜ್ ಮೆಂಟ್ ಉಂಗುರವನ್ನು ಕ್ಯಾಮರಾ ಕಣ್ಣುಗಳಿಂದ ಮುಚ್ಚಿಡಲು ಬಯಸಿದ್ದರು. ಎರಡು ತಿಂಗಳ ಕಾಲ ಡೇಟಿಂಗ್ ಮಾಡಿ ಮದುವೆ ಮಾಡಿಕೊಳ್ಳಲು ನಿಶ್ಚಯಿಸಿರುವ ಪ್ರಿಯಾಂಕಾ ಮತ್ತು ನಿಖ್ ಮೊದಲ ಬಾರಿಗೆ ಭೇಟಿಯಾದದ್ದು 2017ರ ಮೆಟ್ ಗಾಲಾ ಕಾರ್ಯಕ್ರಮದಲ್ಲಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT