ಬಾಲಿವುಡ್

ಕೆಲಸಗಾರರಿಗೆ ಹಣ ನೀಡದಿದ್ದರೆ 'ಮಣಿಕರ್ಣಿಕಾ' ಪ್ರಚಾರಕ್ಕೆ ಬರಲ್ಲ: ಕಂಗನಾ

Lingaraj Badiger
ಮುಂಬೈ: ಒಂದು ವೇಳೆ 'ಮಣಿಕರ್ಣಿಕಾ' ಚಿತ್ರದ ನಿರ್ಮಾಪಕರು ಚಿತ್ರಕ್ಕಾಗಿ ದುಡಿದ ಕೆಲಸಗಾರರಿಗೆ ಸಂಬಳ ನೀಡದಿದ್ದರೆ ನಾನು ಚಿತ್ರದ ಪ್ರಚಾರಕ್ಕೆ ಹೋಗುವುದಿಲ್ಲ ಚಿತ್ರದ ನಾಯಕಿ ಕಂಗನಾ ರಣಾವತ್ ಅವರು ಹೇಳಿದ್ದಾರೆ.
ಕೆಲಸಗಾರರಿಗೆ ಸಂಬಳ ನೀಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಂಗನಾ ಅವರು, ಕೆಲಸಗಾರರ ಸಮಸ್ಯೆ ಪರಿಹರಿಸದಿದ್ದರೆ ನಾನು ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗುವುದಿಲ್ಲ ಎಂದು ನಿರ್ಮಾಪಕರಿಗೆ ಎಚ್ಚರಿಕೆ ನೀಡಿದ್ದಾರೆ.
ಚಿತ್ರೋದ್ಯಮದಲ್ಲಿ ತಂತ್ರಜ್ಞರನ್ನು ಮತ್ತು ಕೆಲಸಗಾರರನ್ನು ಕಡೆಗಣಿಸಲಾಗುತ್ತಿದೆ. ಆದರೆ ಇದನ್ನು ನಾನು ಸಹಿಸುವುದಿಲ್ಲ ಎಂದು ಕಂಗನಾ ಹೇಳಿದ್ದಾರೆ,
ಕೆಲಸಗಾರರಿಗೆ ಹಣ ನೀಡದಿರುವುದು ದುಃಖದ ವಿಚಾರ. ಇಂತಹ ವಿಚಾರಗಳನ್ನು ನಾನು ಯಾವಾಗಲೂ ವಿರೋಧಿಸುತ್ತೇನೆ. ಚಿತ್ರೋದ್ಯಮದಲ್ಲಿ ನಟರಿಗೆ ಏಕೆ ಅಷ್ಟೊಂದು ಪ್ರಾಮುಖ್ಯತೆ ನೀಡಲಾಗುತ್ತಿದೆ ಅಂತ ನನಗೆ ಗೊತ್ತಿಲ್ಲ. ಆದರೆ ಚಿತ್ರೋದ್ಯಮದ ನಿಜವಾದ ಹೀರೋಗಳು ಅವರೇ ಎಂದು ಕ್ವೀನ್ ತಿಳಿಸಿದ್ದಾರೆ.
ಚಿತ್ರದ ನಿರ್ವಪಕರು ಕೆಲ ತಿಂಗಳಿಂದ ಸಂಬಳವನ್ನೇ ನೀಡಿಲ್ಲ ಎಂದು ಆರೋಪಿಸಿರುವ ಕೆಲಸಗಾರರು, ಚಿತ್ರೀಕರಣಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ಅಲ್ಲದೆ ಫೆಡರೇಷನ್  ಆಫ್ ವೆಸ್ಟರ್ನ್ ಇಂಡಿಯನ್ ಸಿನಿ ಎಂಪ್ಲಾಯಿಸ್ ಮೊರೆ ಹೋಗಿದ್ದಾರೆ.
ಕಾರ್ವಿುಕರಿಗೆ 45 ಲಕ್ಷ ರು. ತಾಂತ್ರಿಕ ತಂಡಕ್ಕೆ 90 ಲಕ್ಷ ರು. ಮತ್ತು ಜೂನಿಯರ್ ಕಲಾವಿದರಿಗೆ 25 ಲಕ್ಷ ರು. ಸೇರಿ ಒಟ್ಟು 1.6 ಕೋಟಿ ರು.ಗಳನ್ನು ನಿರ್ವಪಕ ಕಮಲ್ ಜೈನ್ ನೀಡಬೇಕಿದೆ. ಸದ್ಯ ಅವರು ಯಾರ ಕೈಗೂ ಸಿಗದೆ, ಫೋನ್​ಗೂ ಸಿಗದೆ ಅಡ್ಡಾಡುತ್ತಿದ್ದಾರಂತೆ
ಜ.25ಕ್ಕೆ ರಿಲೀಸ್ ಆಗಲಿರುವ ‘ಮಣಿಕರ್ಣಿಕಾ’ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.
SCROLL FOR NEXT