ಮುಂಬಯಿ: 2018ನೇ ಸಾಲಿನ ಭಾರತೀಯ ಸೆಲೆಬ್ರಿಟಿಗಳ ಫೋರ್ಬ್ಸ್ ಪಟ್ಟಿ ಬಿಡುಗಡೆ ಮಾಡಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ಸತತ ಮೂರನೇ ಬಾರಿಯೂ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ..ಪೋರ್ಬ್ಸ್ ಪಟ್ಟಿಯಲ್ಲಿರುವ 100 ಭಾರತೀಯ ಗಣ್ಯರ ಪೈಕಿ ಸಲ್ಮಾನ್ ಖಾನ್ ಸಿನಿಮಾ, ಉತ್ಪನ್ನಗಳ ಜಾಹೀರಾತು ಮೊದಲಾದವುಗಳಿಂದ ಒಟ್ಟು 253 ಕೋಟಿ ರು ಆದಾಯ ಗಳಿಸಿದ್ದು ಆ ಮೂಲಕ ಸಲ್ಮಾನ್ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.
ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ-228 ಕೋಟಿ, ಹಾಗೂ ಮೂರನೇ ಸ್ಥಾನದಲ್ಲಿರುವ ನಟ ಅಕ್ಷಯ್ ಕುಮಾರ್ 185 ಕೋಟಿ ರು ಗಳಿಸಿದ್ದಾರೆ.
ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಕ್ಷಯ್ ಕುಮಾರ್, ಈ ಬಾರಿ 13ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ನಟಿ ದೀಪಿಕಾ ಪಡುಕೋಣೆ 112 ಕೋಟಿ ರು ಗಳಿಸಿಕೊಳ್ಳುವ ಮೂಲಕ 4ನ್ ಸ್ಥಾನದಲ್ಲಿದ್ದಾರೆ, ದೀಪಿಕಾ ನಟನೆಯ ಪದ್ಮಾವತ್ ಸಿನಿಮಾ 300 ಕೋಟಿ ರು ಕ್ಲಬ್ ಸೇರಿತ್ತು. ಜೊತೆಗ ಅವರು ಹಲವು ಉತ್ಪನ್ನಗಳ ಪ್ರಚಾರ ರಾಯಭಾರಿ ಕೂಡ ಆಗಿದ್ದರು.