ಸಂಗ್ರಹ ಚಿತ್ರ 
ಬಾಲಿವುಡ್

ಲೈಂಗಿಕ ವಿಚಾರಗಳ ಕುರಿತು ತೋರಿಸಲು ಸಂತೋಷವಾಗುತ್ತದೆ: ಏಕ್ತಾ ಕಪೂರ್

ಲೈಂಗಿಕತೆ ಕುರಿತು ತೋರಿಸಲು ಸಂತೋಷವಾಗುತ್ತದೆ ಎಂದು ಖ್ಯಾತ ಕಿರುತೆರೆ ನಿರ್ಮಾಪಕಿ ಏಕ್ತಾ ಕಪೂರ್ ಹೇಳಿದ್ದಾರೆ.

ಮುಂಬೈ: ಲೈಂಗಿಕತೆ ಕುರಿತು ತೋರಿಸಲು ಸಂತೋಷವಾಗುತ್ತದೆ ಎಂದು ಖ್ಯಾತ ಕಿರುತೆರೆ ನಿರ್ಮಾಪಕಿ ಏಕ್ತಾ ಕಪೂರ್ ಹೇಳಿದ್ದಾರೆ.
ತಮ್ಮ ಬಹು ನಿರೀಕ್ಷಿತ 'ಅಪಹರಣ್' ವೆಬ್ ಸಿರೀಸ್ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಯಾವುದೇ ಒಂದು ವಿಚಾರ ಹೆಚ್ಚು ಜನಪ್ರಿಯವಾದರೆ ಅದರ ಪರ ಮತ್ತು ವಿರೋಧ ವಾದಗಳು ಸಾಮಾನ್ಯ. ಅಂತೆಯೇ ತಮ್ಮ ಅಪಹರಣ್ ವೆಬ್ ಸಿರೀಸ್ ಕುರಿತೂ ಚರ್ಚೆಗಳಾಗುತ್ತಿವೆ. ಇದಕ್ಕೆಲ್ಲಾ ತಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ಒಂದು ಕಾರ್ಯ ಮಾಡಲು ಮುಂದಾದಗ ಅದರ ಸಾಧಕ-ಭಾದಕಗಳನ್ನು ನೋಡಿಯೇ ನಾವು ಕೈ ಹಾಕುತ್ತೇವೆ. ಆದರೆ ಅವುಗಳಿಗೆ ಎದುರಾಗಬಹುದಾದ ಟೀಕೆಗಳ ಕುರಿತು ಆಲೋಚಿಸುತ್ತಾ ಕುಳಿತರೆ ಆ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಲೈಂಗಿಕತೆಯ ತೋರಿಸಲು ತಮಗೆ ಸಂತೋಷವಾಗುತ್ತದೆ ಎಂದು ಹೇಳಿರುವ ಏಕ್ತಾ, ಆನ್ ಸ್ಕ್ರೀನ್ ನಲ್ಲಿ ಲೈಂಗಿಕತೆ ಕುರಿತು ತೋರಿಸಲು ತಮಗೆ ಯಾವುದೇ ಅಭ್ಯಂತರವಿಲ್ಲ. ಲೈಂಗಿಕ ವಿಚಾರಗಳು ಮುಕ್ತವಾಗಿ ಚರ್ಚೆಯಾಗಬೇಕು. ಆದರೆ ನಮ್ಮ ದೇಶದಲ್ಲಿ ಈ ಬಗ್ಗೆ ದ್ವಂದ್ವ ನೀತಿ ಇದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಅಂತೆಯೇ ತಮ್ಮ ನಿರ್ಮಾಣದ ನಾಗಿನ್ ಧಾರಾವಾಹಿ ಕುರಿತು ಮಾತನಾಡಿದ ಅವರು, ನಾಗಿನ್ ತಮ್ಮ ಸಂಸ್ಥೆಯ ಅತ್ಯಂತ ಯಶಸ್ವೀ ಧಾರಾವಾಹಿ. ನಾನು ಹ್ಯಾರಿಪಾಟರ್, ಗೇಮ್ ಆಫ್ ಥ್ರಾನ್ಸ್ ನಂತಹ ಫ್ಯಾಂಟಸಿ ಸರಣಿಗಳನ್ನು ನೋಡಿದ್ದೇನೆ ಮತ್ತು ಇಷ್ಟಪಟ್ಟಿದ್ದೇನೆ. ಅಂತಹುದೇ ಪ್ರಯತ್ನ ನಮ್ಮಲ್ಲೂ ಆಗಬೇಕು ಎಂಬುದ ನನ್ನ ಬಯಕೆಯಾಗಿತ್ತು. ನಾಗಿನ್ ಮೂಲಕ ಅದು ಈಡೇರಿದೆ ಎಂದು ಅವರು ಹೇಳಿದರು.
ಇನ್ನು ಭಾರಿ ವಿವಾದಕ್ಕೀಡಾಗಿರುವ ಅಪಹರಣ್ ವೆಬ್ ಸಿರೀಸ್ ಅನ್ನು ಸಿದ್ಧಾರ್ಥ್ ಸೇನ್ ಗುಪ್ತಾ ಅವರು ನಿರ್ದೇಶಿಸುತ್ತಿದ್ದು, ವರುಣ್ ಬಡೋಲಾ ಸಂಭಾಷಣೆ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ