ಬಾಲಿವುಡ್ ಹಿರಿಯ ನಟಿ, ಮೋಹಕ ತಾರೆ ಶ್ರೀದೇವಿ ಅವರು ಹೃದಯಾಘಾತದಿಂದ ವಿಧಿವಶರಾದ ಸುದ್ದಿ ಬಹಿರಂಗವಾಗುವ ಕೆಲವೇ ಕ್ಷಣಗಳ ಮುನ್ನ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮಾಡಿದ್ದ ಟ್ವೀಟ್ ಈಗ ವೈರಲ್ ಆಗಿದೆ.
ಅಮಿತಾಬ್ ಬಚ್ಚನ್ ಶನಿವಾರ ತಡರಾತ್ರಿ ಸುಮಾರು 1.15ರ ವೇಳೆಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಯಾಕೋ ಗೊತ್ತಿಲ್ಲ, ವಿಚಿತ್ರ ಭೀತಿಯಾಗುತ್ತಿದೆ ಎಂದ ಟ್ವೀಟಿಸಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಶ್ರೀದೇವಿ ಅವರ ಸಾವಿರ ಸುದ್ದಿ ಬಹಿರಂಗವಾಗಿದೆ.
ಅಮಿತಾಬ್ ಬಚ್ಚನ್ ಅವರ ಈ ಟ್ವೀಟ್ ಅನ್ನು 8 ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ. ಸುಮಾರು ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.