ಬೆಂಗಳೂರು: ದಕ್ಷಿಣದ ಬೆಡಗಿಯರು ಬಾಲಿವುಡ್ ನಲ್ಲಿ ಮಿಂಚುವುದು ನಮಗೇನೂ ಹೊಸತಲ್ಲ. ಆದರೆ ಇದೀಗ ಮಾಡೆಲ್ ಕ್ಷೇತ್ರದಲ್ಲಿ ಹೆಸರಾಗಿದ್ದ ಗಾಯತ್ರಿ ಅಯ್ಯರ್ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವುದು ಮಾತ್ರ ಅತ್ಯಂತ ಖುಷಿಯ ಸಂಗತಿಯಾಗಿದೆ.
ಅಜಯ್ ದೇವಗನ್ ನಾಯಕನಾಗಿರುವ 'ರೈಡ್' ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿರುವ ಗಾಯತ್ರಿಗೆ ಅಲ್ಲಿ ಭಾರೀ ಜನಪ್ರಿಯತೆ ಸಿಕ್ಕುತ್ತಿದೆ. ರೈಡ್ ನಲ್ಲಿ ಇಲಿಯಾನ ಡಿ'ಸೋಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಗಾಯತ್ರಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಕ್ಸ್ ಪ್ರೆಸ್ ನೊಡನೆ ಮಾತನಾಡಿದ ಗಾಯತ್ರಿ ತನ್ನ ಚಿತ್ರದ ಬಗೆಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. "ಬಿ-ಟೌನ್ ನಲ್ಲಿ ಹೆಸರಾಗಲು ನಾನು ಸಿದ್ದತೆ ನಡೆಸಿದ್ದೇನೆ, ನಾನು ಅನೇಕ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಮಾಡಿದ್ದು ಈ ಚಿತ್ರದಲ್ಲಿ ನಟಿಸುವ ಅವಕಾಶ ಅನಿರೀಕ್ಷಿತವಾಗಿ ನನಗೆ ಒಲಿದಿದೆ. ನಾನು ಈ ಚಿತ್ರಕ್ಕೆ ಆಯ್ಕೆಯಾಗುವ ಮುನ್ನ ಸಾಕಷ್ಟು ಪರಿಶೀಲನೆಗಳು ನಡೆದವು. ನಾಲ್ಕು ಸುತ್ತಿನ ಈ ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಅಂತಿಮವಾಗಿ ಯಶಸ್ವಿಯಾಗಿದ್ದೇನೆ."
"ಈ ಚಿತ್ರವು ವಾಸ್ತವಕ್ಕೆ ಹತ್ತಿರವಿದೆ, ಚಿತ್ರದಲ್ಲಿನ ನನ್ನ ಪಾತ್ರಕ್ಕೆ ಅತ್ಯಂತ ಪ್ರಾಮುಖ್ಯತೆ ಇದ್ದು ನಾನು ಇಂತಹಾ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಬಹುದಿನಗಳಿಂದ ಇಚ್ಚೆ ಇತ್ತು. ಗಾಡ್ ಪಾದರ್ ಗಳಿಲ್ಲದೆ ಬಿ ಟೌನ್ ನಲ್ಲಿ ಹೆಸರು ಮಾಡುವುದು ನಿಜವಾಗಿಯೂ ಕಠಿಣವಾಗಿದೆ. ನಾನು ಅದೊಮ್ಮೆ ಇದೆಲ್ಲವನ್ನೂ ಬಿಟ್ಟು ಬಿಡುವುದಕ್ಕೂ ತೀರ್ಮಾನಿಸಿದೆ, ಆದರೆ ನನಗೆ ಮುಂಬೈ ಬಗೆಗೆ ಭರವಸೆ ಇತ್ತು. ಈ ನಗರ ನನಗೆ ಬೇಕನಿಸಿದ್ದನ್ನು ನೀಡುತ್ತದೆ ಎನ್ನುವ ನಂಬಿಕೆ ಇತ್ತು.
"ಲಕ್ನೋಯಿ ಹುಡುಗಿ ಪಾತ್ರವನ್ನು ನಿರ್ವಹಿಸಲು ಅಯ್ಯರ್ ಹುಡುಗಿಯನ್ನು ಆಯ್ದುಕೊಂಡಿದ್ದು ನನಗೆ ಅಚ್ಚರಿ ತಂದಿತ್ತು. . ಇದು ಗ್ಲ್ಯಾಮರ್ ಲೆಸ್ ಪಾತ್ರವಾಗಿದ್ದು ದೇಹ ಪ್ರದರ್ಶನಕ್ಕೆ ಇಲ್ಲಿ ಹೆಚ್ಚು ಅವಕಾಶಗಳಿಲ್ಲ. ನಾನು ಆದಷ್ಟು ಸಹಜವಾಗಿ ಅಭಿನಯಿಸಿದ್ದೇನೆ." ಗಾಯತ್ರಿ ಹೇಳಿದ್ದಾರೆ
ಅಮೀರ್, ನೋ ಒನ್ ಕಿಲ್ಸ್ ಜೆಸ್ಸಿಕಾ ದಂತಹಾ ಚಿತ್ರಗಳನ್ನು ನೀಡಿದ್ದ ರಾಜ್ ಕುಮಾರ್ ಗುಪ್ತಾ ನಿರ್ದೇಶನದ ರೈಡ್ ಟಿ-ಸಿರೀಸ್ ಹಾಗೂ ಕುಮಾರ್ ಮಂಗತ್ ಅವರ ಸಹಯೋಗದೊಡನೆ ಚಿತ್ರ ನಿರ್ಮಾಣವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos