'ಗಾಡ್, ಸೆಕ್ಸ್ ಅಂಡ್ ಟ್ರೂತ್' ಚಿತ್ರದ ಸ್ಟಿಲ್
ಮುಂಬೈ: ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, ಹೆಣ್ಣಿನ ದೇಹದಷ್ಟು ಸುಂದರವಾದ ಸ್ಥಳ ಮತ್ತು ಸ್ಮಾರಕ ಈ ಭೂಮಿ ಮೇಲೆ ಮತ್ತೊಂದಿಲ್ಲ ಎಂದು ಬುಧವಾರ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚಿಗಷ್ಟೇ ಅಮೆರಿಕದ ಪೋರ್ನ್ ಸ್ಟಾರ್ ಮಿಯಾ ಮಾಲ್ಕೋವಾ ಅಭಿನಯದ ತಮ್ಮ ಮುಂಬರುವ ಚಿತ್ರ 'ಗಾಡ್, ಸೆಕ್ಸ್ ಅಂಡ್ ಟ್ರೂತ್' ಟ್ರೇಲರನ್ನು ಬಿಡುಗಡೆ ಮಾಡಿದ್ದ ರಾಮ್ ಗೋಪಾಲ್ ವರ್ಮಾ, ಹೆಣ್ಣಿನ ದೇಹಕ್ಕಿಂತ ಅತ್ಯಂತ ಸುಂದರವಾದ ಸ್ಥಳ ಮತ್ತು ಸ್ಮಾರಕ ಈ ಭೂಮಿ ಮೇಲೆ ಮತ್ತೊಂದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
'ಹೆಣ್ಣಿನ ದೇಹದಷ್ಟು ಸುಂದರವಾದ ಸ್ಥಳ ಮತ್ತು ಸ್ಮಾರಕ ಈ ಭೂಮಿ ಮೇಲೆ ಮತ್ತೊಂದಿಲ್ಲ ಎಂದು ನಾನು ಬಲವಾಗಿ ನಂಬಿದ್ದೇನೆ' ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.
ವರ್ಮಾ ಅವರ 'ಗಾಡ್, ಸೆಕ್ಸ್ ಅಂಡ್ ಟ್ರೂತ್' ಚಿತ್ರದ ಸಂಪೂರ್ಣ ಚಿತ್ರೀಕರಣ ಯೂರೋಪ್ ನಲ್ಲಿ ನಡೆದಿದ್ದು, ಮಂಗಳವಾರ ಅದರ ಟ್ರೇಲರ್ ಬಿಡುಗಡೆ ಮಾಡಿದ್ದರು. ಈ ಸಿನಿಮಾಗೆ ಸಂಬಂಧಿಸಿದ ಸಂಪೂರ್ಣ ವೀಡಿಯೋವನ್ನು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬಿಡುಗಡೆ ಮಾಡುವುದಾಗಿ ವರ್ಮಾ ಘೋಷಿಸಿದ್ದಾರೆ.