ಬಾಲಿವುಡ್

ಹಾಡುಗಾರರಿಗೆ ಜೊತೆಯಾಗುವುದು ಪಕ್ಕವಾದ್ಯದವರ ಮೂಲ ಕೆಲಸ:ಜಾಕಿರ್ ಹುಸೇನ್

Sumana Upadhyaya
ಕೋಲ್ಕತ್ತಾ: ಗಾಯಕರ ಜೊತೆ ಸೇರಿಕೊಳ್ಳುವುದು ಪಕ್ಕವಾದ್ಯದವರ ಮೂಲ ಕೆಲಸವಾಗಿರುತ್ತದೆ ಎಂದು ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಹೇಳಿದ್ದಾರೆ.
ಪಕ್ಕವಾದ್ಯದಲ್ಲಿರುವವರು ಎಷ್ಟೇ ಸುಂದರವಾಗಿ ಪಕ್ಕವಾದ್ಯ ನುಡಿಸಲಿ, ಆತ ಎಷ್ಟೇ ಖ್ಯಾತ ಕಲಾವಿದ ಕೂಡ ಆಗಿದ್ದರೂ ಕೂಡ ಶಾಸ್ತ್ರೀಯ ಸಂಗೀತಗಾರರು ಮತ್ತು ಹಾಡುಗಾರರ ಜೊತೆ ಅವರನ್ನು ಅನುಸರಿಸಿಕೊಂಡು ನುಡಿಸಬೇಕಾಗುತ್ತದೆ ಎಂದು ಜಾಕಿರ್ ಹುಸೇನ್ ಟಾಟಾ ಸ್ಟೀಲ್ ಕೋಲ್ಕತ್ತಾ ಲೈಬ್ರೆರಿ ಸಭೆಯಲ್ಲಿ ಚರ್ಚೆ ವೇಳೆ ಹೇಳಿದರು.
ಹಾಡುಗಾರರಿಗೆ ಸಹಾಯ ಮಾಡುವುದು, ಜೊತೆಯಾಗುವುದು ನನ್ನ ಕೆಲಸ. ತಬಲಾ ನುಡಿಸುವವರಿಗೆ ಇದು ಸಾ ಮಾನ್ಯವಾದ ಮತ್ತು ಯಾವುದೇ ಕಳಂಕವಿಲ್ಲದ ಕೆಲಸವಾಗಿರುತ್ತದೆ ಎಂದು ಪದ್ಮ ಭೂಷಣ ಮಾಂತ್ರಿಕ ಜಾಕಿರ್ ಹುಸೇನ್ ಹೇಳಿದ್ದಾರೆ.
ಬಾಲಿವುಡ್ ಹಾಡುಗಳಿಂದ ಶಾಸ್ತ್ರೀಯ ಸಂಗೀತಕ್ಕೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆಯೇ ಎಂದು ಕೇಳಿದಾಗ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಜನಪ್ರಿಯವಾಗಿ ಬೆಳೆಯುತ್ತಿದೆ.ಹೌದು ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಹಾಡುಗಳನ್ನು ಇಷ್ಟಪಡುವ ಪ್ರೇಕ್ಷಕರು ಶೇಕಡಾ 200ರಷ್ಟು ಹೆಚ್ಚಾಗಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಶೇಕಡಾ 40ರಿಂದ 50ರಷ್ಟಿದ್ದ ಶಾಸ್ತ್ರೀಯ ಸಂಗೀತ ಪ್ರೇಕ್ಷಕರು ಇತ್ತೀಚೆಗೆ 10ಸಾವಿರದಿಂದ 20 ಸಾವಿರದಷ್ಟು ಹೆಚ್ಚಾಗಿದ್ದಾರೆ ಎಂದರು.
ಬಾಲಿವುಡ್ ಹಾಡುಗಾರರೊಂದಿಗೆ ತಮ್ಮ ಜನಪ್ರಿಯತೆಯನ್ನು ಹೋಲಿಸಿಕೊಳ್ಳುವ ಶಾಸ್ತ್ರೀಯ ಸಂಗೀತಗಾರರು ಆಡಂಬರ ಮತ್ತು ಅಹಂ ಭಾವದಿಂದ ಬಳಲುತ್ತಿದ್ದಾರೆ. ತಾವು ಏನು ತೋರಿಸಿಕೊಳ್ಳುತ್ತೇವೆ ಎಂಬುದನ್ನು ಮರೆಯುತ್ತಾರೆ ಎನ್ನುತ್ತಾರೆ ಈ ಹಿರಿಯ ಸಂಗೀತ ಕಲಾವಿದ.
ಭಾರತ ಶಾಸ್ತ್ರೀಯ ಸಂಗೀತಕ್ಕೆ ಉತ್ತಮ ಭವಿಷ್ಯವಿದ್ದು ಯುವಜನತೆಗೆ ಪ್ರೇಕ್ಷಕರ ಪ್ರಮುಖ ಭಾಗವಾಗಿ ರೂಪುಗೊಳ್ಳುತ್ತಾರೆ ಎಂದು ಜಾಕಿರ್ ಹುಸೇನ್ ಹೇಳುತ್ತಾರೆ.
SCROLL FOR NEXT