ಪ್ರಿಯಾಂಕಾ ಛೋಪ್ರಾ ವಿರುದ್ಧ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ 
ಬಾಲಿವುಡ್

ಅಮೆರಿಕನ್ ಟಿವಿ ಸರಣಿ' 'ಕ್ವಾಂಟಿಕೊ' ವಿವಾದ: ಪ್ರಿಯಾಂಕಾ ಛೋಪ್ರಾ ವಿರುದ್ಧ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ

ಬಾಲಿವುಡ್ ತಾರೆ ಪ್ರಿಯಾಂಕಾ ಛೋಪ್ರ ನಟಿಸಿದ್ದ ಅಮೆರಿಕನ್ ಟಿವಿ ಕಾರ್ಯಕ್ರಮ ಸರಣಿ ಕ್ವಾಂಟಿಕೊ ದಲ್ಲಿ ಭಾರತೀಯ ರಾಷ್ಟ್ರೀಯವಾದಿಗಳನ್ನು ಕಳಪೆಯಾಗಿ ತೋರಿಸಲಾಗಿದೆ.

ನವದೆಹಲಿ: ಬಾಲಿವುಡ್ ತಾರೆ ಪ್ರಿಯಾಂಕಾ ಛೋಪ್ರ  ನಟಿಸಿದ್ದ ಅಮೆರಿಕನ್ ಟಿವಿ ಕಾರ್ಯಕ್ರಮ ಸರಣಿ ಕ್ವಾಂಟಿಕೊ ದಲ್ಲಿ ಭಾರತೀಯ ರಾಷ್ಟ್ರೀಯವಾದಿಗಳನ್ನು ಕಳಪೆಯಾಗಿ ತೋರಿಸಲಾಗಿದೆ. ಎನ್ನುವ ಕಾರಣಕ್ಕೆ ನಟಿ ಪ್ರಿಯಾಂಕಾ  ಅವರ ವಿರುದ್ಧ ಹಿಂದುತ್ವವಾದಿಗಳ ಗುಂಪು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದೆ.
ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೋಲೀಸ್ ಠಾಣೆಯೆದುರು ಶನಿವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ನಟಿಯ ಪೋಸ್ಟರ್ಸ್, ಭಾವಚಿತ್ರಗಳನ್ನು ಸುಟ್ಟು ಹಾಕಿದ್ದಾರೆ.ಹಾಗೆಯೇ ಪ್ರಿಯಾಂಕಾ ವಿರುದ್ಧ ಘೋಷಣೆ ಕೂಗಿದ್ದಾರೆ.
ಕ್ವಾಂಟಿಕೊ ಸರಣಿಯ ಎಪಿಸೋಡ್ ಒಂದರಲ್ಲಿ ಸಿಐಎ ಆಪರೇಟಿವ್ ಅಲೆಕ್ಸ್ ಪ್ಯಾರಿಸ್ ನ ಪಾತ್ರಧಾರಿಯಾಗಿದ್ದ ಛೋಪ್ರಾ ಅವರನ್ನೊಳಗೊಂಡ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರೀಯವಾದಿಯೊಬ್ಬರು ಮ್ಯಾನ್ ಹಟನ್ ನಲ್ಲಿ ನಡೆದ ಬಾಂಬ್ ದಾಳಿಯ ಹಿಂದಿದ್ದಾರೆ ಆದರೆ ಅವರು ಪಾಕಿಸ್ತಾನವನ್ನು ಇದಕ್ಕೆ ಕಾರಣವೆನ್ನುತ್ತಿದ್ದಾರೆ ಎನ್ನುವ ರೀತಿ ತೋರಿಸಲಾಗಿತ್ತು
"ತಮ್ಮ ನಟನೆಗಾಗಿ ನಟಿ ಪ್ರಿಯಾಂಕಾ ಛೋಪ್ರಾ ಇಡೀ ರಾಷ್ಟ್ರದ ಕ್ಷಮೆ ಯಾಚಿಸಬೇಕು" ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿಂದು ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಹೇಳಿದ್ದಾರೆ.
"ಪ್ರಿಯಾಂಕಾ  ಭಾರತದಿಂದ ಮಿಸ್ ವರ್ಲ್ಡ್ ಆಗಿದ್ದರು. ಈಗ ಅವರು ದೇಶಕ್ಕೆ ಒಳ್ಳೆಯದನ್ನು ಮಾಡುತ್ತಿಲ್ಲ" ಎಂದು ಗುಪ್ತಾ  ದೂರಿದ್ದಾರೆ. 
ಜೂನ್ 1ರಂದು ಈ ಸರಣಿಯು ಮಾದ್ಯಮದಲ್ಲಿ ಪ್ರಸಾರ ಕಂಡಿದ್ದು ಈ ಸಂಬಂಧ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿವಾದಾತ್ಮಕ ಕಥಾವಸ್ತು ಹೊಂದಿರುವ ಈ ಸರಣಿಯಲ್ಲಿ ಕಾಣಿಸಿಕೊಳ್ಳಲು ಪ್ರಿಯಾಂಕಾ ಛೋಪ್ರಾ ಹೇಗೆ ಒಪ್ಪಿಗೆ ಸೂಚಿಸಿದ್ದರೆಂದು ಅವರ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಏತನ್ಮಧ್ಯೆ ಎಬಿಸಿ ಸ್ಟುಡಿಯೋಸ್ ಹಾಗೂ ಟಿವಿ ಸರಣಿಯ ನಿರ್ಮಾಪಕರು ಕೂಡ ಶುಕ್ರವಾರದಂದು ಘಟನೆ ಸಂಬಂಧ ಕ್ಷಮೆ ಯಾಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

'ನೀವು ಶಾಶ್ವತ ವಿಪತ್ತು ನಿಧಿ ಏಕೆ ರಚಿಸಿಲ್ಲ': ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಡಿ ಕೆ ಶಿವಕುಮಾರ್

ಟೈಗರ್‌ ಜಿಂದಾ ಹೈ, ಕಿಂಗ್‌ ಈಸ್ ಅಲೈವ್‌: CM ಬಗ್ಗೆ ಬೈರತಿ ಗುಣಗಾನ; ಯತೀಂದ್ರ ಹೇಳಿಕೆಗೆ ಕೆರಳಿ ಕೆಂಡವಾದ ಡಿಕೆಶಿ ಬಣ!

ದೇವನಹಳ್ಳಿಯ 1,777 ಎಕರೆ ಜಮೀನು 'ಶಾಶ್ವತ ವಿಶೇಷ ಕೃಷಿ ವಲಯ'; ಭೂಮಿ ಮಾರಾಟಕ್ಕೆ ಕಡಿವಾಣ ಇಲ್ಲ: ಸರ್ಕಾರ

SCROLL FOR NEXT