ಬಾಲಿವುಡ್

ರೋಹಿಂಗ್ಯಾ ನಿರಾಶ್ರಿತರ ಅನುಭವಗಳು ದುಃಖಕರ: ಪ್ರಿಯಾಂಕ ಚೋಪ್ರಾ

Manjula VN
ಮುಂಬೈ; ರೋಹಿಂಗ್ಯಾ ನಿರಾಶ್ರಿತರ ಕಥೆಗಳು ದುಃಖವನ್ನು ತರಿಸುತ್ತದೆ ಎಂದು ಯುಎನ್‌ಐಸಿಇಎಫ್ ರಾಯಭಾರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಗುರುವಾರ ಹೇಳಿದ್ದಾರೆ. 
ವಿಶ್ವರ ನಿರಾಶ್ರಿತರ ದಿನ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಪ್ರಿಯಾಂಕಾ ಚೋಪ್ರಾ ಅವರು, ಇಂದು ವಿಶ್ವ ನಿರಾಶ್ರಿತರ ದಿನ. 65 ಮಿಲಿಯನ್'ರಷ್ಟು ಜನರನ್ನು ತಮ್ಮ ತಮ್ಮ ಮನೆಗಳಿಂದ ಬಲವಂತದಿಂದ ಬೇರೆಡೆ ಹೋಗುವಂತೆ ಮಾಡಲಾಗುತ್ತಿದೆ. ಜೊರ್ಡನ್ ಮತ್ತು ಬಾಂಗ್ಲಾದೇಶದ ಹಲವು ಮಕ್ಕಳನ್ನು ನಾನು ಭೇಟಿ ಮಾಡಿದ್ದೆ. ಈ ವೇಳೆ ಹಲವರು ತಮ್ಮ ಕುಟುಂಬ ಸದಸ್ಯರನ್ನು ಹಾಗೂ ಸ್ನೇಹಿತರನ್ನು ಕಳೆದುಕೊಂಡಿರುವ ಬಗ್ಗೆ ಹೇಳಿದ್ದರು. 
ಇವರಲ್ಲಿ ಸಾಕಷ್ಟು ಮಂದಿ ಸರಿಯಾದ ಊಟ, ವಸತಿ, ಆರೋಗ್ಯ, ಶಿಕ್ಷಣವಿಲ್ಲದೆ ನರಳುತ್ತಿದ್ದಾರೆ. ಮಕ್ಕಳ ಕಥೆಗಳನ್ನು ಕೇಳಿದರೆ ದುಃಖವನ್ನು ತರಿಸುತ್ತದೆ. ವಿಶ್ವ ನಿರಾಶ್ರಿತರ ದಿನವಾದ ಇಂದು, ಯುಎನ್ಐಇಎಫ್ ಗುರಿಯಾಗಿರುವ ನಿರಾಶ್ರಿತ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದಕ್ಕೆ ಬೆಂಬಲ ನೀಡುತ್ತೇನೆಂದು ತಿಳಿಸಿದ್ದಾರೆ. ಅಲ್ಲದೆ, ಜೋರ್ಡನ್ ಮತ್ತು ಬಾಂಗ್ಲಾದೇಶದ ನಿರಾಶ್ರಿತ ಮಕ್ಕಳನ್ನು ಭೇಟಿಯಾದ ಸಂದರ್ಭದ ವಿಡಿಯೋವನ್ನು ಪ್ರಿಯಾಂಕಾ ಅವರು ಹಂಚಿಕೊಂಡಿದ್ದಾರೆ. 
SCROLL FOR NEXT