ಬಾಲಿವುಡ್ ನಟ ಸಂಜಯ್ ದತ್ 
ಬಾಲಿವುಡ್

ಸಂಜಯ್ ದತ್ ಹೆಸರಿಗೆ ವಿಲ್ ಬರೆದಿಟ್ಟು ಅಭಿಮಾನಿ ಸಾವು; ಮೃತರ ಕುಟುಂಬಕ್ಕೆ ಮರಳಿಸಿದ ನಟ

ಬಾಲಿವುಡ್ ನಟ ಸಂಜಯ್ ದತ್ ಅವರ ಹೆಸರಿಗೆ ಅಭಿಯಾನಿಯೊಬ್ಬರು ವಿಲ್ ಬರೆದು ಸಾವನ್ನಪ್ಪಿದ್ದು, ತನೆಲ್ಲಾ ಆಸ್ತಿಪಾಸ್ತಿಯ ವಾರಸುದಾರರ ಎಂದು ಬ್ಯಾಂಕಿಗೆ ಕಾಗದ ಬರೆದಿದ್ದಾರೆ.

ಮುಂಬೈ : ಬಾಲಿವುಡ್ ನಟ  ಸಂಜಯ್ ದತ್  ಅವರ ಹೆಸರಿಗೆ   ಅಭಿಯಾನಿಯೊಬ್ಬರು ವಿಲ್ ಬರೆದು ಸಾವನ್ನಪ್ಪಿದ್ದು, ತನೆಲ್ಲಾ ಆಸ್ತಿಪಾಸ್ತಿಯ ವಾರಸುದಾರರ ಎಂದು ಬ್ಯಾಂಕಿಗೂ ಪತ್ರ ರವಾಸಿದ್ದಾರೆ.ಈ ವಿಷಯ ತಿಳಿದು ಆಶ್ಚರ್ಯಗೊಂಡ ಸಂಜಯ್ ದತ್ ,ಮೃತರ ಕುಟುಂಬಕ್ಕೆ ಅದನ್ನು ಮರಳಿಸುವುದಾಗಿ   ಹೇಳಿದ್ದಾರೆ.


ಮಲಬಾರ್ ಹಿಲ್ ನಿವಾಸಿಯಾದ ನಿಶಿ ಹರಿಶ್ಚಂದ್ರ ತ್ರಿಪಾಠಿ   ಜನವರಿ 15 ರಂದು ಸಾವನ್ನಪ್ಪಿದ್ದರು. ಆಕೆ ಸಾಯುವ ಮುನ್ನಾ ವಿಲ್ ಬರೆದಿದ್ದು, ಸಂಜಯ್ ದತ್ ತನ್ನೆಲ್ಲಾ ಆಸ್ತಿಪಾಸ್ತಿಯ ವಾರಸುದಾರರ  ಎಂದು ಬ್ಯಾಂಕಿಗೆ ಪತ್ರ ಕೂಡಾ ಬರೆದಿದ್ದರು.

 ಜನವರಿ 29 ರಂದು ಪೊಲೀಸರು  ಈ ವಿಷಯವನ್ನು ಸಂಜಯ್ ದತ್ ಅವರಿಗೆ ತಿಳಿಸಿದ್ದಾರೆ.ಸಂಜಯ್ ದತ್ ಅವರೇ ತಮ್ಮ ಕಾನೂನು ಪ್ರತಿನಿಧಿ ಎಂದು ಬ್ಯಾಂಕ್ ಗೆ ಹೇಳಿಕೆ ನೀಡಿದ್ದು,ಕಾಯಿಲೆಯಿಂದ ನರಳುತ್ತಿರುವ ಕುಟುಂಬಕ್ಕೆ ಎಲ್ಲಾ ಹಣ ನೀಡುವಂತೆ ಆದೇ ಪತ್ರದಲ್ಲಿ ತಿಳಿಸಲಾಗಿದೆ.

 ಈ ವಿಷಯದ ಬಗ್ಗೆ ಮಾತನಾಡಲು  ಆಕೆಯ ಕುಟುಂಬಸ್ಥರು ನಿರಾಕರಿಸಿದ್ದಾರೆ.  ಕಾನೂನು ರೀತಿಯ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಎಲ್ಲಾ ಆಸ್ತಿಪಾಸ್ತಿಯನ್ನು ತ್ರಿಪಾಠಿ ಕುಟುಂಬಕ್ಕೆ ವರ್ಗಾಯಿಸಲಾಗುವುದು ಎಂದು ಸಂಜಯ್ ದತ್ ಪರ ವಕೀಲರು ತಿಳಿಸಿದ್ದಾರೆ.

ಕೆಲ ಅಭಿಮಾನಿಗಳು ತಮ್ಮ ಮಕ್ಕಳಿಗೆ ನೆಚ್ಚಿನ ನಟನ ಹೆಸರನ್ನು ಇಡುವುದನ್ನ ನೋಡಿದ್ದೇವೆ , ಕೇಳಿದ್ದೇವೆ , ಆದರೆ, ಇಂತಹ ಸಂಗತಿಗಳು ಇದೇ ಮೊದಲ ಎಂಬಂತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!