3 ನೇ ಪಾಣಿಪತ್ ಯುದ್ಧದ ಬಗ್ಗೆ ಸಿನಿಮಾ ಮಾಡಲಿರುವ ಅಶುತೋಷ್ ಗೋವಾರಿಕರ್
ಮುಂಬೈ: ಸಿನಿಮಾ ನಿರ್ದೇಶಕ ಅಶುತೋಷ್ ಗೋವಾರಿಕರ್ 3 ನೇ ಪಾಣಿಪತ್ ಯುದ್ಧದ ಬಗ್ಗೆ ಸಿನಿಮಾ ಮಾಡಲಿದ್ದಾರೆ.
ಸಾಮಾನ್ಯವಾಗಿ ಐತಿಹಾಸಿಕ ಘಟನೆಗಳನ್ನು ಸಿನಿಮಾ ಮಾಡುವ ಅಶುತೋಷ್ ಗೋವಾರಿಕರ್, ಈ ಬಾರಿ 3 ನೇ ಪಾಣಿಪತ್ ಯುದ್ಧವನ್ನು ಕಥಾವಸ್ತುವಾಗಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ. ಅರ್ಜುನ್ ಕಪೂರ್, ಸಂಜಯ್ ದತ್, ಕೀರ್ತಿ ಸನೂನ್ ಸಿನಿಮಾದಲ್ಲಿ ನಟಿಸಲಿದ್ದು ಐತಿಹಾಸಿಕ ಘಟನೆಯನ್ನು ಪರದೆ ಮೇಲೆ ತರುವುದಕ್ಕಾಗಿ ಅಶುತೋಷ್ ಗೋವಾರಿಕರ್ ವಿಷನ್ ವರ್ಲ್ಡ್ ನೊಂದಿಗೆ ಕೈ ಜೋಡಿಸಿದ್ದಾರೆ.
ಪಾತ್ರಗಳ ಬಗ್ಗೆ ಮಾತನಾಡಿರುವ ಗೋವಾರಿಕರ್, ನಾಮ್ ಸಿನಿಮಾದಲ್ಲಿ ಸಂಜಯ್ ಜೊತೆಗೆ ಕೆಲಸ ಮಾಡಿದ್ದೆ. ಈಗ ಅವರು ನಟಿಸುತ್ತಿರುವ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಗೋವಾರಿಕರ್ ಹೇಳಿದ್ದಾರೆ. ಅರ್ಜುನ್ ಕಪೂರ್ ಎರಡು ಬಾರಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ, ಇನ್ನು ಅತ್ಯುತ್ತಮ ಪ್ರದರ್ಶನ ನೀಡಬಲ್ಲ ಕೀರ್ತಿ ಇದ್ದಾರೆ ಈ ಎಲ್ಲಾ ನಟರ ಕಾಂಬಿನೇಷನ್ ನಲ್ಲಿ ಸಿನಿಮಾ ಮಾಡುತ್ತಿರುವುದು ಇದೇ ಮೊದಲಾಗಿದ್ದು 3 ನೇ ಪಾಣಿಪತ್ ಯುದ್ಧದ ಸಿನಿಮಾವನ್ನು ನಿರ್ದೇಶಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಮರಾಠ ಸಾಮ್ರಾಜ್ಯ ಅಫ್ಘಾನಿಸ್ಥಾನ, ಅಹ್ಮದ್ ಶಾ ಅಬ್ದಾಲಿ ಸೇರಿದಂತೆ ಆಕ್ರಮಣಕಾರಿ ಶಕ್ತಿಗಳ ವಿರುಧ್ದ ಹೋರಾಡಿದ ಐತಿಹಾಸಿಕ ಯುದ್ಧ 2019 ರ ಡಿ.06 ರಂದು ಬಿಡುಗಡೆಯಾಗುವ ಸಾಧ್ಯತೆ ಇದ್ದು ಸಿನಿಮಾವನ್ನು ಸುನಿತಾ ಗೋವಾರಿಕರ್ ನಿರ್ಮಿಸುತ್ತಿದ್ದಾರೆ.