ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ 
ಬಾಲಿವುಡ್

ಇಂದು, ನಾಳೆ ಇಟಲಿಯಲ್ಲಿ ದೀಪಿಕಾ-ರಣವೀರ್ ವಿವಾಹ: 700 ವರ್ಷ ಹಳೆಯ ವಿಲ್ಲಾದಲ್ಲಿ ಮಹೋತ್ಸವ

ಬಾಲಿವುಡ್'ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ವಿವಾಹ ಕಾರ್ಯಕ್ರಮ, ಬುಧವಾರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ...

ನವದೆಹಲಿ: ಬಾಲಿವುಡ್'ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ವಿವಾಹ ಕಾರ್ಯಕ್ರಮ, ಬುಧವಾರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ. 
ಬುಧವಾರ ಕೊಂಕಣಿ ಕನ್ನಡ ಶೈಲಿಯಲ್ಲಿ ಹಾಗೂ ಗುರುವಾರ ಸಿಂಧಿ ಸಂಪ್ರದಾಯದ ಶೈಲಿಯಲ್ಲಿ ಜೋಡಿಗಳ ವಿವಾಹ ನೆರವೇರಲಿದೆ. 
ವರ್ಷದ ಬಹುನಿರೀಕ್ಷಿತ ಈ ವಿವಾಹ ಸಂಭ್ರಮದಲ್ಲಿ ಉಭಯ ಕುಟುಂಬ ಸದಸ್ಯರು, ನಟ ಶಾರುಖ್ ಖಾನ್, ನಿರ್ದೇಶಕಿ ಫರ್ಹಾಖಾನ್, ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಸೇರಿದಂತೆ ಕೆಲವೇ ಕೆಲವು ಆಪ್ತರಿಗೆ ಆಮಂತ್ರಣ ನೀಡಲಾಗಿದೆ. 
ವಿವಾಹ ಕಾರ್ಯಕ್ರಮವು 700 ವರ್ಷ ಇತೀಹಾಸ ಹೊಂದಿರುವ ವಿಲ್ಲಾ ಡೆಲ್ ಬಾಲ್ ಬಿಯಾನೆಲ್ಲೋದಲ್ಲಿ ನಡೆಯಲಿದೆ. ಅಲ್ಲಿಗೆ, ಆಹ್ವಾನಿತರು ತಾವು ಉಳಿದುಕೊಂಡಿರುವ ಸಮೀಪದ ರೆಸಾರ್ಟ್ ನಿಂದ ಯಾಚ್ ನಲ್ಲಿ ಆಗಮಿಸಲಿದ್ದಾರೆ. ಆದರೆ, ವರ ರಣವೀರ್ ಮತ್ತು ಅವರ ಕುಟುಂಬ ಸದಸ್ಯರು ಮಾತ್ರ ಸಮುದ್ರ ವಿಮಾನದಲ್ಲಿ ಆಗಮಿಸಿ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆಂದು ಹೇಳಲಾಗುತ್ತಿದೆ. 
ಆಹ್ವಾನಿತರಿಗೆ ಕೊಮೊ ಸರೋವರದ ತೀರದಲ್ಲೇ ಇರುವ ರೆಸಾರ್ಟ್'ನ 75 ಕೊಠಡಿಗಳನ್ನು ವಾರದ ಅವಧಿಗೆ ಪೂರ್ಣವಾಗಿ ಬುಕ್ ಮಾಡಲಾಗಿದ್ದು, ಎಲ್ಲರೂ ಅಲ್ಲಿಯೇ ತಂಗಿದ್ದಾರೆ. 
ವಿವಾಹದ ಹಿನ್ನಲೆಯಲ್ಲಿ ಆಹ್ವಾನಿತರ ಮೊಬೈಲ್'ಗೆ ವಿಶೇಷ ಆಮಂತ್ರಣ ಪತ್ರಿಕೆ ರವಾನಿಸಲಾಗಿದೆ. ಇದರೊಳಗೆ ಕ್ಯು ಆರ್ ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡಿದ ಬಳಿಕವೇ ಎಲ್ಲರಿಗೂ ವಿವಾಹ ಸ್ಥಳಕ್ಕೆ ತೆರಳು ಅವಕಾಶ ನೀಡಲಾಗುತ್ತದೆ. 
ಉತ್ತರ ಇಟಲಿಯ ಕೊಮೊ ಸರೋವರ ತೀರದಲ್ಲಿರುವ ವಿಲ್ಲಾ ಡೆಲ್ ಬಾಲ್ ಬಿಯಾನೆಲ್ಲೋ ಒಂದು ಖಾಸಗಿ ಕಟ್ಟಡವಾಗಿದೆ. 700 ವರ್ಷ ಇತಿಹಾಸ ಹೊಂದಿರುವ ಈ ಐತಿಹಾಸಿಕ ಹಾಗೂ ಸುಂದರ ಕಟ್ಟಡದೊಳಗೆ ಕುಳಿತರೆ, ಸರೋವರ, ಸುತ್ತಲಿನ ಸುಂದರ ಪರಿಸರವನ್ನು ಆಸ್ವಾದಿಸಬಹುದಾಗಿದೆ. ವಿಲ್ಲಾ ಡೆಲ್ ನಲ್ಲಿ ಕಾರ್ಯಕ್ರಮ ಆಯೋಜನೆಗೆ ಮೂಲ ಶುಲ್ಕವಾಗಿ ರೂ.8 ಲಕ್ಷ ಪಾವತಿ ಮಾಡಬೇಕು. ಆದರೆ, ಕಾರ್ಯಕ್ರಮಕ್ಕೆ ಗರಿಷ್ಠ 80 ಜನರನ್ನು ಆಹ್ವಾನಿಸಬಹುದು. 
ಬೆಂಗಳೂರಿನಲ್ಲಿ ಔತಣ
ಕುಟುಂಬ ಸದಸ್ಯರಿಗಾಗಿ ದೀಪಿಕಾ ಕುಟುಂಬ ನ.21 ರಂದು ಬೆಂಗಳೂರಿನ ಹೋಟೆಲ್ ಲೀಲಾ ಪ್ಯಾಲೆಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದೆ. 
ಇನ್ನು ಮದುವೆ ದಿಬ್ಬಣಕ್ಕಾಗಿ ವಿಶೇಷ ಕೇಕ್ ತಯಾರಿಸಲು ಸ್ವಿಜರ್ ಲೆಂಡ್ ನಿಂದ ವಿಶೇಷ ಬಾಣಿಸಿಗರನ್ನು ಕರೆಸಲಾಗಿದೆ. ಇದೇ ವೇಳೆ ತಮ್ಮ ವಿವಾಹಕ್ಕೆ ಉಡುಗೊರೆ ನೀಡಬಯಸುವವರು ದತ್ತಿ ಸಂಸ್ಥೆಗಳಿಗೆ ದಾನ ಮಾಡಬಹುದು ಎಂದು ದೀಪಿಕಾ-ರಣವೀರ್ ದಂಪತಿ ಕೋರಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ