ಬಾಲಿವುಡ್

ಯುದ್ಧ ವೀರರ 'ಕಳೆದುಹೋದ ಕಥೆ'ಗಳನ್ನು ಹೇಳಲು ಬಾಲಿವುಡ್ ಗೆ ಮಾಜಿ ಸೇನಾಧಿಕಾರಿ ಎಂಟ್ರಿ

Lingaraj Badiger
ಜೈಪುರ್: ಜನಸಾಮಾನ್ಯರಿಗೆ ವೀರ ಯೋಧರ ಕಳೆದುಹೋದ ಕಥೆಗಳನ್ನು ಪೂರೈಸುವುದಕ್ಕಾಗಿ ಮಾಜಿ ಸೇನಾಧಿಕಾರಿಯೊಬ್ಬರು ಒಂದು ನಿರ್ಮಾಣ ಸಂಸ್ಥೆಯೊಂದಿಗೆ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.
ಭಾರತೀಯ ಸೇನೆಯಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿದ ಮಾಜಿ ಎನ್ ಎಸ್ ಜಿ ಕಮಾಂಡೊ ಲಕ್ಷನ್ ಸಿಂಗ್ ಬಿಷ್ಟ್ ಅವರು, 1915ರಲ್ಲಿ ನಡೆದ ಮೊದಲ ವಿಶ್ವ ಸಮರದ ಹೀರೋ, ಹುತಾತ್ಮ ಗಬ್ಬರ್ ಸಿಂಗ್ ನೇಗಿ ಅವರ ಜೀವನ ಆಧಾರಿತ ಚಿತ್ರ ನಿರ್ಮಿಸಲು ಸಿದ್ಧರಾಗಿದ್ದಾರೆ.
ಯುದ್ಧದಲ್ಲಿ ಅಸಾಧಾರಣ ಶೌರ್ಯ ತೋರಿದ್ದ ತೆಹ್ರಿ ಜಿಲ್ಲೆಯ ಘರ್ವಾಲ್ ನಿವಾಸಿ, 19 ವರ್ಷದ ಗಬ್ಬರ್ ಸಿಂಗ್ ನೇಗಿ ಸೇವೆಯನ್ನು ಪರಿಗಣಿಸಿ ಬ್ರಿಟಿಷರ ಅತ್ಯುನ್ನತ ಗೌರವವಾದ ವಿಕ್ಟೋರಿಯಾ ಕ್ರಾಸ್ ಅನ್ನು ಮರಣೋತ್ತರವಾಗಿ ನೀಡಲಾಗಿತ್ತು ಎಂದು ಬಿಷ್ಟ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಘರ್ವಾಲ್ ರೈಫಲ್ಸ್ ನ ನೇತೃತ್ವ ವಹಿಸಿದ್ದ ನೇಗಿ, ಬ್ರಿಟಿಷರ ಅತ್ಯುನ್ನತ ಗೌರವ ಪಡೆದ ಅತ್ಯಂತ ಕಿರಿಯ ಯೋಧ ಎಂಬ ಗೌರವಕ್ಕೆ ಪಾತ್ರವಾಗಿದ್ದರು.
ನೇಗಿ ಜೀವನ ಕುರಿತ ಚಿತ್ರ ನಿರ್ಮಿಸಿಲು ನಾನು ಅವರ ಕುಟುಂಬದಿಂದ ಅನುಮತಿ ಪಡೆದಿದ್ದೇನೆ. ಈ ಚಿತ್ರವನ್ನು ಆಗಸ್ಟ್ 2020ರಲ್ಲಿ ಬಿಡುಗಡೆ ಮಾಡುವುದಾಗಿ ಬಿಷ್ಟ್ ಅವರು ತಿಳಿಸಿದ್ದಾರೆ. 
SCROLL FOR NEXT