ಬಾಲಿವುಡ್

ತಂದೆ ಆಗ್ತಿದ್ದಾರಾ ವಿರಾಟ್ ಕೊಹ್ಲಿ? ನಟಿ ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್!

Vishwanath S
ಮುಂಬೈ: ಟೀಂ ಇಂಡಿಯಾ ವಿರಾಟ್ ಕೊಹ್ಲಿ ತಂದೆ ಆಗುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಬೇಬಿ ಬಂಪ್ ಫೋಟೋ ವೈರಲ್ ಆಗಿದ್ದು ವಿರುಷ್ಕಾ ನಿಜವಾಗಿಯೂ ತಂದೆ-ತಾಯಿ ಆಗುತ್ತಿದ್ದಾರಾ ಎಂಬ ಕುತೂಹಲ ಎಲ್ಲರಿಗೂ ಮೂಡಿದೆ. 
ಸಾಮಾಜಿಕ ಜಾಲತಾಣದಲ್ಲಿ ನಟಿ ಅನುಷ್ಕಾ ಶರ್ಮಾ ಅವರ ಒಂದು ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅನುಷ್ಕಾ ಗರ್ಭಿಣಿ ರೀತಿ ಕಾಣಿಸುತ್ತಿದೆ. ಹಾಗಾಗಿ ಅಭಿಮಾನಿಗಳು ವಿರುಷ್ಕಾ ತಂದೆ-ತಾಯಿ ಆಗುತ್ತಿದ್ದಾರೆ ಎಂದು ಖುಷಿಯಲ್ಲಿದ್ದಾರೆ. 
ವಿರುಷ್ಕಾ ಜೋಡಿ ಕಳೆದ ವರ್ಷ ಡಿಸೆಂಬರ್ 11ರಂದು ಇಟಲಿಯ ಟಸ್ಕನಿ ನಗರದ ಬೋಗೋ ಫಿನೊಕಿಯೆಟೊ ಎಂಬ ದುಬಾರಿ ರೆಸಾರ್ಟ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
SCROLL FOR NEXT