ಮುಂಬೈ: ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಮೊಹಮ್ಮದ್ ಅಜೀಜ್ ಮಂಗಳವಾರ ಹೃದಯಾಘಾತದಿಂದ ನಿಧನರಾದರು.ಅವರಿಗೆ 64ವರ್ಷ ವಯಸ್ಸಾಗಿತ್ತು.
ಅಜೀಜ್ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಹಿಂದಿ, ಬಂಗಾಳಿ ಮತ್ತು ಓರಿಯಾ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಸೇವೆ ಸಲ್ಲಿಸಿದ್ದ ಅಜೀಜ್ ಪಶ್ಚಿಮ ಬಂಗಾಳದ ಅಶೋಕ ನಗರದಲ್ಲಿ 1954ರಲ್ಲಿ ಜನಿಸಿದ್ದರು. ಬೆಂಗಾಲಿ ಚಿತ್ರ ಜ್ಯೋತಿ ಯಿಂದ ಹಿನ್ನಲೆ ಗಾಯಕನಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದ ಇವರು ಮುಂಬೈಗೆ ಆಗಮಿಸಿ ಅಂಬರ್ (1984) ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದರು.
"ಮೋರ್ದ್" ((1985) ಚಿತ್ರದ "ಮೋರ್ದ್ ತಂಗೇವಾಲ..." ಗೀತೆಯು ಅಜೀಜ್ ಅವರಿಗೆ ಸಾಕಶ್ಃಟು ಹೆಸರು ತಂದುಕೊಟ್ಟಿತ್ತು.ಮಹಮ್ಮದ್ ರಫಿ ಅವರ ಅಭಿಮಾನಿಯಾಗಿದ್ದ ಅಜೀಜ್ ಬಾಲಿವುಡ್ ನ ಪ್ರಮುಖ ಹಿನ್ನೆಲೆ ಸಂಗೀತಗಾರರಾಗಿದ್ದ ಕಲ್ಯಾಣ್ ಜಿ-ಆನಂದ್ ಜಿ, ರಾಜೇಶ್ ರೋಷನ್, ನದೀಮ್ ಸರವಣ್ ಸೇರಿ ಅನೇಕರೊಡನೆ ಕೆಲಸ ಮಾಡಿದ್ದರು.
ಇಂದು ಮುಂಬೈನಲ್ಲಿ ಕಾರ್ಯಕ್ರಮವೊಂದನ್ನು ನೀಡುವ ಉದ್ದೇಸದಿಂದ ಕೋಲ್ಕತ್ತಾದಿಂದ ಆಗಮಿಸುತ್ತಿದ್ದ ಅಜೀಜ್ ಅವರಿಗೆ ವಿಮಾನ ಏರುವ ವೇಳೆಗೇ ಆರೋಗ್ಯ ಹದಗೆಟ್ಟಿತ್ತು. ವಿಮಾನ ಇಳಿದು ಕ್ಯಾಬ್ ಹತ್ತುವಾಗಲೂ ಅವರು ತನ್ನ ದೇಹಸ್ಥಿತಿ ಸರಿಯಾಗಿಲ್ಲ ಎನ್ನುವುದನ್ನು ಕ್ಯಾಬ್ ಡ್ರೈವರ್ ಗೆ ಹೇಳಿದ್ದರು.
ಮೃತ ಗಾಯಕನ ಅಂತ್ಯ ಸಂಸ್ಕಾರ ಮುಂಬೈನಲ್ಲಿ ಬುಧವಾರ ನಡೆಯಲಿದೆ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.