ನಾನಾ ಪಟೇಕರ್, ತನುಶ್ರೀ ದತ್ 
ಬಾಲಿವುಡ್

ತನುಶ್ರೀ ಪ್ರಕರಣ ಅಪ್ರಸ್ತುತ: ಈಗ ಸಹಾಯ ಮಾಡಲಾಗದು: ಕಲಾವಿದರ ಸಂಘ

ನಾನಾ ಪಟೇಕರ್ ವಿರುದ್ಧ ತನುಶ್ರೀ ದತ್ ಅವರ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಅಪ್ರಸ್ತುತ ಎಂದು ಸಿನಿಮಾ ಮತ್ತು ಟಿವಿ ಕಲಾವಿದರ ಸಂಘ ಹೇಳಿದ್ದು, ನಾನಾ ಪಟೇಕರ್ ಅವರಿಗೆ ಬೆಂಬಲ ಸೂಚಿಸಿದೆ.

ಮುಂಬೈ: ನಾನಾ ಪಟೇಕರ್ ವಿರುದ್ಧ  ತನುಶ್ರೀ ದತ್ ಅವರ ಲೈಂಗಿಕ ಕಿರುಕುಳ ಆರೋಪ  ಪ್ರಕರಣ ಅಪ್ರಸ್ತುತ ಎಂದು ಸಿನಿಮಾ ಮತ್ತು ಟಿವಿ ಕಲಾವಿದರ ಸಂಘ ಹೇಳಿದ್ದು, ನಾನಾ ಪಟೇಕರ್ ಅವರಿಗೆ ಬೆಂಬಲ ಸೂಚಿಸಿದೆ.

2008ರಲ್ಲಿ ಹಾರ್ನ್ ಓಕೆ ಪ್ಲೀಸಸ್  ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಾನಾ ಪಟೇಕರ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು  ತನುಶ್ರೀ ದತ್  ಆರೋಪಿಸಿದ್ದರು. ಈ ಸಂಬಂಧ   ದಶಕದ ಹಿಂದೆಯೇ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘದಲ್ಲಿ ದೂರು  ದಾಖಲಿಸಿದ್ದಾಗಿ ಹೇಳಿಕೆ ನೀಡಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿರುವ ಕಲಾವಿದರ ಸಂಘ, 2008ರಲ್ಲಿಯೇ ದೂರು ದಾಖಲಾಗಿದ್ದರೆ ಕಲಾವಿದರು ಹಾಗೂ  ನಿರ್ಮಾಪಕರ ಸಮಿತಿ ಸಮಸ್ಯೆ ಪರಿಹರಿಸಬಹುದಿತ್ತು. ಆದರೆ. 2008 ರ ಪ್ರಕರಣ ಈಗ ಅಪ್ರಸ್ತುತ ಎಂದು ಕಲಾವಿದರ ಸಂಘ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಅಪರಾಧವಾಗಿದ್ದು, ಅದನ್ನು  ಸಹಿಸಿಕೊಳ್ಳಲು ಆಗುವುದಿಲ್ಲ  ಎಂದಿರುವ  ಕಲಾವಿದರ ಸಂಘ ಮೂರು ವರ್ಷಕ್ಕಿಂತ ಮೇಲ್ಪಟ್ಟ ಪ್ರಕರಣದ ವಿಚಾರಣೆ ನಡೆಸಲು ತಮ್ಮಗೆ ಅಧಿಕಾರವಿಲ್ಲ ಎಂದು ಹೇಳಿದೆ.

 ಆದಾಗ್ಯೂ, ತನುಶ್ರೀ ದತ್ ಅವರ ಹೇಳಿಕೆ ಬಗ್ಗೆ ತ್ವರಿತವಾಗಿ ವಿಚಾರಣೆ ನಡೆಸಿ ನ್ಯಾಯ ಒದಗಸಿಬಹುದು . ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ಗಮನಕ್ಕೆ ತರುವಂತೆ ಸದಸ್ಯರಿಗೆ ಸೂಚನೆ ನೀಡಲಾಗಿದೆ.ಉತ್ತಮ ಕೆಲಸದ ಪರಿಸ್ಥಿತಿ ವಾತಾವರಣ ನಿಟ್ಟಿನಲ್ಲಿ ಬದ್ಧವಾಗಿದ್ದು, ಅಂತಹವರಿಗೆ ನೈತಿಕ ಹಾಗೂ ಕಾನೂನಾತ್ಮಕ ಆತ್ಮಸ್ಥೈರ್ಯ ಮೂಡಿಸುವುದಾಗಿ ಕಲಾವಿದರ ಸಂಘ ಹೇಳಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT