ಮುಂಬೈ: ಬಾಲಿವುಡ್ ನಟಿ ಕನ್ನಡತಿ ಶಿಲ್ಪಾ ಶೆಟ್ಟಿ ಅವರು ತಮ್ಮ ಜೊತೆ ಪ್ರೀತಿಯ ನಾಯಕವಾಡಿ ಕೈಕೊಟ್ಟ ಹುಡುಗನ ಕುರಿತು ಬಹಿರಂಗಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಶಿಲ್ಪಾ ಶೆಟ್ಟಿ ಅವರು ಕೇವಲ ಬೆಟ್ಟಿಂಗ್ಗಾಗಿ ಯುವಕನೊಬ್ಬ ನನ್ನೊಂದಿಗೆ ಸಂಬಂಧ ಬೆಳೆಸಿದ್ದ ಎಂಬ ವಿಷಯವನ್ನು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ನನ್ನೊಂದಿಗೆ ಸಂಬಂಧ ಬೆಳೆಸುವಂತೆ ಹುಡುಗನೊಬ್ಬನಿಗೆ ನನ್ನ ಸ್ನೇಹಿತೆಯರು ಬೆಟ್ಟಿಂಗ್ ಮಾಡಿದ್ದರು. ಆತ ನನ್ನೊಂದಿಗೆ ಸಲುಗೆಯಿಂದ ವರ್ತಿಸಲು ಶುರು ಮಾಡಿದ. ನಂತರ ಅದು ನಿಜವಾದ ಪ್ರೀತಿಗೆ ತಿರುಗಿತ್ತು. ಆದರೆ ಕೊನೆಯಲ್ಲಿ ಬೆಟ್ಟಿಂಗ್ ನಲ್ಲಿ ಗೆಲ್ಲುವ ಉದ್ದೇಶದಿಂದ ಸಂಬಂಧ ಬೆಳೆಸಿದೆ ಎಂದು ಹೇಳುವ ಮೂಲಕ ಹುಡುಗ ಪ್ರೀತಿಗೆ ಕೊನೆಯಾಡಿದ ಎಂದರು.
ಆತನ ಮಾತುಗಳು ಕೇಳಿ ನಾನು ಖಿನ್ನತೆಗೆ ಒಳಗಾದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಆ ಕ್ಷಣ ನಾನು ಹೃದಯಾಘಾತಕ್ಕೆ ಒಳಗಾದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ನನ್ನ ಬಾಳಲ್ಲಿ ರಾಜ್ ಕುಂದ್ರಾ ಬಂದರು. ಅವರನ್ನು ಮದುವೆಯಾಗಿ ನಾನು ಸಂತೋಷದಿಂದಿದ್ದೇನೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.