ಕಂಗನಾ ರಾನೌತ್, ವಿಕಾಸ್ ಬಹ್ಲ್ 
ಬಾಲಿವುಡ್

'ಕ್ವೀನ್' ನಿರ್ದೇಶಕನ ವಿರುದ್ಧ ಮತ್ತೊಬ್ಬ ನಟಿ ಆರೋಪ: ಆಕೆಯನ್ನು ಸಂಪೂರ್ಣ ನಂಬುತ್ತೇನೆ ಎಂದ ಕಂಗನಾ

ಕ್ವೀನ್ ನಿರ್ದೇಶಕ ವಿಕಾಸ್ ಬಹ್ಲ್ ಕೂಡಾ ಅನೇಕ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಅಂತಹ ನಟಿಯರಿಗೆ ತಾನೂ ಬೆಂಬಲ ನೀಡಿರುವುದಾಗಿ ಕ್ವೀನ್ ಚಿತ್ರದ ನಟಿ ಕಂಗನಾ ರಾನೌತ್ ಹೇಳಿದ್ದಾರೆ.

ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಕ್ವೀನ್ ನಿರ್ದೇಶಕ ವಿಕಾಸ್ ಬಹ್ಲ್ ಕೂಡಾ ಅನೇಕ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.  ಅಂತಹ ನಟಿಯರಿಗೆ ತಾನೂ ಬೆಂಬಲ ನೀಡಿರುವುದಾಗಿ  ಕ್ವೀನ್ ಚಿತ್ರದ ನಟಿ  ಕಂಗನಾ ರಾನೌತ್ ಹೇಳಿದ್ದಾರೆ.

ಹೆಸರು ಹೇಳಲು ಇಚ್ಚಿಸದ ನಟಿಯೊಬ್ಬರು ಮಿಸ್ ಮಾಲಿನಿ ಸುದ್ದಿಸಂಸ್ಥೆ ಜೊತೆಗೆ ಮಾತನಾಡುತ್ತ, ವಿಕಾಸ್ ಉಪಾಯದಿಂದ ಬುಟ್ಟಿಗೆ ಹಾಕಿಕೊಳ್ಳುವ ಮನುಷ್ಯ ,ಅವನೊಂದಿಗೆ ಒಬ್ಬರೇ ಹೋಗುವುದು ಒಳಿತಲ್ಲ ಎಂಬುದನ್ನು ನಾನು ಯಾವಾಗಲೂ ಅರಿತಿದ್ದೆ. ಆದಾಗ್ಯೂ, 20 ಮಂದಿಯೊಂದಿಗೂ ಪಾರ್ಟಿಗೆ ಹೋಗಿದ್ದಾಗ. 47 ವರ್ಷದ ವಿಕಾಸ್  ಕಂಠಪೂರ್ತಿ ಕುಡಿದು, ತನ್ನ ತುಟಿಗೆ  ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದರು. ಆಗ ಆತನನ್ನು ತಳ್ಳಿ , ಕೂಡಲೇ ಆ ಪಾರ್ಟಿಯಿಂದ ಹೊರಬಂದಿದ್ದಾಗಿ ಹೇಳಿದ್ದಾರೆ.

ಆ ನಟಿಯ ಪರ ಮಾತನಾಡುವ ಕಂಗನಾ, ಆಕೆಯನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ, ವಿಕಾಸ್ ಬಹ್ಲ್    2014ರ ಹಿಂದೆಯೇ ವಿವಾಹವಾಗಿದ್ದರೂ  ಕ್ವೀನ್ ಚಿತ್ರದ  ಚಿತ್ರೀಕರಣ ಸಂದರ್ಭದಲ್ಲಿ ಪ್ರತಿಯೊಂದು ದಿನವೊ ಹೊಸ ಪಾರ್ಟನರ್ ಜೊತೆಗೆ ಲೈಂಗಿಕತೆ ಹೊಂದುತ್ತಿದ್ದರು.  ವಿವಾಹದ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ. ವ್ಯಸನವೇ ಅನಾರೋಗ್ಯವಾದರೆ ಏನು ಹೇಳುತ್ತೀರಾ ಎಂದು ಕೇಳಿದ್ದಾರೆ.

ಕ್ಲೀನ್ ಚಿತ್ರದ ಚಿತ್ರೀಕರಣ ವೇಳೆಯಲ್ಲಿ ವಿಕಾಸ್ ಬಹ್ಲ್ ಜೊತೆ ಆದ ಅನುಭವಗಳನ್ನು ಕಂಗನಾ ರಾನೌತ್  ಹಂಚಿಕೊಂಡಿದ್ದಾರೆ.  ಇಡೀ ರಾತ್ರಿ ಪಾರ್ಟಿ ಮಾಡುತ್ತಿದ್ದರಿಂದ ಬೇಗ ಮಲಗಲು ಆಗುತ್ತಿರಲಿಲ್ಲ ಹಾಗೂ ಶಾಂತವಾಗಿ ಇರಲು ಆಗುತ್ತಿರಲಿಲ್ಲ. ಹಲವಾರು ಸಂದರ್ಭಗಳಲ್ಲಿ ವಿಕಾಸ್ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಅವರು ನನ್ನನ್ನು ಬಿಗಿದಪ್ಪಿ, ನನ್ನ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸಿದ್ಧಾರೆ  ವಿಕಾಸ್ ಮುಜುಗರದ ನಡೆಯಿಂದ  ತಪ್ಪಿಸಿಕೊಂಡು   ಹೊರಬರಲು ನನಗೆ ಹೆಚ್ಚಿನ ಶಕ್ತಿ ಮತ್ತು ಪ್ರಯತ್ನ ಪಡಬೇಕಾಗಿತ್ತು ಎಂದು ಎಂದು ಕಂಗನಾ ಆರೋಪಿಸಿದ್ದಾರೆ.

ವಿಕಾಸ್ ಬಹ್ಲ್ ನಿಂದ ಅನ್ಯಾಯಕ್ಕೊಳಗಾದ  ಯುವತಿಯರಿಗೆ  ನೆರವು ನಿಟ್ಟಿನಲ್ಲಿ ಕೆಲ ಚಿತ್ರಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಕಂಗನಾ ಹೇಳಿದ್ದಾರೆ. ಶಕ್ತಿ ಇಲ್ಲದ ಪುರುಷರು ಅಭಿಮಾನ ಆರಂಭಿಸುವುದಿಲ್ಲ ಎಂದು ಅವರು ದಾಳಿ ನಡೆಸಿದ್ದು,  ನಾವು ಇದನ್ನ ಮಾಡಬೇಕು ಅಥವಾ ಮಾಡದೆ ಇರಬಹುದು. ಸಮಾಜದಲ್ಲಿ ಸುಮ್ಮನೆ ಕುಳಿತಿದ್ದರೆ ಏನೂ ಮಾಡಲು ಆಗುವುದಿಲ್ಲ. ಪ್ರಾಮಾಣಿಕತೆಯಿಂದ ಆತ್ಮಸ್ಱೈರ್ಯದಿಂದ ಮುನ್ನುಗಬೇಕು,

ಆಯ್ದ ಆಕ್ರೋಶ ಮಾತ್ರ ಮನರಂಜನೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಕೇವಲ ಟ್ಯಾಬ್ಲಾಯ್ಡ್ ಗಾಸಿಪ್ ಮತ್ತು ಮತ್ತೇನಲ್ಲ ಎಂದು ಕಂಗನಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT