ಬಾಲಿವುಡ್

ಹಸ್ತ ಮೈಥುನ ದೃಶ್ಯದ ಕುರಿತು ನನ್ನ ಕೇಳಿ, ನನ್ನ ತಂದೆಯನ್ನಲ್ಲ: ಟ್ರಾಲ್ ಮಾಡಿದವರಿಗೆ ತಿರುಗೇಟು ನೀಡಿದ ನಟಿ ಸ್ವರಾ ಭಾಸ್ಕರ್

Srinivasamurthy VN
ಮುಂಬೈ: ಹಸ್ತ ಮೈಥುನ ದೃಶ್ಯದ ಕುರಿತು ನನ್ನ ಕೇಳಿ, ನನ್ನ ತಂದೆಯನ್ನಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ಕಾಲೆಳೆಯಲು ಬಂದವನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ಹೇಳಿಕೆಗಳಿಂದಲೇ ಹೆಸರಾದವರು. ಈ ಹಿಂದೆ ಕಾಸ್ಟಿಂಗ್ ಕೌಚ್ ಕುರಿತು ಹೇಳಿಕೆ ನೀಡಿ ಸುದ್ದಿಯಾಗಿದ್ದ ಸ್ವರಾ ಇದೀಗ ಹಸ್ತಮೈಥುನ ದೃಶ್ಯದ ಕುರಿತು ತಮ್ಮ ಕಾಲೆಳೆಯಲು ಬಂದವನಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಬಾಲಿವುಡ್​ ಸಿನಿಮಾ ‘ವೀರೆ ದಿ ವೆಡ್ಡಿಂಗ್’​ ಚಿತ್ರದ ನಟಿ ಸ್ವರಾ ಭಾಸ್ಕರ್​ ಅವರ ಫೋಟೋವೊಂದನ್ನು ಅಪ್​ಲೋಡಿ ಮಾಡಿ ಟ್ರಾಲ್ ಮಾಡುತ್ತಿದ್ದವರಿಗೆ ಅವರದೇ ಧಾಟಿಯಲ್ಲಿ ಸ್ವರಾ ಉತ್ತರಿಸಿದ್ದಾರೆ.
ಮಾಜಿ ಕೊಮೊಡೊರ್ ಹಾಗೂ ಭಾರತದ ಭದ್ರತೆ ಮತ್ತು ಕಾರ್ಯತಂತ್ರ ವ್ಯವಹಾರಗಳ ಬಗೆಗಿನ ಪ್ರಮುಖ ತಜ್ಞರು ಕೂಡ ಆಗಿರುವ ನಟಿ ಸ್ವರಾ ಭಾಸ್ಕರ್​ ಅವರ ತಂದೆ ಚಿತ್ರಾಪು ಉದಯ್ ಭಾಸ್ಕರ್ ಅವರು ಸೆಕ್ಷನ್​ 377 ಮೇಲಿನ ಸುಪ್ರೀಂ ಕೋರ್ಟ್​ ತೀರ್ಪನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದರು. ಅಲ್ಲದೆ, ಎಲ್ ಜಿಬಿಟಿ ತೀರ್ಮಾನಕ್ಕೆ ಸಂಬಂಧಿಸಿದಂತೆ 'ಸಂವಿಧಾನಾತ್ಮಕ ನೈತಿಕತೆ' ಬಗ್ಗೆ ವಕೀಲೆ ಮೇನಕಾ ಗುರುಸ್ವಾಮಿ ಅವರಿಗಿದ್ದ ಅರಿವಿನ ಬಗ್ಗೆ ಶ್ಲಾಘಿಸಿ ಟ್ವೀಟ್​ ಮಾಡಿದ್ದರು.
ಇದನ್ನೆ ಬಂಡವಾಳ ಮಾಡಿಕೊಂಡ ಕೆಲವು ನೆಟ್ಟಿಗರು ನಟಿ ಸ್ವರಾ ಅವರ ಹಸ್ತಮೈಥುನ ದೃಶ್ಯದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿ, ಯಾರವಳು? ಅವಳು ಏನು ಮಾಡುತ್ತಿದ್ದಾಳೆ ಸರ್, ನಿಜಕ್ಕೂ ನಾನು ಗೊಂದಲಕ್ಕೀಡಾಗಿದ್ದೇನೆ. ನಿಜವಾಗಿಯೂ ನಾನು ಸ್ವರಾ ಅವರ ದೊಡ್ಡ ಅಭಿಮಾನಿ ಎಂದೆಲ್ಲಾ ವ್ಯಂಗ್ಯವಾಡಿದ್ದಾರೆ. ಅಲ್ಲದೆ ನಿನ್ನನ್ನು ನೋಡಿ ನಿಮ್ಮ ತಂದೆ ಈಗ ಹೆಮ್ಮೆ ಪಡುತ್ತಾರೆ. ಹೆಮ್ಮೆಯ ತಂದೆಗೆ ಹೆಮ್ಮೆಯ ಮಗಳು, ಧನ್ಯವಾದಗಳು ಸ್ವರಾ ಎಂದೆಲ್ಲ ಕಮೆಂಟ್​ ಮಾಡಿದ್ದಾರೆ. 
ಇದಕ್ಕೆ ಸಿಡಿಮಿಡಿಗೊಂಡಿರುವ ಸ್ವರಾ ಅವರು ತಮ್ಮ ಟ್ವಿಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಾನೊಬ್ಬ ಕಲಾವಿದೆ. ನಾನು ಹಸ್ತಮೈಥುನ ಸಾಧನವನ್ನು ಬಳಸಿಕೊಳ್ಳುತ್ತಿರುವ ರೀತಿ ನಟನೆ ಮಾಡಿದ್ದೇನಷ್ಟೆ. ಮುಂದಿನ ಬಾರಿ ಏನೇ ಕೇಳುವುದಾದರೆ ನೇರವಾಗಿ ನನ್ನನ್ನೆ ಕೇಳಿ. ನನ್ನ ತಂದೆಯನ್ನು ಕೇಳಬೇಕಾದ ಅವಶ್ಯಕತೆಯಿಲ್ಲ. ನಿಮ್ಮ ಹೆಸರಿನಲ್ಲಿರುವ ವೀರ್​ ಎಂಬ ಪದವನ್ನು ಬಿಟ್ಟುಬಿಡಿ. ಇಂತಹ ಕೆಳಮಟ್ಟದ ತಂತ್ರಗಳಿಂದ ಹಿರಿಯ ವ್ಯಕ್ತಿಗಳನ್ನು ಅವಮಾನಿಸುವುದು ನಾಚಿಕೆಗೇಡಿನ ಸಂಗತಿ ಎಂದು ಸ್ವರಾ ಕಿಡಿಕಾರಿದ್ದಾರೆ. ಸ್ವರಾ ಅವರ ಟ್ವೀಟ್ ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.
SCROLL FOR NEXT