ದೇಶದಾದ್ಯಂತ ವಿನಾಯಕ ಚೌತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಇನ್ನು ಬಾಲಿವುಡ್ ಮಂದಿ ಸಹ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿ ಭಾವದಿಂದ ಪೂಜಿಸಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್, ಅಲ್ವೀರಾ, ಅರ್ಬಾಜ್ ಖಾನ್, ಸೊಹೈಲ್ ಖಾನ್, ಆಯೂಶ್ ಶರ್ಮಾ ಮತ್ತು ಕತ್ರಿನಾ ಕೈಫ್ ಸೇರಿದಂತೆ ಹಲವರು ವಿನಾಯಕನಿಗೆ ಆರತಿ ಮಾಡಿದ್ದರು. ಇದನ್ನು ವಿಡಿಯೋ ಮಾಡಿದ್ದ ಸಲ್ಮಾನ್ ಖಾನ್ ಭಾಮೈದ ಅತುಲ್ ಅಗ್ನಿಹೋತ್ರಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಕೆಲ ವೊತ್ತಿನಲ್ಲಿ ಅತುಲ್ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.
ಕಾರಣ ಕತ್ರಿನಾ ಕೈಫ್ ಆರತಿ ಮಾಡುವಾಗ ವಿನಾಯಕನಿಗೆ ಉಲ್ಟ ಆರತಿ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿತ್ತು. ಇದನ್ನು ಕಂಡ ನೆಟಿಗರು ಕೈಫ್ ರನ್ನು ಟ್ರೋಲ್ ಮಾಡಿದ್ದಾರೆ.
ಕತ್ರಿನಾ ಕೈಫ್ ರನ್ನು ನೆಟಿಗರು ಕೆಟ್ಟದಾಗಿ ನಿಂದಿಸುತ್ತಾ ಶಾಸ್ತ್ರ, ಸಂಪ್ರದಾಯ ತಿಳಿದವರು ಅನಗತ್ಯವಾಗಿ ಯಾಕೆ ಇಂತಹ ಆಚರಣೆಗಳನ್ನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.