ಬಾಲಿವುಡ್

ಅಪರೂಪದ ಕ್ಯಾನ್ಸರ್ ಚಿಕಿತ್ಸೆ ಪಡೆದು ವರ್ಷದ ಬಳಿಕ ಮುಂಬೈಗೆ ಆಗಮಿಸಿದ ಇರ್ಫಾನ್ ಖಾನ್

Raghavendra Adiga
ಮುಂಬೈ: ಅನಾರೋಗ್ಯದ ಕಾರಣ ಸುಮಾರು ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ನಟ ಇರ್ಫಾನ್ ಖಾನ್ ಈಗ ತಾನು ಚೇತರಿಸಿಕೊಂಡಿರುವುದಾಗಿ ಹೇಳಿದ್ದಾರೆ. ನ್ಯೂರೋಎಂಡೋಕ್ರೈನ್ ಗೆಡ್ಡೆಯಾಗಿದ್ದು ಇದಕ್ಕಾಗಿ ಚಿಕಿತ್ಸೆ ಪಡೆದುಕೊಂಡಿದ್ದ ನಟ ತನ್ನ ಅನಾರೋಗ್ಯದ ದಿನಗಳಲ್ಲಿ ಬೆಂಬಲಕ್ಕೆ ನಿಂತ ಅಭಿಮಾನಿ ಬಳಗಕ್ಕೆ ಕೃತಜ್ಞತೆ ಹೇಳಿದ್ದಾರೆ.ಒಂದು ದಿನದ ಹಿಂದೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ತಾವು ಭಾವಚಿತ್ರ ತೆಗೆಸಿಕೊಂಡಿರುವ ನಟ ತಾವು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾಗಿ ಟ್ವಿಟ್ಟರ್ ಮೂಲಕ ದೃಢಪಡಿಸಿದ್ದಾರೆ.
"ಗೆಲುವಿನ ಅನ್ವೇಷಣೆಯ ನಡುವೆ ನಮ್ಮ ಆರೋಗ್ಯ, ದೌರ್ಬಲ್ಯಗಳನ್ನೇಲ್ಲಾ ನಾವು ಮರೆತುಬಿಡುತ್ತೇವೆ ಎನಿಸುತ್ತಿದೆ, ನನ್ನ ಜೀವನದಲ್ಲಿ ಮ್ಮ ಅಪಾರ ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದಾಗಿ  ನಾನು ಕೃತಜ್ಞರಾಗಿರಲು ಬಯಸುತ್ತೇನೆ, ನನ್ನ ಚಿಕಿತ್ಸೆ ಪ್ರಕ್ರಿಯೆಯಲ್ಲಿ ನನ್ನನ್ನು ಬೆಂಬಲಿಸಿದ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು." ನಟ ಹೇಳಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ  ನಟ ಮೊದಲ ಬಾರಿಗೆ ತನ್ನ ಆರೋಗ್ಯದ ಕುರಿತು ಮಾರ್ಚ್ 5, 2018 ರಂದು ಮಾತನಾಡಿ ತಾನು ಅಪರೂಪದ ರೋಗ" ದಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಆದರೆ ಆಗ ತಮಗೆ ಯಾವ ಖಾಯಿಲೆ ಇದೆ ಎನ್ನುವುದನ್ನು ಅವರು ಹೇಳಿರಲಿಲ್ಲ. ಆ ಮುಂದಿನ ದಿನಗಳಲ್ಲಿ ನ್ಯೂರೋಎಂಡೋಕ್ರೈನ್ ಗೆಡ್ಡೆ (ಅಪರೂಪದ ಕ್ಯಾನ್ಸರ್ ರೋಗ) ದಿಂದ ನಟ ಬಳಲುತ್ತಿದ್ದಾರೆ ಎನುವುದು ಖಾತರಿಯಾಗಿತ್ತು. 
ಕ್ಯಾನ್ಸರ್ ಚಿಕಿತ್ಸೆಗಾಗಿ ನಟ ವಿದೇಶಕ್ಕೆ ಸಹ ತೆರಳಿದ್ದರು. ದೀಪಾವಳಿ ನಂತರದಲ್ಲಿ ನಟ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಹಿಂದಿರುಗುತ್ತಾರೆ ಎಂದು ಅವರ ವಕ್ತಾರರೊಬ್ಬರು ಮಾಹಿತಿ ನೀಡಿದ್ದರು.
SCROLL FOR NEXT