ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ "ಪಿಎಂ ನರೇಂದ್ರ ಮೋದಿ" ಬಿಡುಗಡೆಯ ಬಗ್ಗೆ ಚುನಾವಣಾ ಆಯೋಗದ ನಿಷೇಧವನ್ನು ಪ್ರಶ್ನಿಸಿರುವ ಅರ್ಜಿಯನ್ನು ಎಪ್ರಿಲ್ 15 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಒಪ್ಪಿದೆ.
ಮುಖ್ಯ ನ್ಯಾಯಾಧೀಶರು ನೇತೃತ್ವದ ಪೀಠವು ಚಿತ್ರ ನಿರ್ಮಾಪಕರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸಮ್ಮತಿಸಿದೆ.
ಬುಧವಾರ ಚುನಾವಣಾ ಆಯೋಗ "ಯಾವುದೇ ರಾಜಕೀಯ ವ್ಯಕ್ತಿಗೆ ಸಂಬಂಧಿಸಿ ಚಿತ್ರಗಳನ್ನು ವಿದ್ಯುನ್ಮಾನ ಮಾದ್ಯಮಗಳಲ್ಲಿ ಪ್ರದರ್ಶಿಸುವಂತಿಲ್ಲ," ಎಂಬ ಮೂಲಕ ಚಿತ್ರ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ನಿಷೇಧ ಹೇರಿತ್ತು.
ಇದಕ್ಕೆ ಮುನ್ನ ಮೋದಿಯವರ ಜೀವನಾಧಾರಿತ ಚಿತ್ರ ಬಿಡುಗಡೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ್ದ ವಿಪಕ್ಷಗಳ ಅರ್ಜಿಯನು ಕೋರ್ಟ್ ವಜಾಗೊಳಿಲ್ಸಿತ್ತು. ಈ ನಿರ್ಧಾರವನ್ನು ಚುನಾವಣಾ ಆಯೋಗವೇ ಕೈಗೊಳ್ಲಲಿದೆ ಎಂದು ನ್ಯಾಯಾಲಯ ಹೇಳಿತ್ತು.
ಸೆನ್ಸಾರ್ ಮಂಡಳಿ ಮಂಗಳವಾರ ಸಂಜೆ "ಪಿಎಂ ನರೇಂದ್ರ ಮೋದಿ" ಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಿದೆ.