ಪ್ರಿಯಾ ಆನಂದ್ 
ಬಾಲಿವುಡ್

ಪ್ರಿಯಾ ಆನಂದ್ ಜೊತೆ ನಟಿಸಿದವರು ದುರದೃಷ್ಟವಂತರು ಎಂದು ಹೇಳಿದವನಿಗೆ ನಟಿ ಕೊಟ್ಟ ಉತ್ತರವೇನು?

ಕನ್ನಡದಲ್ಲಿ 'ರಾಜಕುಮಾರ', 'ಆರೆಂಜ್' ಸಿನಿಮಾಗಳಲ್ಲಿ ಅಭಿನಯಿಸಿರುವ ತಾರೆ ಪ್ರಿಯಾ ಆನಂದ್ ಜೊತೆ ...

ಮುಂಬೈ: ಕನ್ನಡದಲ್ಲಿ 'ರಾಜಕುಮಾರ', 'ಆರೆಂಜ್' ಸಿನಿಮಾಗಳಲ್ಲಿ ಅಭಿನಯಿಸಿರುವ ತಾರೆ ಪ್ರಿಯಾ ಆನಂದ್ ಜೊತೆ ನಟಿಸಿದವರು ದುರಾದೃಷ್ಟವಂತರು ಎಂದು ಟ್ವಿಟ್ಟರ್ ನಲ್ಲಿ ಹೇಳಿ ಅದಕ್ಕೆ ಸೂಕ್ತವಾಗಿ ಪ್ರಿಯಾ ಆನಂದ್ ಟ್ವೀಟ್ ನಲ್ಲಿ ಉತ್ತರ ಕೊಟ್ಟಿರುವುದು ಇದೀಗ ಭಾರೀ ಸುದ್ದಿಯಾಗಿದೆ.
'ಇಂಗ್ಲಿಷ್ ವಿಂಗ್ಲಿಷ್' ಸಿನಿಮಾದಲ್ಲಿ ಶ್ರೀದೇವಿ ಜತೆಗೆ ಪ್ರಿಯಾ ಆನಂದ್ ನಟಿಸಿದ್ದಾರೆ. ಕಳೆದ ವರ್ಷ ಶ್ರೀದೇವಿ ಅಕಾಲಿಕ ನಿಧನ ಹೊಂದಿದರು. ಇತ್ತೀಚೆಗೆ 'ಎಲ್‌ಕೆಜಿ' ಸಿನಿಮಾದಲ್ಲಿ ಪ್ರಿಯಾ ಆನಂದ್ ಜತೆಗೆ ನಟಿಸಿದ ಸಹ ನಟ ಜೆಕೆ ರಿತೀಶ್  ಈ ತಿಂಗಳ ಆರಂಭದಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಅವರು ಅಪಶಕುನ ಇದ್ದಂತೆ. ಅವರ ಜತೆಗೆ ನಟಿಸಿದವರು ಮೃತ ಹೊಂದುತ್ತಾರೆ ಎಂದು ಆನಲಗನ್ ಎಂಬುವವನು ಟ್ವೀಟ್ ಮಾಡಿದ್ದನು.
ಇದನ್ನು ನೋಡಿದ ಪ್ರಿಯಾ ಆ ಟ್ವಿಟ್ ಮಾಡಿದರಿಗೆ ಪ್ರಿಯಾ ಆನಂದ್ ಸರಿಯಾಗಿ ಉತ್ತರ ನೀಡಿದ್ದಾರೆ"ನಿನ್ನಂತಹ ವ್ಯಕ್ತಿಗಳ ಮಾತುಗಳಿಗೆ ಸಾಮಾನ್ಯವಾಗಿ ನಾನು ಪ್ರತಿಕ್ರಿಯಿಸಲು ಹೋಗಲ್ಲ. ಆದರೆ ನಿನ್ನ ಹೇಳಿಕೆ ಕಠಿಣವಾದದ್ದು ಎಂದು ನಿನಗೆ ತಿಳಿಸಲು ಪ್ರತಿಕ್ರಿಯಿಸುತ್ತಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಹೇಳಿಕೆಗಳನ್ನು ನೋಡಿ ಮೌನವಾಗಿ ಇರುವುದು ಸುಲಭ. ಆದರೆ ನಿನ್ನ ಮಾತಿನ ಮೂಲಕ ಜನ ಎಷ್ಟೆಲ್ಲಾ ಆತಂಕಕ್ಕೆ ಒಳಗಾಗುತ್ತಾರೆ ಎಂಬುದನ್ನು ಮೊದಲು ತಿಳಿದುಕೋ. ಇಂತಹ ಟ್ವೀಟ್‍ಗಳನ್ನು ಮಾಡುವ ಮುನ್ನ ಒಂದು ನಿಮಿಷ ಆಲೋಚಿಸು. ದಯೆ, ಮಾನವೀಯತೆಯಿಂದ ಆಲೋಚಿಸು" ಎಂದು ಪ್ರಿಯಾ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT