ಬಾಲಿವುಡ್

ಖ್ಯಾತ ನಟ ಆರ್.ಮಾಧವನ್ ಮಾಡಿದ ಒಂದು ಟ್ವೀಟ್ ಗೆ ಭಾರೀ ಟೀಕೆ! 

Sumana Upadhyaya

ಚೆನ್ನೈ: ಖ್ಯಾತ ನಟ ಆರ್ ಮಾಧವನ್ ರಕ್ಷಾ ಬಂಧನ ದಿನವಾದ ನಿನ್ನೆ ಟ್ವಿಟ್ಟರ್ ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದರು. ಅದೀಗ ಭಾರೀ ಸದ್ದು ಮಾಡಿದೆ.


ಚಿತ್ರದಲ್ಲಿ ಮಾಧವನ್ ಮತ್ತು ಅವರ ಪುತ್ರ ಬ್ರಾಹ್ಮಣರ ಪವಿತ್ರ ಸಂಪ್ರದಾಯವಾದ ಜನಿವಾರ ಧರಿಸಿದ್ದಾರೆ. ಅವರ ಪುತ್ರ ಪುತ್ರಿಯ ಅನುಪಸ್ಥಿತಿಯಲ್ಲಿ ಮಾಧವನ್ ಕೈಗೆ ರಕ್ಷಾ ಬಂಧನದ ಪ್ರಯುಕ್ತ ರಾಖಿ ಕಟ್ಟುವ ಚಿತ್ರವನ್ನು ಶೇರ್ ಮಾಡಿದ್ದಾರೆ.


ಫೋಟೋ ಶೇರ್ ಮಾಡಿ ಕೆಲವೇ ಹೊತ್ತಿನಲ್ಲಿ ಇದು ಟ್ರೋಲ್ ಆಗಿದೆ. ಎಡಪಂಥೀಯರು, ಉದಾರವಾದಿಗಳೆಂದು ಕರೆಸಿಕೊಂಡವರಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಮಾಧವನ್ ಅವರು ತಮ್ಮ ಪೂರ್ವಜರ ಸಂಪ್ರದಾಯವಾದ ಜನಿವಾರವನ್ನು ಧರಿಸಿದ ಫೋಟೋ ಹಾಕುವ ಮೂಲಕ ಜಾತೀಯತೆ ಮನೋಧರ್ಮವನ್ನು ಪ್ರದರ್ಶಿಸಿದ್ದಾರೆ ಎಂದು ತರಹೇವಾರಿಯಲ್ಲಿ ಟೀಕಿಸಿದ್ದಾರೆ.
ರಕ್ಷಾ ಬಂಧನ ದಿನವಾದ ನಿನ್ನೆ ಬ್ರಾಹ್ಮಣರು ಯಜ್ಞೋಪವೀತವಾಗಿ, ತಮಿಳಿನಲ್ಲಿ ಪೂನಲ್ ಎಂದು ಕರೆಯುವ ಹೊಸ ಜನಿವಾರವನ್ನು ಧರಿಸುವ ಸಂಪ್ರದಾಯವಿದೆ. 


ಆದರೆ ಉದಾರವಾದಿಗಳ ವಲಯಗಳಲ್ಲಿ, ವಿಶೇಷವಾಗಿ ದ್ರಾವಿಡ ರಾಜಕಾರಣದಲ್ಲಿ ಪೂನಲ್ ಅನ್ನು ನರಮೇಧ ಮತ್ತು ದಬ್ಬಾಳಿಕೆಯ ಸಂಕೇತವಾಗಿ ನೋಡುತ್ತಾರೆ. ಇದನ್ನು ಜಾತಿವಾದದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಒಂದು ನಿರ್ದಿಷ್ಟ ಹಿಂದೂಗಳ ಸಂಪ್ರದಾಯವಾಗಿದೆ. 


ಈ ಹಿಂದೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರವನ್ನು ಬೆಂಬಲಿಸಿ ಮತದಾರರಲ್ಲಿ ಮತ ಚಲಾಯಿಸಿ ಎಂದು ಕರೆ ನೀಡಿ ಮಾಡಿದ್ದ ಟ್ವೀಟ್ ಕೂಡ ಟೀಕೆಗೆ ಗುರಿಯಾಗಿತ್ತು.

SCROLL FOR NEXT