ಮುಂಬೈ: ಇದು ಹಲವು ವರ್ಷಗಳ ಹಿಂದಿನ ಕಥೆ, ಆಗಿನ ಗೃಹಸಚಿವರಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅಂದಿನ ಟಾಪ್ ಬಾಲಿವುಡ್ ತಾರೆ ಮೀನಾಕುಮಾರಿಯವರನ್ನು ಗುರುತಿಸಲು ವಿಫಲರಾಗಿದ್ದ ಕಥೆ. ಮೀನಾಕುಮಾರಿ ಕಾರ್ಯಕ್ರಮವೊಂದರಲ್ಲಿ ಶಾಸ್ತ್ರಿ ಅವರಿಗೆ ಹಾರ ಹಾಕುವಾಗ ಶಾಸ್ತ್ರಿ ತಮ್ಮ ಪಕ್ಕ ಕುಳಿತಿದ್ದ ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ ಅವರನ್ನು "ಈ ಮಹಿಳೆ ಯಾರು?" ಎಂದು ಕೇಳಿದ್ದರು!
ಅಂದು ಮುಂಬೈ ಫಿಲ್ಮ್ ಸ್ಟುಡಿಯೋದಲ್ಲಿ ಪಕಿಝಾ ಅವರ ಚಿತ್ರವೊಂಡರ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನೂ ಆಹ್ವಾನಿಸಲಾಗಿತ್ತು.ಪಕೀಝಾ ಅವರ ಚಿತ್ರಕ್ಕೆ ಮೀನಾಕುಮಾರಿ ನಾಯಕಿಯಾಗಿದ್ದರು. ಆ ಕಾರ್ಯಕರಮಕ್ಕೆ ಹಾಜರಾಗುವಂತೆ ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶಾಸ್ತ್ರಿ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಶಾಸ್ತ್ರಿ ಕಾರ್ಯಕ್ರಮಕ್ಕೆ ಹಾಜರಾದದ್ದೇನೋ ಸರಿ ಅವರಿಗೆ ಅಂದಿನ ದಿನದ ಟಾಪ್ ಹೀರೋಯಿನ್ ಆಗಿದ್ದ ಮೀನಾಕುಮಾರಿ ಬಗೆಗೆ ಏನೂ ತಿಳಿದಿರಲಿಲ್ಲ.ಹಾಗಾಗಿ ಅವರು ನಯ್ಯರ್ ಬಳಿ "ಈಕೆ ಯಾರು?" ಎಂದು ಕೇಳಿದ್ದರು. ಈ ಕಾರ್ಯಕ್ರಮದಲ್ಲಿ ಸಿನಿಮಾ ರಂಗದ ಅತಿ ಮುಖ್ಯ ಗಣ್ಯರು ಹಾಜರಿದ್ದರು.
ಕುಲದೀಪ್ ನಯ್ಯರ್ ತಾವು ಕೊನೆಯುಸಿರೆಳೆಯುವ ಕೆಲವೇ ವಾರಗಳ ಮುನ್ನ ಅವರ ಹೊಸ ಪುಸ್ತಕ "On Leaders and Icons: From Jinnah to Modi" ನಲ್ಲಿ ದಾಖಲಾದ ಘಟನೆ ಇದು.
'ಹಲವು ಉನ್ನತ ನಟ, ನಟಿಯರು ಉಪಸ್ಥಿತರಿದ್ದರು. ಆಗ ಮೀನಾಕುಮಾರಿ ಶಾಸ್ತ್ರಿ ಅವರಿಗೆ ಹಾರ ಹಾಕಿ ಅಭಿನಂದಿಸಿದ್ದರು. ಜೋರಾದ ಚಪ್ಪ್ಳೆಯ ಸದ್ದಿನ ನಡುವೆ ಶಾಸ್ತ್ರಿ ನನ್ನ ಬಳಿ ತಮ್ಮ ಮೆಲುದನಿಯಲ್ಲಿ ಕೇಏಳಿದ್ದರು -ಈ ಮಹಿಳೆ ಯಾರು? ನಾನು ಮೀನಾಕುಮಾರಿ ಎಂದು ಉತ್ತರಿಸಿದೆ. ನನಗೆ ಅಚ್ಚರಿಯಾಗಿತ್ತು. ಆದರೆ ಶಾಸ್ತ್ರಿ ಮಾತ್ರ ಆಕೆ ಕುರಿತು ಅಷ್ಟೇನೂ ಕುತೂಹಲ ತೋರದೆ ನಿರ್ಲಕ್ಷಿಸಿದರು.ಆದರೆ ಶಾಸ್ತ್ರಿ ಅವರಂತಹಾ ವ್ಯಕ್ತಿ ಇಂತಹಾ ವರ್ತನೆ ತೋರಿದ್ದು, ಮತ್ತು ನಾನು ಇದನ್ನೆಂದೂ ನಿರೀಕ್ಷಿಸಿರಲಿಲ್ಲ. ನಯ್ಯರ್ ಬರೆದಿದ್ದಾರೆ.
ಆದಾಗ್ಯೂ, ಅವರು ಶಾಸ್ತ್ರಿ ಅವರ ಮುಗ್ಧತೆ ಮತ್ತು ಪ್ರಾಮಾಣಿಕತೆಯನ್ನು ಹೊಗಳಿದ್ದಾರೆ.
ಆ ಸಮಯ ಶಾಸ್ತ್ರಿ ತಾವು ಸಕ್ಷಿಪ್ತ ಭಾಷಣವನ್ನೂ ಮಾಡಿದ್ದರು.ಆ ಭಾಷಣದಲ್ಲಿ ಅವರು ಮೀನಾಕುಮಾರಿ ಅವರ ಕ್ಷಮೆ ಯಾಚಿಸಿದ್ದರು."ಮೀನಾಕುಮಾರಿ ಅವರೇ, ದಯವಿಟ್ಟು ನನ್ನನ್ನು ಕ್ಷಮಿಸಿ, ನಾನು ದಲ ಬಾರಿಗೆ ನಿನ್ನ ಹೆಸರನ್ನು ಕೇಳುತ್ತಿದ್ದೇನೆ." ಶಾಸ್ತ್ರಿ ಹೀಗೆ ಹೇಳುವಾಗ ಹಿಂದಿ ಸಿನೆಮಾದ ಪ್ರಸಿದ್ಧ ಸೌಂದರ್ಯ ರಾಣಿ, ದೇಶದಾದ್ಯಂತ ಲಕ್ಷಾಂತರ ಮಂದಿಯ ಹೃದಯ ಗೆದ್ದಿದ್ದ ರೂಪಸಿ ಮುಂಭಾಗದ ಸಾಲಿನಲ್ಲಿ ನಿಷ್ಕಪಟ ನೋಟ ಬೀರುತ್ತಾ ಕುಳಿತಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಶಾಸ್ತ್ರಿ ಅವರನ್ನು ಚಿತ್ರೀಕರಣದ ಸ್ಟುಡಿಯೋವನ್ನು ತೋರಿಸಲಾಗಿತ್ತು. ಆದರೆ ಇದು ಅವರ ಪಾಲಿಗೆ ನಿತ್ಯದ ವ್ಯಾಯಾಮವಾಗಿತ್ತು ಎಂದು ಕಾಣುತ್ತದೆ. ಏಕೆಂಡರೆ ಅವರು ತಮ್ಮ ಭಾಷಣದಲ್ಲಿ ಈ ಸ್ಟುಡಿಯೋ ಬಗ್ಗೆ ಏನೊಂದು ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ.
ಕಮಲ್ ಅಮ್ರೋಹಿ ನಿರ್ದೇಶಿಸಿದ ಈ ಚಿತ್ರದಲ್ಲಿ ಮೀನಾಕುಮಾರಿ ಮಾತ್ರವಲ್ಲದೆ ರಾಜ್ ಕುಮಾರ್, ಅಶೋಕ್ ಕುಮಾರ್ ಮತ್ತು ನದಿರಾ ಸಹ ನಟಿಸಿದ್ದರು. ಈ ಚಿತ್ರ 1972ರಲ್ಲಿ ತೆರೆ ಕಂಡಿತ್ತು.
ಸ್ಪೀಕಿಂಗ್ ಟೈಗರ್ಸ್ ಪ್ರಕಟಿಸಿರುವ ಈ ಪುಸ್ತಕದಲ್ಲಿ ನಯ್ಯರ್ ತಾವು ಕಂಡ ಸ್ವಾತಂತ್ರ ಪೂರ್ವ, ಸ್ವಾತಂತ್ರೋತ್ತರ ಭಾರತದ ಅನೇಕ ಪುರುಷ ಹಾಗೂ ಮಹಿಳಾ ಐಕಾನ್ ಗಳನ್ನು ಕುರಿತು ಬರೆದಿದ್ದಾರೆ. ಈ ಪುಸ್ತಕದಲ್ಲಿ ಅಂತಹಾ ವ್ಯಕ್ತಿಗಳ ಅನೇಕ ಅಜ್ಞಾತ ಅಂಶಗಳಿದೆಯಲ್ಲದೆ ಅನೇಕ ಪ್ರಮುಖ ಘಟನೆಗಳ ಮೇಲೆ ಬೆಳಕು ಚೆಲ್ಲುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos