ಮಧುಬಾಲಾ ಅವರಿಗೆ ಗೂಗಲ್ ಡೂಡಲ್ ಗೌರವ
ನವದೆಹಲಿ: ಬಾಲಿವುಡ್ ನ ಎವರ್ ಗ್ರೀನ್ ನಾಯಕ ನಟಿ, 'ಅನಾರ್ಕಲಿ' ಖ್ಯಾತಿಯ ಮಧುಬಾಲಾ ಅವರ 86ನೇ ಜನ್ಮ ದಿನಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಉಡುಗೊರೆ ನೀಡಿದೆ.
ಗೂಗಲ್ ತನ್ನ ವಿಶೇಷವಾದ ಡೂಡಲ್ ಮೂಲಕ ಮಧುಬಾಲಾ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ. ಹಿಂದಿ ಚಿತ್ರರಂಗದ ಹಳೆಯ ನಾಯಕಿಯರಲ್ಲಿ ಮಧುಬಾಲಾ ಅಪ್ರತಿಮ ಸುಂದರಿ ಎಂದೇ ಖ್ಯಾತಿ ಗಳಿಸಿದ್ದಾರೆ.
1933ರ ಫೆಬ್ರವರಿ 14 ರಂದು ದೆಹಲಿಯಲ್ಲಿ ಜನಿಸಿದ್ದ ಮಧುಬಾಲ, 1942ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದರು. 'ಬರ್‌ಸಾತ್ ಕಿ ರಾತ್', 'ಮೊಘಲ್ ಏ ಅಜಂ' ನಂತಹ ಅನೇಕ ಚಿತ್ರಗಳಲ್ಲಿ ನಟಿಸಿ, ಹಿಂದಿ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದ ನಟಿ ಮಧುಬಾಲಾ. ಅಪ್ರತಿಮ ಸುಂದರಿಯಾಗಿಯೂ ಮಧುಬಾಲಾ ಸಿನಿ ರಸಿಕರ ಮನಗೆದ್ದಿದ್ದರು. ತಮ್ಮ ಮೋಹಕ ನೋಟ, ನಟನಾ ಸಾಮರ್ಥ್ಯ, ನೃತ್ಯದಿಂದ 1942ರಿಂದ 1962ರವರೆಗೆ ಬಹುಬೇಡಿಕೆಯ ನಟಿಯಾಗಿ ಜಗತ್ತಿನ ಗಮನ ಸೆಳೆದವರು ಇವರು.
ಕಡಿಮೆ ಅವಧಿಯಲ್ಲಿಯೇ ಮಿಂಚಿದ ಮಧುಬಾಲಾ ಸಣ್ಣ ವಯಸ್ಸಲ್ಲೇ ಸಾವನ್ನಪ್ಪಿದ್ದು ದುರಂತ. 36ರ ಹರೆಯದಲ್ಲಿ ಸಾವನ್ನಪ್ಪಿದ ಮಧುಬಾಲಾ, ‘ಚಲ್ತಿ ಕಾ ನಾಮ್ ಗಾಡಿ’, ಮುಘಲ್ ಎ ಆಜಮ್’ನಂತಹ ಚಿತ್ರಗಳಿಂದ ಬೆಳ್ಳಿತೆರೆಯಲ್ಲಿ ಇತಿಹಾಸ ಬರೆದವರು. 1969 ಫೆಬ್ರವರಿ 23 ರಂದು ಮುಂಬೈನಲ್ಲಿ ಮಧುಬಾಲ ಅಕಾಲಿಕ ಮರಣವನ್ನಪ್ಪಿದ್ದರು.
2017ರ ಆಗಸ್ಟ್‌ನಲ್ಲಿ ದೆಹಲಿಯ ಮೇಡಮ್ ಟುಸ್ಸಾಡ್ಸ್‌ನಲ್ಲಿ ಮಧುಬಾಲಾರ ಮೇಣದ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos