ಬಾಲಿವುಡ್

ಬಾಲಿವುಡ್ ನಂತರ ಹಾಲಿವುಡ್‌ಗೆ ಹಾರಿದ ಕಾಜಲ್ ಅಗರವಾಲ್, ಭಾರೀ ಬಜೆಟ್ ಚಿತ್ರ ಯಾವುದು ಗೊತ್ತ?

Vishwanath S
ತೆಲುಗಿನ ಮಗಧೀರ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಬಹುಭಾಷ ನಟಿ ಕಾಜಲ್ ಅಗರವಾಲ್ ಇದೀಗ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.
ತೆಲುಗು, ತಮಿಳು ಚಿತ್ರಗಳಲ್ಲಿ ಮಿಂಚು ಹರಿಸಿದ್ದ ಕಾಜಲ್ ನಂತರ ಕ್ಯೂ ಹೋ ಗಯಾ ನಾ ಚಿತ್ರದ ಮೂಲಕ ಬಾಲಿವುಡ್ ಗೂ ಪ್ರವೇಶಿಸಿದ್ದರು. ಇದೀಗ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದಾರೆ. 
ತೆಲುಗಿನ ನಟ ವಿಷ್ಣು ಮಂಜು ಈ ಚಿತ್ರದಲ್ಲಿ ನಟಿಸುತ್ತಿದ್ದು ಇಂಗ್ಲೀಷ್ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಸದ್ಯ ಕಥೆ ಕೇಳಿ ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. 
SCROLL FOR NEXT